This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಟ್ಯೂಶನ್‌ಗೆ ಹೋಗಿಲ್ಲ ವೇಳಾಪಟ್ಟಿ ಹಾಕ್ಲಿಲ್ಲ ಮನೆಯಲ್ಲೇ ಓದಿ ಶೇ 94 ರಷ್ಟು ಫಲಿತಾಂಶ ಏಕ್ತಾ ಕರ್ಪೂರ   ಪತ್ರಕರ್ತ ಪ್ರಸನ್ನ ಕರ್ಪೂರ ಮಗಳ‌ ಸಾಧನೆಗೆ ಅಭಿನಂದನೆಗಳ ಮಹಾಪೂರ…..

ಟ್ಯೂಶನ್‌ಗೆ ಹೋಗಿಲ್ಲ ವೇಳಾಪಟ್ಟಿ ಹಾಕ್ಲಿಲ್ಲ ಮನೆಯಲ್ಲೇ ಓದಿ ಶೇ 94 ರಷ್ಟು ಫಲಿತಾಂಶ ಏಕ್ತಾ ಕರ್ಪೂರ   ಪತ್ರಕರ್ತ ಪ್ರಸನ್ನ ಕರ್ಪೂರ ಮಗಳ‌ ಸಾಧನೆಗೆ ಅಭಿನಂದನೆಗಳ ಮಹಾಪೂರ…..
WhatsApp Group Join Now
Telegram Group Join Now

ಬೆಂಗಳೂರು

ಟ್ಯೂಶನ್‌ಗೆ ಹೋಗಿಲ್ಲ ವೇಳಾಪಟ್ಟಿ ಹಾಕ್ಲಿಲ್ಲ ಮನೆಯಲ್ಲೇ ಓದಿ ಶೇ 94 ರಷ್ಟು ಫಲಿತಾಂಶ ಏಕ್ತಾ ಕರ್ಪೂರ   ಪತ್ರಕರ್ತ ಪ್ರಸನ್ನ ಕರ್ಪೂರ ಮಗಳ‌ ಸಾಧನೆಗೆ ಅಭಿನಂದನೆಗಳ ಮಹಾಪೂರ

ಹೀಗೆ ಓದಬೇಕು ಇಂತಿಷ್ಟೇ ಹೊತ್ತು ಓದಬೇಕು. ಈ ತರಹದ ಯಾವುದೇ ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಂಡು ಓದಿದವಳಲ್ಲ ಎನ್ನೊದಕ್ಕೆ ಹಿರಿಯ ಪತ್ರಕರ್ತ ಪ್ರಸನ್ನ ಕರ್ಪೂರ ಪುತ್ರಿ ಏಕ್ತಾ ಕರ್ಪೂರ ಸಾಕ್ಷಿ.ಯಾವಾಗಲು ಯಾವ ವಿಷಯ ಬೇಕೋ ಅದನ್ನು ಲಕ್ಷ್ಯ ಕೊಟ್ಟು ಓದುತ್ತಿದ್ದೆ.ಅದು ಫಲ ನೀಡಿತು ಎನ್ನುತ್ತಿದ್ದಾಳೆ ಏಕ್ತಾ.

ಪಿಯುಸಿ ದ್ವಿತೀಯ ಸೈನ್ಸ್ ನಲ್ಲಿ ಶೇ. 94 ರಷ್ಟು ಫಲಿತಾಂಶ ಪಡೆದ ಧಾರವಾಡದ ಪ್ರಿಸಂ ಕಾಲೇಜ್ ವಿದ್ಯಾರ್ಥಿನಿ ಹಾಗೂ ಹಿರಿಯ ಪತ್ರಕರ್ತ ಪ್ರಸನ್ನ ಕರ್ಪೂರರ ಪುತ್ರಿ ಏಕ್ತಾ ಕರ್ಪೂರಳ ಮಾತುಗಳಿವು.ನೀಟ್ ಬರೆದು ಡಾಕ್ಟರ್ ಓದುವಾಸೆ ಹೊಂದಿರುವ ಈಕೆ ಬಿಎಸ್‌ಸಿ ಅಗ್ರಿ ಸಿಕ್ಕರೂ ಓದುವ ಹಂಬಲ ಹೊಂದಿದ್ದಾಳೆ.

