ಬೆಂಗಳೂರು –
ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಇದೇ ಎಪ್ರಿಲ್ 23ರಿಂದ ಆರಂಭಗೊಳ್ಳಲಿದೆ.ಮೇ 3ರೊಳಗೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೌದು 21, 22 ಮೌಲ್ಯಮಾಪಕರಿಗೆ ತರಬೇತಿ ನೀಡಲಾಗು ತ್ತದೆ.ಹೌದು 23ರಿಂದ ಅಧಿಕೃತವಾಗಿ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.ರಾಜ್ಯದ 234 ಕೇಂದ್ರ ಗಳಲ್ಲಿ ಮೌಲ್ಯಮಾಪನ ನಡೆಯಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.
63,796 ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಸುಮಾರು 4ರಿಂದ 5 ಸಾವಿರ ಮಂದಿ ಅನಾರೋಗ್ಯ ಇನ್ನಿತರ ಕಾರಣಗಳನ್ನು ನೀಡಿ ಗೈರು ಹಾಜರಾಗುತ್ತಾರೆ.ಸುಮಾರು 50 ಸಾವಿರ ಶಿಕ್ಷಕರು ಹಾಜ ರಾದರೂ ನಿಗದಿತ ಸಮಯದಲ್ಲಿ ಮೌಲ್ಯಮಾಪನ ಪೂರ್ಣ ಗೊಳ್ಳಲಿದೆ.ಇನ್ನೂ ಮೇ 2ನೇ ವಾರ ಫಲಿತಾಂಶ ಘೋಷಣೆ ಯಾಗಲಿದ್ದು ಮೌಲ್ಯಮಾಪನದ ಬಳಿಕ ಉತ್ತರ ಪತ್ರಿಕೆಗ ಳನ್ನು ವಾಪಸ್ ಕಳುಹಿಸುವುದು ಮತ್ತು ಅಂಕಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಸೇರಿದಂತೆ ತಾಂತ್ರಿಕ ಕೆಲಸಗಳಿಗೆ ಒಂದು ವಾರಗಳ ಸಮಯ ಬೇಕಾಗು ತ್ತದೆ. ಮೇ 2ನೇ ವಾರದಲ್ಲಿ ಫಲಿತಾಂಶ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಈ ನಡುವೆ ಈಗಾಗ ಲೇ 1,223 ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಸಲಾಗಿದೆ. ಮೌಲ್ಯಮಾಪನ ನಿರ್ಲಕ್ಷ್ಯ ವಹಿಸಿದ್ದ 1,223 ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ದಂಡ ಕೂಡ ವಿಧಿಸಲಾ ಗಿದೆ. ಕನಿಷ್ಠ 6 ಅಂಕಗಳಿಗೆ ಕಡಿಮೆ ಇದ್ದರೆ ದಂಡವಿಲ್ಲ, ಅನಂತರ ವಿವಿಧ ಹಂತಗಳಿದ್ದು, ಅದರ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಈ ವರ್ಷ ತಪ್ಪು ಮುಂದುವರಿದ ರೆ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.