ಮಂಗಳೂರು –
ರಸ್ತೆ ಗುಣಮಟ್ಟದ ವರದಿ ನೀಡಲು ಲಂಚ ಕೇಳಿ ಸಿಕ್ಕಿಬಿದ್ದ ಸರ್ಕಾರಿ ನೌಕರ – ಕೈ ತುಂಬಾ ಸಂಬಳವಿದ್ದರೂ 20 ಸಾವಿರ ರೂಪಾಯಿಗೆ ಕೈಚಾಚಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ
ರಸ್ತೆ ಗುಣಮಟ್ಟ ವರದಿ ನೀಡಲು ಲಂಚ ಕೇಳಿ ಸಿಕ್ಕಿಬಿದ್ದಿದ್ದಾರೆ ಪಿಡಬ್ಲ್ಯುಡಿ ಇಂಜಿನಿಯರ್ ರೊಬ್ಬರು.ಹೌದು ಮಂಗಳೂರಿನಲ್ಲಿ ಈ ಒಂದು ಘಟನೆ ನಡೆದಿದೆ.ಲೋಕೋಪಯೋಗಿ ಇಲಾಖೆ ಯ ಕಿರಿಯ ಇಂಜಿನಿಯರ್ ರೊಬ್ಬರು ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.ಪಿಡಬ್ಲ್ಯುಡಿ ಮಂಗ ಳೂರು ವಿಭಾಗದ ಸಹಾಯಕ ಇಂಜಿನಿಯರ್ ರೊನಾಲ್ಡ್ ಲೋಬೊ ಬಂಧನವಾಗಿರುವ ಅಧಿಕಾರಿಯಾಗಿದ್ದಾರೆ.
ಮಂಗಳೂರಿನ ಬೋಂದೇಲ್ ಪಿಡಬ್ಲ್ಯುಡಿ ಕಚೇರಿಯ ಮೇಲೆ ಈ ಒಂದು ದಾಳಿ ನಡೆಸಿದ್ದಾರೆ ಲೋಕಾಯುಕ್ತರು.20 ಸಾವಿರ ರೂಪಾಯಿ ಲಂಚ ವನ್ನು ಕೇಳಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ ರೊನಾಲ್ಡ್ ಲೋಬೋ.ಬಿಲ್ ಪಾವತಿಗೆ ಅಗತ್ಯ ವಾಗಿದ್ದ ಕ್ವಾಲಿಟಿ ಚೆಕ್ಕಿಂಗ್ ರಿಪೋರ್ಟ್ ನೀಡಲು ಲಂಚದ ಬೇಡಿಕೆಯನ್ನು ಇಟ್ಟಿದ್ದರು.ವರದಿ ನೀಡಲು 22 ಸಾವಿರ ಲಂಚ ಕೇಳಿದ್ದ ಎಇ ರೊನಾಲ್ಡ್ ಲೋಬೊ. ಬೆಳ್ತಂಗಡಿ ತಾಲೂಕಿನ ಕನ್ಯಾಡಿಯ ರಸ್ತೆ ಕಾಮಗಾರಿ ಬಗ್ಗೆ ನೀಡಬೇಕಿದ್ದ ವರದಿ.
ದ.ಕ ಲೋಕಾಯುಕ್ತ ಎಸ್ಪಿ ಸೈಮನ್ ಹಾಗು ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ಯನ್ನು ಮಾಡಲಾಗಿದ್ದು ಸಧ್ಯ ಈ ಕುರಿತಂತೆ ಅಧಿಕಾರಿಯನ್ನು ವಶಕ್ಕೆ ತಗೆದುಕೊಂಡಿರುವ ಲೋಕಾ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು…..