SSLC ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ಸನ್ಮಾನ…..

Suddi Sante Desk

ಧಾರವಾಡ –

SSLC ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಧಾರವಾಡದ ಪ್ರಜೆಂಟೇಶನ್ ಸ್ಕೂಲ್‌ನ ನಾಗಲಕ್ಷ್ಮೀ ಅಗಡಿ ವಿದ್ಯಾರ್ಥಿನಿ ಮನೆಗೆ ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದರು

ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಾಗಲಕ್ಷ್ಮೀ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಹಾಗೂ ಧಾರವಾಡಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ವಿದ್ಯಾಕಾಶಿಯ ಹಿರಿಮೆ ಹೆಚ್ಚಿಸಿದ್ದಾಳೆ ಎಂದು ಶಾಸಕರು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಈರಣ್ಣ ಹಪ್ಪಳಿ, ನಿತಿನ್ ಇಂಡಿ, ಸಿದ್ದು ಕಲ್ಯಾಣಶೆಟ್ಟಿ, ಜಗದೀಶ್ ಚಿಕ್ಕಮಠ, ಮುತ್ತು ಬನ್ನೂರ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.