ಮನೆಯಲ್ಲಿ ಪಾಲಕರ ಒತ್ತಡವಂತೂ ಎಳ್ಳಷ್ಟು ಇರಲಿಲ್ಲ.ಕಾಲೇಜು ಬಿಟ್ಟರೆ ಬೇರೆಲ್ಲೂ ಟ್ಯೂಶನ್, ಕೋಚಿಂಗ್ ಗೆ ಹೋಗದೆ ಸ್ವಂತ ಪ್ರಯತ್ನದ ಮೂಲಕ ಸಾಧನೆ ಶಿಖರ ಏರಿರುವ ಈಕೆ ಹಲವ ರಿಗೆ ಪ್ರೇರಣೆ ವರ್ಷದ ಆರಂಭದಿಂದಲೂ ಓದಿನತ್ತ ಗಮನಹರಿಸಿದ ಪರಿಣಾಮ ಒತ್ತಡ ಆಗಲಿಲ್ಲ.

ಪರೀಕ್ಷೆ ಸಮೀಪಿಸಿದಾಗ ಸ್ವಲ್ಪ ಟೆನ್ಶನ್ ಆದರೂ ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಂಡ ಪರಿಣಾಮ ಉತ್ತಮ ಲಿತಾಂಶ ಪಡೆದೆ ಎನ್ನುವ ಭರವಸೆ ಆಕೆಯ ಮಾತುಗಳಲ್ಲಿ ಕೇಳಿ ಬಂದಿತು. ಜೀವಶಾಸ್ತ್ರದಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತುಘಿ. ಅದು ನನ್ನಿಷ್ಟದ ವಿಷಯ ಎನ್ನುವ ಏಕ್ತಾ ಭೌತಶಾಸ್ತ್ರ, ರಸಾಯನಶಾಸ ಹಾಗೂ ಗಣಿತ ವನ್ನೂ ಅಷ್ಟೇ ಸರಿಸಮನಾಗಿ ಓದುತ್ತಿದ್ದಳು.

ಭೌತಶಾಸದಲ್ಲಿ ಇನ್ನೂ ನಾಲ್ಕೈದು ಅಂಕ ಬರಬೇಕಿತ್ತು ಎನ್ನುವ ಅಳಕು ಇವಳಲ್ಲಿ ಈಗಲೂ ಇದೆ. ಪ್ರ್ಯಾಕ್ಟಿಕಲ್ ನಲ್ಲೂ ಉತ್ತಮ ಸಾಧನೆ ಈಕೆಯ ಹೆಗ್ಗಳಿಕೆ. ಮನೆಯಲ್ಲಿ ಅಕ್ಕರೆಯ ಅಜ್ಜಿಯ ಬೆಂಬಲ ಈಕೆಗೆ ದೊಡ್ಡ ಶಕ್ತಿಘಿ. ಹೊಟ್ಟೆ ವಿಚಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಳಜಿ ವಹಿಸು ತ್ತಿದ್ದ ತಾಯಿ ರೇವತಿ,

ಕೇಳಿದ ಎಲ್ಲ ಶೈಕ್ಷಣಿಕ ವಸ್ತುಗಳನ್ನು ಕೂಡಲೇ ಕೊಡಿಸುತ್ತಿದ್ದ ತಂದೆ ಹಾಗೂ ಸಹೋದರಿ ನಿತ್ಯಶ್ರೀಯ ಸಹಕಾರ ಸೇರಿದಂತೆ ಹಲವು ಕಾರಣಗಳಿಂದ ನನಗೆ ಓದು ಕಷ್ಟಕರವೆನಿಸಲಿಲ್ಲ ಎನ್ನುತ್ತಾಳೆ ಏಕ್ತಾ.ಏ.18 ಮತ್ತು 19 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಇನ್ನೇನಿದ್ದರೂ ಅದರ ತಯ್ಯಾರಿ ಆಗಬೇಕಿದ್ದು ಹಗಲಿರುಳು ಶ್ರಮಿಸು ತ್ತಿರುವೆ ಎನ್ನುವ ಏಕ್ತಾಳ ಮಾತಲ್ಲಿ ಅದರಲ್ಲೂ ಉತ್ತಮ ಸಾಧನೆ ಮಾಡುವ ವಿಶ್ವಾಸ ಎದ್ದು ಕಾಣುತ್ತಿತ್ತು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk