ಧಾರವಾಡ –
ಒಂದು ಕಡೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊರಾಟ ನಡೆಯುತ್ತಿದೆ. ಇನ್ನೂ ಇತ್ತ ಹುಬ್ಬಳ್ಳಿ ಧಾರವಾಡದಲ್ಲಿ ಈ ಒಂದು ಕಾಯಿದೆ ಕುರಿತು ಸದ್ದಿಲ್ಲದೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಜಾಗೃತಿ ಕಾರ್ಯಕ್ರಮ ನಡೆಯುತ್ತದೆ.
ಹೌದು ಧಾರವಾಡ ಹಿತರಕ್ಷಣಾ ವೇದಿಕೆಯಿಂದ ಇಂಥದೊಂದು ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದು ನಡೆಯುತ್ತಿದೆ.ಬಿಜೆಪಿ ಪಕ್ಷದ ಯುವ ಮುಖಂಡ ಪ್ರಮೋದ್ ಕಾರಕುನ ಜಾಗೃತಿ ಮೂಡಿಸುತ್ತಿದ್ದಾರೆ.
ಧಾರವಾಡದ ಲೈನ ಬಜಾರ ರಾಮ ಮಂದಿರದಿಂದ ನವನಗರದ ವರೆಗೂ ಬಿ.ಜೆ.ಪಿ ನೇತೃತ್ವದ ಕೇಂದ್ರ ಸರಕಾರ ಕೃಷಿ ಕಾಯ್ದೆ ಹಾಗೂ ರಾಜ್ಯದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ – 2020 ರ ಬಗ್ಗ ರೈತರಲ್ಲಿ ಹಾಗೂ ಜನರಲ್ಲಿ ಪಾದಯಾತ್ರೆ ಮುಖಾಂತರ ಜಾಗೃತಿ ಕಾರ್ಯಕ್ರಮ ಮಾಡಿದರು
ಪ್ರಮೋದ ಕಾರಕುನ ಅವರೊಂದಿಗೆ ಉಮೇಶ್ ಕೊಲಕರ, ಮಲ್ಲಿಕಾರ್ಜುನ ದೊಡಮನಿ, ಮಲ್ಲಿಕಾರ್ಜುನ ಬಸ್ತವಾಡೆ, ಸುಜಯ ಕುರ್ತಕೋಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.