ತುಮಕೂರು –
ವಿದ್ಯಾರ್ಥಿಗಳಿಗೆ ಅತಿಯಾದ ಹೋಮ್ ವರ್ಕ್ ಕೊಟ್ಟು ವಿದ್ಯಾರ್ಥಿ ಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಗಣಿತ ಶಿಕ್ಷಕನ ಮೇಲೆ ಪೋಕ್ಸೊ ಪ್ರಕರಣ ದಾಖಲಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಇನ್ನೂ ವಿದ್ಯಾರ್ಥಿಗಳಿಗೆ ಅತಿಯಾದ ಹೋಮ್ ವರ್ಕ್ ಕೊಟ್ಟು ಪೂರ್ಣ ಮಾಡದಿದ್ದರೆ ಕಿರುಕುಳ ಕೊಡುತ್ತಿದ್ದರಂತೆ ಗಣಿತ ಶಿಕ್ಷಕ ಹೀಗಾಗಿ ಇವರ ಮೇಲೆ ತುಮಕೂರು ಜಿಲ್ಲೆಯ ಚಿಕ್ಕನಾಯಕನ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆತಾ
ತಾಲೂಕಿನ ಗೋಡೆಕೆರೆ ಸರ್ಕಾರಿ ಶಾಲೆಯ ಗಣಿತ ಶಿಕ್ಷಕ ಹೆಚ್.ಎಸ್ ರವಿ ಎಂಬಾತ ಅತಿಯಾದ ಹೋಮ್ ವರ್ಕ್ ಕೊಟ್ಟು,ವರ್ಕ್ ಪೂರ್ಣ ಮಾಡದೇ ಇದ್ದರೆ ಕಿರುಕುಳ ಕೊಡುತ್ತಿದ್ದ.
ಮಕ್ಕಳು ಪೋಷಕರ ಬಳಿ ಶಿಕ್ಷಕರು ಕಿರುಕುಳ ಕೊಡುತ್ತಾರೆ ಶಾಲೆಗೆ ಹೋಗುವುದಿಲ್ಲವೆಂದು ಹೇಳಿಕೊಂಡಿದ್ದಾರೆ.ಪೋಷಕರು ಚಿಕ್ಕನಾಯಕ ನಹಳ್ಳಿ ಪೊಲೀಸರನ್ನು ಸಂಪರ್ಕಿಸಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದುನೆ ಘಟನೆಗೆ ಸಂಬಂಧಿ ಸಿದಂತೆ ಹೆಚ್ಚಿನ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ
ಸುದ್ದಿ ಸಂತೆ ನ್ಯೂಸ್ ತುಮಕೂರು…..