ಧಾರವಾಡ –
ಧಾರವಾಡದ ವೆಂಕಟಾಪೂರ ಬಳಿ ಟ್ರಾಕ್ಟರ್ ಗೆ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಒರ್ವ ಸಾವಿಗೀಡಾಗಿದ್ದು ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಹೌದು ಹೆದ್ದಾರಿ ಯಲ್ಲಿ ಹೊರಟಿದ್ದ ಟ್ರಾಕ್ಟರ್ ಗೆ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿಹೊಡೆದಿದ್ದು ಸ್ಥಳದಲ್ಲೇ ಫಕ್ರುಸಾಬ್ ಮಾಳಗಿ ಸಾವಿಗೀಡಾಗಿದ್ದು
ಇನ್ನೂ ಹಬೀಬ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಾಲಾಗಿದ್ದು ಇಬ್ಬರು ವೆಂಕಟಾಪೂರ ನಿವಾಸಿಗಳಾಗಿದ್ದು ಇನ್ನೂ ಸುದ್ದಿ ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಲಾರಿಯೊಂದಿಗೆ ಚಾಲಕನನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