ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಂಗಣದಲ್ಲಿ ಪ್ರತಿಭಟಿಸಲು ಶಿಕ್ಷಕರು ನಿರ್ಧಾರ – ಷಡಕ್ಷಾರಿ ಸಾರ್ ನೀವಾದರೂ ನೋಡಿ…..

Suddi Sante Desk

ಬೆಂಗಳೂರು –

ದಾವಣಗೆರೆ ಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ದಲ್ಲಿ ಪ್ರತಿಭಟನೆ ಮಾಡಲು ಶಿಕ್ಷಕರು ನಿರ್ಧಾರವನ್ನು ಮಾಡಿದ್ದಾರೆ.ಹೌದು ಕಳೆದ ಐದು ವರ್ಷಗಳಿಂದ ಶಿಕ್ಷಕರನ್ನು ಹಿಂಬಡ್ತಿ ಮಾಡಿದ್ದು ನಮಗೆಲ್ಲಾ ಅವಮಾನ ಈ ವಿಚಾರದಲ್ಲಿ ಶಿಕ್ಷಕರು ಸರ್ಕಾರಿ ನೌಕರರು ಎಂದು ಗೊತ್ತಿದ್ದರೂ ಶಿಕ್ಷಕರ ಈ ಹಿಂಬಡ್ತಿ ವಿಚಾರ ನೌಕರ ಸಂಘದ ಅಧ್ಯಕ್ಷರಾಧಿಯಾಗಿ ಎಲ್ಲರಿಗೂ ಗೊತ್ತಿದ್ದರೂ ಈ ಅನ್ಯಾಯವನ್ನು ಸರಿಪಡಿಸುವಂತಹ ಗಟ್ಟಿ ಧ್ವನಿಯನ್ನು ಪದವೀದರ ಹಿಂಬಡ್ತಿ ಶಿಕ್ಷಕರ ಪರವಾಗಿ ಮಾಡದೇ ಇರುವುದು ಶಿಕ್ಷಕರ ದುರ್ದೈವ ಇದನ್ನು ವಿರೋಧಿಸಲು ಈ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿ ಸುವ ಪದವೀಧರ ಹಿಂಬಡ್ತಿ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮ ಮತ್ತು ಆಟಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪ್ರತಿಭಟನೆಯನ್ನು ಈ ಮೂಲಕ ವ್ಯಕ್ತಪಡಿಸೋಣ.

ಎಲ್ಲಾ ರೀತಿಯಲ್ಲೂ ನಮ್ಮ ಶಿಕ್ಷಕರನ್ನು ಕಡೆಗಣಿಸುವವರಿಗೆ ಸರಿಯಾಗಿ ಪ್ರತಿಭಟನೆ ಮಾಡೋಣ ಹೀಗೆ ಸಂದೇಶ ವೊಂದು ಹರಿದಾಡುತ್ತಿದ್ದು ಇನ್ನಾದರೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಷಡಕ್ಷಾರಿ ಅವರು ಗಮನ ಹರಿಸಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.