ಹಿರೇಬಾಗೇವಾಡಿ –
ಸಾಮಾನ್ಯವಾಗಿ ಶಾಲೆಯಲ್ಲಿ ಕಲಿಕೆ ಅಷ್ಟೇ ಅಲ್ಲದೇ ಅದರೊಂದಿಗೆ ಆ ಕೆಲಸ ಈ ಕೆಲಸ ಎನ್ನುತ್ತಾ ಬಿಡುವಿಲ್ಲದೇ ಕೆಲಸ ಕಾರ್ಯಗಳಲ್ಲಿ ಶಿಕ್ಷಕರು ಬ್ಯೂಜಿಯಾಗಿರುತ್ತಾರೆ. ಹೌದು ಬೋಧನೆ ಬಿಸಿಯೂಟ ಇದರೊಂದಿಗೆ ಇಲಾಖೆಯ ಆ ಕೆಲಸ ಈ ಕೆಲಸ ಹೀಗೆ ನೂರೆಂಟು ಕೆಲಸಗಳಲ್ಲಿ ಶಿಕ್ಷಕರು ಶಾಲೆಗಳಲ್ಲಿ ತೊಡಗಿರುತ್ತಾರೆ.ಇಂಥಹ ಚಿತ್ರಣದ ನಡುವೆ ಪ್ರತಿದಿನ ಶಾಲೆಯಲ್ಲಿ ಇಲಾಖೆಯಿಂದ ನೀಡುವ ಬಿಸಿ ಯೂಟ ಮಕ್ಕಳಿಗೆ ಬೋರ್ ಆಗುತ್ತಿದೆ ಎನ್ನುವ ಕಾರಣ ಕ್ಕಾಗಿ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ವಿಶೇಷ ಊಟವನ್ನು ನೀಡಲಾಗುತ್ತಿದೆ

ಹೌದು ಮಕ್ಕಳಿಗೆ ಬಿಸಿಯೂಟವನ್ನು ಮಾಡಿ ಮಾಡಿ ಬೇಜಾರಾಗಬಾರದು ಎಂಬ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಶಾಲೆಯಲ್ಲಿ ಶಿಕ್ಷಕರ ವಿಶೇಷವಾದ ಪ್ರಯತ್ನದಿಂದಾಗಿ ಹದಿನೈದು ದಿನಗಳಿಗೊಮ್ಮೆ ವಿಶೇಷ ಊಟವನ್ನು ಮಕ್ಕಳಿಗೆ ನೀಡಲಾಗುತ್ತಿದ್ದು ಇಂದು ಬಿಸಿಯೂಟದೊಂದಿಗೆ ಗೋದಿ ಹುಗ್ಗಿ,ಫಲಾವ್ ಇದರೊಂದಿಗೆ ಸೊಂಡಿಗೆಯನ್ನು ನೀಡಲಾಯಿತು.


ಶಾಲೆಯ ಶಿಕ್ಷಕರೆಲ್ಲರೂ ಸೇರಿಕೊಂಡು ಶೇರ್ ಮಾಡಿ ಈ ಒಂದು ವಿಶೇಷವಾದ ಊಟವನ್ನು ಮಾಡಿಸುತ್ತಾರೆ. ಪ್ರತಿದಿನ ಮಕ್ಕಳು ಬಿಸಿಯೂಟವನ್ನು ತಿಂದು ತಿಂದು ಬೋರಾಗಬಾರದು ಹಾಗೇ ಅದರಿಂದ ಬೇಜಾರನ್ನು ಮಾಡಿಕೊಳ್ಳಬಾರದು ಎಂಬ ಕಾರಣಕ್ಕಾಗಿ ಈ ಒಂದು ವಿಶೇಷ ಊಟವನ್ನು ಮಾಡಿಸಲಾಗುತ್ತಿದ್ದು ಇದರೊಂದಿಗೆ ಮಕ್ಕಳಿಗೆ ಊಟದಲ್ಲಿ ಹೊಸತನವನ್ನು ಶಾಲೆಯಲ್ಲಿ ಪರಿಚಯಿಸಲಾಗುತ್ತಿದೆ
ಹೌದು ಜ್ಞಾನ ದಾನದೊಂದಿಗೆ ಅನ್ನ ದಾನವನ್ನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ನೀಡುತ್ತಿದ್ದು ಶಾಲೆಯಲ್ಲಿನ ಈ ಒಂದು ವಿಶೇಷ ಊಟವನ್ನು ನೀಡುತ್ತಿರುವ ಶಿಕ್ಷಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.