ಧಾರವಾಡ –
ಧಾರವಾಡ ನಗರದ ಡಿಪೋ ವೃತ್ತದಲ್ಲಿ ನಿನ್ನೆ ನಡೆದ ಕೊಲೆ ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿ ಪೊಲೀಸರಿಗೆ ಶರಣಾಗಿದ್ದಾರೆ. ಮನೆಯೊಂದರಲ್ಲಿ ನಡೆದ ಜಗಳದಲ್ಲಿ ಆಕಾಶ್ ಕೊಟೂರ ಅವನನ್ನು ಅವರ ಚಿಕ್ಕಪ್ಪ ಪ್ರಕಾಶ್ ಕೊಟಿಉರ ಕೊಲೆ ಮಾಡಿದ್ದರು.

ಆಕಾಶ ಕೋಟೂರ (26) ಕೊಲೆಯಾದ ಯುವಕ ನಾಗಿದ್ದನು. ಯುವಕನ ಚಿಕ್ಕಪ್ಪ ಪ್ರಕಾಶ ಕೋಟೂರ ಎಂಬಾತ ಕೊಲೆ ಮಾಡಿದ್ದನು. ಆಕಾಶ ಆಗಾಗ ಮನೆಯಲ್ಲಿ ಮದ್ಯ ಸೇವನೆ ಮಾಡಿ ಬಂದು ಕಿರಿಕಿರಿ ಮಾಡುತ್ತಿದ್ದ. ಅದೇ ರೀತಿ ಭಾನುವಾರವೂ ಮದ್ಯ ಸೇವನೆ ಮಾಡಿ ಬಂದು ಮನೆಯಲ್ಲಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪ್ರಕಾಶ, ಆಕಾಶ ತಲೆಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಆಕಾಶ ಸ್ಥಳದಲ್ಲೇ ಮೃತಪಟ್ಟಿದ್ದನು.

ಘಟನೆ ಮಾಹಿತಿ ತಿಳಿದ ಉಪನಗರ ಇನ್ಸ್ಪೆಕ್ಟರ್ ಪ್ರಮೋದ ಯಲಿಗಾರ,ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಮತ್ತು ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಡರಾತ್ರಿವರೆಗೂ ಆರೋಪಿ ಹುಡುಕಾಡಿ. ಮುರುಘಾಮಠದಲ್ಲಿ ಮಲಗಿದ್ದ ಆರೋಪಿ ಬೆಳಗಿನ ಜಾವ ತಾನೇ ಬಂದು ಶರಣಾಗಿದ್ದಾರೆ.

ಸಧ್ಯ ಆರೋಪಿ ಉಪನಗರ ಪೊಲೀಸ್ ಠಾಣೆಯಲ್ಲಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
