This is the title of the web page
This is the title of the web page

Live Stream

[ytplayer id=’1198′]

June 2024
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುಂದುವರೆದ ಸಂವಿಧಾನ ಜಾಗೃತಿ ಕಾರ್ಯಕ್ರಮ – ಸಮಾಜ ಕಲ್ಯಾಣ ಇಲಾಖೆಯಿಂದ ಹುಬ್ಬಳ್ಳಿ ತಾಲ್ಲೂಕಿನ ಹಲವೆಡೆ ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಧಾರವಾಡ ಜಿಲ್ಲೆಯಲ್ಲಿ ಸಂವಿಧಾನ ಕುರಿತಾದ ಜಾಗೃತಿ ಕಾರ್ಯಕ್ರಮ ಗಳು ಮುಂದುವರೆದಿವೆ ಹೌದು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಧಾರವಾಡ ವತಿ ಯಿಂದ ಹುಬ್ಬಳ್ಳಿ ತಾಲ್ಲೂಕಿನ ಗ್ರಾಮ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಬೆಳಗಲಿ, ಕಟ್ನೂರ್, ಚೆನ್ನಾಪೂರ, ಅಂಚಟಗೇರಿ ಮತ್ತು ದೇವರಗುಡಿಹಾಳ ಗ್ರಾಮ ಪಂಚಾಯತ್ ಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸ ಲಾಯಿತು.

ಜಾಗೃತಿ ಜಾಥಾವನ್ನು ಐದು ಗ್ರಾಮಗಳಲ್ಲಿ ಸ್ಥಬ್ಧಚಿತ್ರದ ವಾಹನವನ್ನು ಗ್ರಾಮಸ್ಥರು ಊರಿ ನದ್ದಕ್ಕೂ ತಳಿರು ತೋರಣಗಳ ಮೂಲಕ ಶೃಂಗಾರ ಮಾಡಿ ಬಣ್ಣಬಣ್ಣದ ರಂಗೋಲಿ ಹಾಕಿ ಆರತಿ ಬೆಳಗುವ ಮೂಲಕ ಕುಂಭಮೇಳದೊಂ ದಿಗೆ ಸ್ವಾಗತ ಮಾಡಿಕೊಂಡರು.

ಸ್ಥಬ್ಧಚಿತ್ರದ ಸಂಚಾರದುದ್ದಕ್ಕೂ ಸಂಬಾಳವಾಧ್ಯ, ಜಾಂಜ್ ಮೇಳ,ಕೋಲಾಟ, ಹೆಜ್ಜೆಯ ಕುಣಿತ, ಲೇಜಿಮ್ ಕುಣಿತ, ಡೊಳ್ಳು ಕುಣಿತದಂತಹ ಮೊದಲಾದ ಹೆಜ್ಜೆಮೇಳಗಳೊಂದಿಗೆ ವಿಜೃಂಭಣೆ ಯಿಂದ ಶಾಲಾಮಕ್ಕಳು ಮಹನಿಯರ ವೇಷ ಧರಿಸಿ ಗ್ರಾಮಗಳ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಜನರನ್ನು ಜಾಗೃತಗೊಳಿಸಿದರು.

ಜಾಗೃತ ಜಾತಾ ಸ್ಥಬ್ಧಚಿತ್ರ ಸಂಚರಿಸಿದ ಪ್ರತಿ ಗ್ರಾಮಗಳಲ್ಲಿ ಸೈಕಲ್ ರ್ಯಾಲಿ, ಬೈಕ್ ರ್ಯಾಲಿ,
ಟ್ರಾಕ್ಟರ್ ರ್ಯಾಲಿ, ಎತ್ತಿನಬಂಡಿ ರ್ಯಾಲಿ ಮಾಡುವುದರೊಂದಿಗೆ ವೇದಿಕೆ ಕಾರ್ಯಕ್ರಮ ಆಯೋಜಿಸಿ ಗಣ್ಯರಿಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಶಿವಾನಂದ ಜವಳಿ ರವರು ಬೆಳಗಲಿ ಯಲ್ಲಿ

ಹುಬ್ಬಳ್ಳಿ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷ ರಾದ ಡಾ.ಪ್ರಹ್ಲಾದ ಗೆಜ್ಜಿ ರವರು ಕಟ್ನೂರ ಮತ್ತು ಅಂಚಟಗೇರಿ ನಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ  ಎಸ್.ವ್ಹಿ. ಬಂಗಾರಿಮಠ ರವರು ಚೆನ್ನಾಪೂರ ಮತ್ತು ದೇವರಗುಡಿಹಾಳ ದಲ್ಲಿ ಉಪನ್ಯಾಸದ ನೀಡಿದರು.

ಜಗಜ್ಯೋತಿ ಬಸವಣ್ಣನವರ ಸಾಮಾಜಿಕ ಚಿಂತನೆಗಳನ್ನು ಡಾ. ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನದಲ್ಲಿ ಯಾವರೀತಿ ಅಳವ ಡಿಸಿದ್ದಾರೆ ಎಂಬುದರ ಬಗ್ಗೆ, ಮೂಲಭೂತ ಹಕ್ಕು ಮತ್ತು ಕರ್ತವ್ಯ ಗಳ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು.

ಶಾಲಾಮಕ್ಕಳಿಂದ ವಿವಿಧ ನೃತ್ಯ, ದೇಶಭಕ್ತಿಗೀತೆ, ಕಿರುನಾಟಕ, ಏಕಾಭಿನಯ, ಭಾಷಣ ಸ್ಪರ್ಧೆ ಗಳನ್ನು ಏರ್ಪಡಿಸಿ ವಿಜೇತರಿಗೆ ಕಾರ್ಯಕ್ರ ಮದಲ್ಲಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ತಹಶೀಲ್ದಾರ ಪ್ರಕಾಶ ನಾಶಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ
ಶ್ರೀಮತಿ ಚೆನ್ನಮ್ಮ ಅಂಬಿಗೇರ, ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳು,

ಗ್ರಾಮ ಆಡಳಿತ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಮಸ್ತ ನೌಕರರು, ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಮಗಳ ಗುರುಹಿರಿಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆಗಳ ಮುಖಂಡರು ಗ್ರಾಮಸ್ಥರು ಅಪಾರ ಸಂಖ್ಯೆಯ ಶಾಲಾಮಕ್ಕಳು ಭಾಗವಹಿಸಿ ಇಂದಿನ ಸಂವಿಧಾನ ಜಾಗೃತಾ ಜಾಥಾ ಕಾರ್ಯಕ್ರ ಮ ವನ್ನು ಸಂವಿಧಾನದ ಹಬ್ಬವನ್ನಾಗಿ, ಜಾತ್ರೆಯ ರೂಪದಲ್ಲಿ ಆಚರಿಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk