ಧಾರವಾಡ –
ಸಾಮಾನ್ಯವಾಗಿ ಮನುಷ್ಯರು ಒಬ್ಬರಿಗೊಬ್ಬರು ರಕ್ತದಾನ ಮಾಡೊದನ್ನ ಕೇಳಿದ್ದೇವೆ ನೋಡಿದ್ದೇವೆ ಆದರೆ ಇದನ್ನೇ ಲ್ಲವನ್ನು ಮೀರಿ ಧಾರವಾಡದಲ್ಲಿ ಒಂದು ವಿಶೇಷವಾದ ರಕ್ತದಾನವೊಂದು ಕಂಡು ಬಂದಿತು.
ಹೌದು ಒಂದು ನಾಯಿಯಿಂದ ಮತ್ತೂಂದು ನಾಯಿಗೆ ರಕ್ತದಾನ ಮಾಡಿದ ಘಟನೆಯೊಂದು ನಗರದಲ್ಲಿ ಕಂಡು ಬಂದಿತು.ಧಾರವಾಡದ ಜರ್ಮನ್ ಶೆಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಲಾಯಿತು.
ಬಿಜಾಪುರ ಮೂಲದ ರ್ಯಾಟ್ ವಿಲ್ಲರ್ ತಳಿ ನಾಯಿ ಕಾಯಿಲೆಯಿಂದ ಬಳಲುತ್ತಿತ್ತು ಹೀಗಾಗಿ ಇದಕ್ಕೆ ರಕ್ತದ ಅವಶ್ಯಕತೆ ಇತ್ತು ಕಾಯಿಲೆಯಿಂದ ಬಳಲುತ್ತಿದ್ದ ರ್ಯಾಟ್ ವಿಲ್ಲರ್ ನಾಯಿಗೆ ಮತ್ತೊಂದು ನಾಯಿ ಜರ್ಮನ್ ಶೆಪರ್ಡ್ ತಳಿಯ ನಾಯಿ ರಕ್ತದಾನ ಮಾಡಿದೆ.
ನಾಯಿಗೆ ರಕ್ತ ಸಿಗದೆ ಬಿಜಾಪುರದಿಂದ ಧಾರವಾಡಕ್ಕೆ ಬಂದಿದ್ದ ನಾಯಿ ಮಾಲಿಕ ನಗರದ ಕೃಷಿ ವಿದ್ಯಾಲಯದ ಡಾ.ಅನೀಲ್ ಪಾಟೀಲ ಅವರಿಗೆ ಬೇಟಿ ಆಗಿದ್ದರು ಮಾಲಿಕ ನಂತರ ವೈದ್ಯರ ಸಹಾಯದಿಂದ ಪ್ರಾಣಿ ಪ್ರೀಯ ಸೋಮಶೇಖರ್ ಅವರ ನಾಯಿಯಿಂದ ಸಹಾಯವನ್ನು ಮಾಡಲಾಯಿತು.
ರಕ್ತ ದಾನದಿಂದ ಇನ್ನೊಂದು ನಾಯಿಯ ಜೀವ ಉಳಿಸಿದ ಜರ್ಮನ್ ಶೆಪರ್ಡ್.ವಿಶೇಷವಾಗಿ ಕಂಡು ಬಂದ ನಾಯಿಯ ರಕ್ತದಾನವು.