ಧಾರವಾಡದವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಮೃತ ದೇಸಾಯಿ

Suddi Sante Desk

ಧಾರವಾಡ –

ಧಾರವಾಡದ.ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಾಗಾರಿಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು ವಾರ್ಡ್ ನಂಬರ್ 3 ಹಾಗೂ 7 ರಲ್ಲಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು

ವಾರ್ಡ್‌ ನಂಬರ್ 3 ರಲ್ಲಿ ಬರುವ ಮಂಗಳಗಟ್ಟಿ ಪ್ಲಾಟ್‌ನಲ್ಲಿ ಚರಂಡಿ ಹಾಗೂ ರಸ್ತೆ ಕಾಮಗಾರಿ ಕುಮಾರೇಶ್ವರನಗರದಲ್ಲಿ ಬರುವ ಒಳರಸ್ತೆಗಳು, ಉಪರಸ್ತೆಗಳು ಹಾಗೂ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಅಲ್ಲದೇ ವಾರ್ಡ್ ನಂಬರ್ 7 ರಲ್ಲಿ ಬರುವ ಜೈ ಜಿನೇಂದ್ರ ಕಾಲೊನಿ ರಸ್ತೆ ಅಭಿವೃದ್ಧಿ ಹಾಗೂ ಮಂಡ ಓಣಿಯಿಂದ ಹೊಸ ಓಣಿ ಸರ್ಕಲ್‌ವರೆಗೆ ತೆರೆದ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಈ ಒಂದು ಸಂದರ್ಭದಲ್ಲಿ ಸಂತೋಷ ದೇವರಡ್ಡಿ, ಹೇಮಂತ ನೀಲಣ್ಣವರ, ಅಶೋಕ ದೇಶಪಾಂಡೆ, ಮಾದು ಅಳಗವಾಡಿ, ಜಯತೀರ್ಥ ಮಳಗಿ,ಹರೀಶ ಬಿಜಾಪುರ,ರಾಕೇಶ್ ದೊಡಮನಿ,ಬಸವರಾಜ್ ರುದ್ರಾಪುರ ಸೇರಿದಂತೆ ಅನೇಕರು ಉಪಸ್ಥಿತರಿ ದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.