ವಾರ್ಡ್ 2 ರ BJP ಅಭ್ಯರ್ಥಿ ಪರ ಶಾಸಕ ಅಮೃತ ದೇಸಾಯಿ ಪ್ರಚಾರ ಮತಯಾಚನೆ ಮಾಡಿ ಗೆಲುವಿಗೆ ಕರೆ ನೀಡಿದ ಶಾಸಕರು…..

Suddi Sante Desk

ಧಾರವಾಡ –

ಧಾರವಾಡದ ವಾರ್ಡ್ 2 ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ನಿಂಗವ್ವ ಶಂಕರ ಹಾರಿಕೊಪ್ಪ ಪರ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪ್ರಚಾರ ಮಾಡಿದರು

ಮೊದಲು ವಾರ್ಡ್ ನಲ್ಲಿ ಪಕ್ಷದ ಪ್ರಮುಖರೊಂದಿಗೆ ಸಭೆ ಮಾಡಿದ ಶಾಸಕ ಅಮೃತ ದೇಸಾಯಿ ಪಕ್ಷದ ಅಭ್ಯರ್ಥಿ ಪರ ಗೆಲುವಿಗೆ ಕರೆ ನೀಡಿ ಇನ್ನೂ ಎರಡು ಮೂರು ದಿನಗಳ ಓಡಾಟ ಮಾಡಿ ಕೆಲಸವನ್ನು ಮಾಡಲು ಕರೆ ನೀಡಿದರು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಅವರ ಪರವಾಗಿ ನಮ್ಮ ನೆಚ್ಚಿನ ಶಾಸಕರಾದ ಅಮೃತ ದೇಸಾಯಿ ಅವರು ವಾರ್ಡ ನಂ 02 ರಲ್ಲಿ ಪ್ರಮುಖರ ಸಭೆ ಯನ್ನು ಉದ್ದೇಶಿಸಿ ಮಾತನಾಡಿ ಮತ ಯಾಚಿಸಿದರು

ಇನ್ನೂ ಇದರೊಂದಿಗೆ ಪಕ್ಷದ ಅಭ್ಯರ್ಥಿ ಸೇರಿದಂತೆ ಹಲವರು ವಾರ್ಡ್ ನಲ್ಲಿ ಅಬ್ಬರದ ಪ್ರಚಾರವನ್ನು ಮಾಡಿದರು. ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು

ಒಟ್ಟಾರೆ ವಾರ್ಡ್ ನಲ್ಲಿ ಎಲ್ಲಿ ಹೋದಲೆಲ್ಲ ಬಿಜೆಪಿ ಅಲೆ ಕಂಡು ಬರುತ್ತಿದ್ದು ಇದನ್ನೆಲ್ಲ ನೋಡಿದರೆ ಈ ಬಾರಿ 2 ನೇ ವಾರ್ಡ್ ನಲ್ಲಿ ಕಮಲ ಅರಳೊದು ನೂರಕ್ಕೆ ನೂರರಷ್ಟು ಕಂಡು ಬರುತ್ತಿದ್ದು ಇದನ್ನು ಮತದಾರರು ಕೂಡಾ ಹೇಳುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.