ಧಾರವಾಡ ದಲ್ಲಿ ಗ್ರಾಮ ಪಂಚಾಯತಿ ಗೆ ಕೆರೆ ಹಸ್ತಾಂತರ ಮಾಡಿದ ಶಾಸಕ ಅಮೃತ ದೇಸಾಯಿ – ಬಾಗಿನ ಅರ್ಪಣೆ…..

Suddi Sante Desk

ಧಾರವಾಡ –

ಕೆರೆಗಳು ಗ್ರಾಮೀಣ ಜನರ ಜೀವನಾಡಿ ಎಂದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಧಾರವಾಡ, ತೇಗೂರು ಡೊಮಗೆರೆ ಕೆರೆ ಅಭಿವೃದ್ಧಿ ಸಮಿತಿ ಹಾಗೂ ತೇಗೂರು ಗ್ರಾಪಂ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದ ತೇಗೂರಿನ ಡೊಮಗೆರೆ ಕೆರೆಯನ್ನು ಸೋಮವಾರ ಗ್ರಾಪಂಗೆ ಹಸ್ತಾಂತರಿಸಲಾಯಿತು.

ಇದೇ ವೇಳೆ ಶಾಸಕ ಅಮೃತ ದೇಸಾಯಿಯವರು ತುಂಬಿದ ಕೆರೆಗೆ ಬಾಗಿನ ಅರ್ಪಿಸಿದರು.ನಂತರ ಶಾಸಕ ಅಮೃತ ದೇಸಾಯಿಯವರು ಮಾತನಾಡಿ ಕೆರೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ. ಕೆರೆಗಳನ್ನು ಸ್ವಚ್ಛ ಹಾಗೂ ಶುದ್ಧವಾಗಿಟ್ಟು ಕೊಳ್ಳು ವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು

ಪ್ರತಿವರ್ಷಗಳು ಕೆರೆಯಲ್ಲಿ ತುಂಬುವ ಹೂಳನ್ನು ತೆಗೆಯುವ ಮೂಲಕ ಗ್ರಾಮಸ್ಥರೆ ಸ್ವಯಂ ಕೆರೆಗಳ ರಕ್ಷಣೆ ಮಾಡಿಕೊಳ್ಳಬೇಕು. ಕೆರೆಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿರುವ ಸೇವಾ ಕಾರ್ಯ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ಬಸಪ್ಪ ಕ. ಹುಲಮನಿ ಅಧ್ಯಕ್ಷರು, ಗ್ರಾ. ಪಂ. ತೇಗೂರ,ದುಗ್ಗೇ ಗೌಡ,ವಸಂತ ಆರ್ಕಾ ಕಾಲ,ಮಡಿವಾಳಪ್ಪ ಬೆಳವಲದ,ಶ್ರೀಮತಿ ಲೀಲಾವತಿ ಓಲೆಕಾರ, ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.