This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Sports News

ಶಾಲಾ ಆರಂಭದ ಬೆನ್ನಲ್ಲೇ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಆತಂಕ ಸಮವಸ್ತ್ರ ಕ್ಕಾಗಿ ಇನ್ನೂ ಮೂರು ತಿಂಗಳು ಕಾಯುವ ಪರಿಸ್ಥಿತಿ…..

Join The Telegram Join The WhatsApp

 


ಬೆಂಗಳೂರು

ರಾಜ್ಯಾ ದ್ಯಂತ ನಿನ್ನೆಯಿಂದ ಶಾಲೆಗಳು ಆರಂಭವಾಗಿವೆ ಯಾದರೂ ಸರಕಾರಿ ಶಾಲೆಗಳಲ್ಲಿ ಸಮವಸ್ತ್ರ ವಿತರಿಸಲು ಇನ್ನೂ ಮೂರು ತಿಂಗಳು ಬೇಕಾಗಿದೆ.ಶಿಕ್ಷಣ ಇಲಾಖೆ ಫೆಬ್ರವರಿಯಲ್ಲಿ ನಡೆಸಿದ ಟೆಂಡರ್‌ ಪ್ರಕ್ರಿಯೆ ರದ್ದಾಗಿದ್ದು ಹೊಸ ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.

ಟೆಂಡರ್‌ ಅಂತಿಮವಾದ ಬಳಿಕ ಸಮ ವಸ್ತ್ರ ವಿತರಣೆ ಆರಂಭವಾಗಲಿದೆ.ಪ್ರತೀ ವರ್ಷ ಶಾಲೆ ಆರಂಭವಾಗುವ ವೇಳೆಗೆ ಪಠ್ಯಪುಸ್ತಕದ ಜೊತೆಗೆ ಸಮವಸ್ತ್ರ ವನ್ನು ವಿತರಿಸ ಲಾಗುತ್ತಿತ್ತು.ಆದರೆ ಕೊರೊನಾದಿಂದಾಗಿ ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆ ವಿತರಣೆ ಮೇಲೂ ಪರಿಣಾಮ ಬೀರಿದ್ದರಿಂದ ಟೆಂಡರ್‌ ಅಂತಿಮವಾಗಿಲ್ಲ.

ಮುಂದಿನ ವಾರ ಟೆಂಡರ್‌?
ಫೆಬ್ರವರಿಯಲ್ಲಿ ಸಮವಸ್ತ್ರ ವಿತರಣೆ ಸಂಬಂಧ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಅನುದಾನ ನಿಗದಿಯಲ್ಲಿ ಬಟ್ಟೆ ವಿತರಣೆ ಕಂಪೆನಿಗಳು ಹಾಗೂ ಸರಕಾರದ ನಡುವೆ ಒಪ್ಪಂದವಾಗದ ಕಾರಣ ಟೆಂಡರ್‌ ಪ್ರಕ್ರಿಯೆಗಳು ರದ್ದಾಗಿದೆ.ಕೊರೊನಾ ಪೂರ್ವದ ಅವಧಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತಿತ್ತು.ಈ ಪೈಕಿ ಮೊದಲ ಸೆಟ್‌ ರಾಜ್ಯ ಮತ್ತು ಎರಡನೇ ಸೆಟ್‌ ಅನ್ನು ಕೇಂದ್ರ ಸರಕಾರದ್ದಾಗಿತ್ತು.ಮೊದಲ ಸೆಟ್‌ ಅನ್ನು ಸರಕಾ ರವೇ ಹೊಲಿಸಿ ವಿತರಿಸಿದರೆ ಎರಡನೇ ಸೆಟ್‌ನ ಬಟ್ಟೆ ವಿತರಿಸಲಾಗುತ್ತಿತ್ತು.ಸಂಬಂಧಪಟ್ಟ ಶಾಲಾಭಿವೃದ್ಧಿ ಮತ್ತು ನಿರ್ವಹಣ ಸಮಿತಿ(ಎಸ್‌ಡಿಎಂಸಿ)ಗಳು ಹೊಲಿಸಿ ಮಕ್ಕಳಿಗೆ ವಿತರಣೆ ಮಾಡುತ್ತಿದ್ದವು.

ಈಗ ಎರಡೂ ಜತೆ ಸಮವಸ್ತ್ರ. ಇನ್ನೂ 2021ರಿಂದ ರಾಜ್ಯ ಸರಕಾರವೇ ನೀಡಲು ನಿರ್ಣಯಿಸಿದೆ.2ನೇ ಜತೆ ಸಮವಸ್ತ್ರದ ಅನುದಾನವನ್ನು ರಾಜ್ಯ ಸರಕಾರಕ್ಕೆ ವಿತರಿಸಲು ಕೇಂದ್ರ ಒಪ್ಪಿತ್ತು.ಅದಾದ ಬಳಿಕ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಎರಡೂ ಜತೆ ಸಮವಸ್ತ್ರ ವಿತರಣೆಯಾಗಿಲ್ಲ.ಕಳೆದ ವರ್ಷ ಕೇವಲ ಒಂದು ಜತೆ ಮಾತ್ರ ವಿತರಿಸಲಾಗಿತ್ತು.

ಸಮವಸ್ತ್ರ ವಿತರಣೆ
ಟೆಂಡರ್‌ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳಿದ್ದು ಶೀಘ್ರ ದಲ್ಲಿ ಅವುಗಳನ್ನು ಬಗೆಹರಿಸಿ ಆದಷ್ಟು ಬೇಗ ಮಕ್ಕಳಿಗೆ ಸಮವಸ್ತ್ರ ವಿತರಿ ಸಲು ಕ್ರಮ ವಹಿಸ ಲಾಗುವುದು ಎಂಬ ಮಾತನ್ನು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ


Suddi Sante Desk

Leave a Reply