ಧಾರವಾಡ –
ಗುಪ್ಕಾರ್ ಗ್ಯಾಂಗ್ ನ ದೇಶದ್ರೋಹಿ ಚಟುವಟಿಕೆ ಕುರಿತಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಹದ್ರೋಹಿ ಚಟಿವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ. ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಆರೋಪಿಸಿದರು. ಧಾರವಾಡದಲ್ಲಿ ಗ್ರಾಮೀಣ ಶಾಸಕ ಅಮೃತ ದೇಸಾಯಿ ಎರಡು ವರ್ಷದ ಸಾಧನೆ ಪುಸ್ತಕ ಬಿಡುಗಡೆಗೊಳಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟ ಪಡಿಸಬೇಕು. ಏ ರಿಸ್ತಾ ಕ್ಯಾ ಕೆಹಲಾತಾ ಹೈ ಹೇಳಬೇಕು. ತಾಯಿಗೆ ಆರಾಮ ಇಲ್ಲ ಅಂತಾ ರಾಹುಲ್ ಗೋವಾದಲ್ಲಿ ಕುಳಿತ್ತಿದ್ದಾರೆ. ಅಲ್ಲಿಂದ ಬಂದು ರಾಹುಲ್ ನಿಲುವು ಸ್ಪಷ್ಟಪಡಿಸಬೇಕು.ಗೋವಾ ಬಿಟ್ಟು ಬಂದು ಕಾಂಗ್ರೆಸ್ ಸಭೆ ಮಾಡಿ ನಿಲುವು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಇನ್ನೂ ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಗುಪ್ಕಾರ ಬಗ್ಗೆ ಮಾತನಾಡುತ್ತಿಲ್ಲ ಅವಾರ್ಡ್ ವಾಪಸ್ಸು ಗ್ಯಾಂಗ್ ಈ ಬಗ್ಗೆ ಹೇಳಲಿ ಆತ್ಮಸಾಕ್ಷಿ ಇದ್ದರೆ ಗುಪ್ಕಾರ್ ಗ್ಯಾಂಗ್ ಖಂಡಿಸಿ ಎಂದು ಒತ್ತಾಯಿಸಿದರು.ಈ ಬಗ್ಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಗುಪ್ಕಾರ್ ಗ್ಯಾಂಗ್ ಜೊತೆಗೆ ಜಮ್ಮು ಕಾಶ್ಮೀರ್ ರಾಜಕೀಯ ಪಕ್ಷಗಳು ಗುರುತಿಸಿಕೊಂಡಿವೆ. 370ನೇ ವಿಧಿಯನ್ನು ಮತ್ತೆ ಸ್ಥಾಪನೆ ಮಾಡುವುದು ಇವರೆಲ್ಲರ ಉದ್ದೇಶವಾಗಿದೆ ಎಂದು ದೂರಿದರು.ಇತ್ತ ಮತ್ತೊಂದೆಡೆ ಫಾರುಕ್ ಅಬ್ದುಲ್ಲಾ ಹಾಗೂ ಶೇಕ್ ಅಬ್ದುಲ್ಲಾ ಅವರು ಭಾರತದ ಹಿತವನ್ನು ಕಾಪಾಡಿಲ್ಲಾ ಜಮ್ಮು ಕಾಶ್ಮೀರದಲ್ಲಿ ನಾಯಕರುಗಳು ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡ್ತಾಯಿದ್ದಾರೆ. ಗಡಿ ಖ್ಯಾತೆ ತೆಗೆಯುವ ಚೀನಾದವರಿಗೆ ತಕ್ಕಪಾಠವನ್ನು ಮೋದಿ ಕಲಿಸುತ್ತಿದ್ದಾರೆ ಎಂದರು.

ದೇಶದ ಬಗ್ಗೆ ಆತ್ಮಾಭಿಮಾನ ಇದ್ದರೆ ಮೊದಲು ಅದನ್ನು ವಿರೋಧ ಮಾಡಿ ಎಂದು ದೇಶದಲ್ಲಿ ಪ್ರಶಸ್ತಿ ವಾಪಸ್ ಕೊಟ್ಟಿರುವವರಿಗೆ ಜೋಶಿ ಪ್ರಶ್ನಿಸಿದರು. ದೇಶವನ್ನು ಹಾಳು ಮಾಡುತ್ತಾ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಗುಪ್ಕಾರ್ ಜೊತೆಗೆ ಸೇರಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆಗಳು ಆಗುತ್ತಿವೆ. 130 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕೊಂದು ಹಾಕಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.ಇನ್ನೂ ದೆಹಲಿಯಲ್ಲಿ ರಮೇಶ ಜಾರಕಿಹೊಳಿ ಓಡಾಟ ವಿಚಾರಕ್ಕೆ ಮಾತನಾಡಿದ ಅವರು, ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು. ಆದರೆ ಕೇವಲ 3-4 ನೀರಾವರಿ ಯೋಜನೆ ಬಗ್ಗೆ ಮಾತನಾಡಲು ಬಂದಿದ್ದರು. ಯೋಜನೆಗಳಿಗೆ ಭಾರತ ಸರ್ಕಾರದ ಸಹಾಯ ಕೇಳಲು ಬಂದಿದ್ದರು. ಅಷ್ಟನ್ನೇ ನಾವು ಮಾಡಿದ್ದೇವೆ, ಉಳಿದಿದ್ದು ಗೊತ್ತಿಲ್ಲ ಜಾರಕಿಹೊಳಿ ಇನ್ನು ದೆಹಲಿಯಲ್ಲಿದಾರಂತೆ ನಾನು ಮೊನ್ನೆಯೇ ದೆಹಲಿ ಬಿಟ್ಟಿರುವೆ ಎಂದು ಸ್ಪಷ್ಟಪಡಿಸಿದರು.ಇನ್ನೂ ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಧಿಕಾರ ಇದೆ.

ಸಿಎಂ ಅವರು ಕೇಂದ್ರದ ವರಿಷ್ಠರನ್ನು ಭೇಟಿಯಾಗಿದ್ದಾರೆ. ವರಿಷ್ಠರು ಯಾವಾಗ ಹೇಳ್ತಾರೋ ಅವಾಗ ವಿಸ್ತರಣೆಯಾಗುತ್ತೆ. ಇದನ್ನು ಬಿಟ್ಟು ಹೆಚ್ಚಿಗೆ ಏನು ಹೇಳೊಲ್ಲಾ ವರಿಷ್ಠರನ್ನು ಕೇಳಿ ಸಂಪುಟ ವಿಸ್ತರಣೆ ಮಾಡುವ ಪರಂಪರೆ ನಮ್ಮಲ್ಲಿ ಮೊದಲಿನಿಂದಲೂ ಇದೆ ಎಂದರು