ಬೆಂಗಳೂರು –
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ಕ್ಕೆ ವಿಧಾನಸಭಾ ಸಚಿವಾಲಯದ ಸಿಬ್ಬಂದಿ ಸಾಮೂಹಿಕ ರಜೆ ಘೋಷಣೆಗೆ ಕರೆ ನೀಡಿದ್ದು ಬಂದ್ ಮಾಡಿ ಹೋರಾಟಕ್ಕೆ ಕರೆ ನೀಡಿದ್ದಾರೆ ಹೌದು 542 ಕಿರಿಯ ಸಹಾಯಕ ಹುದ್ದೆ ಯನ್ನು ಕೈಬಿಡುವ ಸರ್ಕಾರದ ನಿರ್ಧಾರಕ್ಕೆ ಸಚಿವಾಲಯದ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ನಿವೃತ್ತಿಯಾದ ಅಧಿಕಾರಿ ನೌಕರರ ಪುನರ್ ನೇಮಕಾತಿ ರದ್ದುಪಡಿಸಬೇಕು ಹಾಗೇ ಇನ್ನೂ ಕೆಲವೊಂದಿಷ್ಟು ಬೇಡಿಕೆ ಗಳನ್ನಿಟ್ಟುಕೊಂಡು ಸಾಮೂಹಿಕ ರಜೆ ಘೋಷಣೆ ಮಾಡಿ ಹೋರಾಟ ಮಾಡಲಿದ್ದಾರೆ.ಇನ್ನು ಸಚಿವಾಲಯದ ನಿಯೋ ಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶವನ್ನು ಕಡಿತಗೊಳಿಸಲಾಗಿದೆ.ಹೀಗಾಗಿ ಅದನ್ನು ಮರುಸ್ಥಾಪಿಸಬೇ ಕೆಂದು ಹಾಗೆ ಇನ್ನಿತರ ಈ ಬೇಡಿಕೆಗಳನ್ನು ಈಡೇರಿಸಬೇ ಕೆಂದು ಒತ್ತಡಗಳು ಕೇಳಿ ಬಂದಿವೆ. ಸಚಿವಾಲಯದ ನೌಕರರು ಒಟ್ಟಾಗಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.