This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ) ನ ಸಾರಥ್ಯವನ್ನು ವಹಿಸಿಕೊಂಡ ಡಾ||ಆರ್.ನಾರಾಯಣಸ್ವಾಮಿ ಚಿಂತಾಮಣಿ ರವರನ್ನು – ಅವಿರೋಧ ವಾಗಿ ಆಯ್ಕೆ ಮಾಡಿ ರಾಜ್ಯಕ್ಕೆ ಮಾದರಿಯಾದ ರಾಜ್ಯ ಘಟಕ…..


ಧಾರವಾಡ

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ) ನ ಸಾರಥ್ಯವನ್ನು ವಹಿಸಿಕೊಂಡ ಡಾ||ಆರ್.ನಾರಾ ಯಣಸ್ವಾಮಿಚಿಂತಾಮಣಿ ರವರನ್ನು ಅವಿರೋಧ ವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಧಾರವಾಡ ರಾಜ್ಯ ಘಟಕ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಂಗಮೇಶ ಖನ್ನಿನಾ ಯ್ಕರ ಅವಿರೋದವಾಗಿ ಆಯ್ಕೆಯಾಗಿದ್ದಾರೆ

ಧಾರವಾಡದಲ್ಲಿ ಜರುಗಿದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ (ರಿ)ನ ಮೂರನೇ ರಾಜ್ಯ ಕಾರ್ಯಕಾರಿ ಸಭೆಯನ್ನು ಧಾರವಾಡದ ಟೀಚರ್ಸ್ ಸೊಸೈಟಿ ಕೊಪ್ಪದಕೇರಿ ಧಾರವಾಡದ ಸಭಾಭವನದಲ್ಲಿ ಪರಿಷತ್‌ ರಾಜ್ಯ ಕಾರ್ಯಕಾ ರಣಿ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ರಾಜ್ಯ ಅಧ್ಯಕ್ಷರುಗಳು ಹಾಗೂ ರಾಜ್ಯಪ್ರಧಾನ ಕಾರ್ಯದರ್ಶಿಗಳು ಸೇರಿದ್ದರು

ಚರ್ಚಾ ವಿಷಯಗಳಲ್ಲಿ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯ ಘಟಕವನ್ನು ಪುನರ್ ರಚನೆ ಮಾಡುವ ಬಗ್ಗೆ ಶಿಕ್ಷಕರ ನಾಯಕರಾದ ಗುರು ಪೋಳ ವಿಚಾರ ಮಂಡಿಸುತ್ತಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗುರುತಿಗಡಿಯವರು ವಯೋ ನಿವೃತ್ತಿ ಹೊಂದಿದ್ದು ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇದ್ದು ಈ ಜಾಗಕ್ಕೆ ವಿವಿಧ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸಂಘಟನಾ ಚತುರರಾಗಿರುವ ದಕ್ಷಿಣ ಕರ್ನಾಟ ಕದ ಪ್ರಭಾವಿ ನೇತಾರರಾದ ಡಾ|| ಆರ್.ನಾರಾ ಯಣಸ್ವಾಮಿ ಚಿಂತಾಮಣಿ ರವರನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಚಿಸಿ ಅನುಮೋದಿಸಿದರು

ರಾಜ್ಯ ಘಟಕದ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರಘಟ್ಟಿರವರು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಉತ್ತರ ಕರ್ನಾಟಕ ಭಾಗದಿಂದ ವಿವಿಧ ಸಂಘಟನೆಗಳಲ್ಲಿ ಸಂಗಮೇಶ ದುಂಡಪ್ಪ ಖನ್ನಿ ನಾಯ್ಕರ್ ರವರನ್ನು ಸೂಚಿಸಿದರು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗುರು ತಿಗಡಿರವರು ಹಾಗೂ ರಾಜ್ಯ ಘಟಕದ ಅನುಮೋದಿಸಿದರು

ಸಭೆಯಲ್ಲಿ ಓಯೋ ನಿವೃತ್ತಿ ಪಡೆದ ಗುರುತಿಗಡಿ ರವರನ್ನು ಸನ್ಮಾನಿಸಲಾಯಿತು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್‌ ಹುಟ್ಟು ಹಾಕಿರುವ ಉದ್ದೇಶಗಳು ಹಾಗೂ ನಿರ್ದಿಷ್ಟ ಗುರಿಗಳನ್ನು ಹಾಗೂ ಕಾರ್ಯ ಚಟುವಟಿಕೆಗಳನ್ನು ಸವಿವರವಾಗಿ ತಿಳಿಸಿದರು.

ಬೆಂಗಳೂರಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಉದ್ಘಾಟಿಸಿ ಮಾತನಾಡಿ ಪರಿಷತ್ನ ವೃಂದ ಸಂಘಗಳಿಗೆ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಸ್ಪಷ್ಟಪಡಿಸಿದರು

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದ ಡಾ||ಆರ್.ನಾರಾಯಣಸ್ವಾಮಿ ಚಿಂತಾಮಣಿರವರು ಮಾತನಾಡುತ್ತಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯ ಘಟಕದ ಸರ್ವ ಪದಾಧಿಕಾರಿಗಳು ನನ್ನ ಸಂಘಟನಾ ಚತುರಥಿಯನ್ನು ಗಮನಿಸಿ ನನಗೆ ರಾಜ್ಯಾಧ್ಯಕ್ಷರ ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಯಾವುದೇ ಪರಿಷತ್ನ ಸದಸ್ಯ ಸಂಘಟನೆಗಳ ಜೊತೆಗೂಡಿ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಲು ಶ್ರಮ ಪಡೋಣ ಎಂದು ಅಭಿಪ್ರಾಯಸಿದರು.

ಡಾ|| ಆರ್. ನಾರಾಯಣಸ್ವಾಮಿ ಚಿಂತಾಮಣಿ ಮಾತನಾಡುತ್ತಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯಾಧ್ಯಕ್ಷರಾಗಿ ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಶಿಕ್ಷಕರ ಸಂಘಗಳ ಪಾತ್ರ, ಎನ್ಇ ಪಿ, ಸಾಹಿತ್ಯ ಶಿಕ್ಷಣ ಆರೋಗ್ಯ ಪಾಠ ಟಿಪ್ಪಣಿ, ಪಾಠಯೋಜನೆಗಳ ಬಗ್ಗೆ ಕಾರ್ಯಗಾರಗಳು, NPS ತೊಲಗಿಸಿ -OPS ಜಾರಿಗೆ ತರಲು, ಪ್ರತಿ ವರ್ಷ ನಿಯಮಾನುಸಾರ ವರ್ಗಾವಣೆ ಪ್ರಕ್ರಿಯೆ ಮಾಡಲು, ಕ್ರಮವಾಗಿ DA ಜಾರಿ, ಗ್ರಾಮೀಣ ಬತ್ಯೆ, ಗ್ರಾಮೀಣ ಕೃಪಾoಕ ಸಮಸ್ಯೆ, OTS-ವರ್ಗಾವಣೆ, ವೇತನ ಆಯೋಗ ಪರಿಷ್ಕರಣಿ, ಎಲ್ಲಾ HPSಗಳು ಡಿಜಿಟಲ್ ಶಾಲೆಗಳಾಗಿ ನಿರ್ಮಾಣ, ಕ್ಷೀರ ಭಾಗ್ಯ

ಅನುಷ್ಠಾನ ಅಕ್ಷರ ದಾಸೋಹ ವ್ಯವಸ್ಥಿತ ಅನುಷ್ಠಾನ, ಎಸ್ ಎಸ್ ಎಲ್ ಸಿ- ಪಿ ಯು ಸಿ ಮಕ್ಕಳಿಗೆ ಲ್ಯಾಪ್ಟಾಪ್, ಶಿಕ್ಷಕರ ಕಾರ್ಯಕ್ಷೇ ತ್ರಕ್ಕೆವಿಭಾಗಕ್ಕೆ ಒಬ್ಬರಂತೆ MLC ಆಯ್ಕೆಗೆ ಅವಕಾಶ, ಕನ್ನಡ ಶಾಲೆಗಳ ಉಳಿವಿಗಾಗಿ, ಮಕ್ಕಳಿಗೆ ಸರ್ಕಾರದಿಂದ ಲೇಖನಿ ಸಾಮಗ್ರಿಗಳ ವಿತರಣೆ, ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆಗಾಗಿ ಶಾಲೆಗಳಿಗೆ ಅನುದಾನ, ಶಾಲಾ ಅನುದಾನ ಹೆಚ್ಚಳ, ಸರ್ಕಾರದಿಂದ ಸಮಯಕ್ಕೆ ಸರಿಯಾಗಿ ಶಾಲಾ ಸವಲತ್ತುಗಳು, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ, ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಂಟೀನ್ ನಿರ್ವಹಣೆ, ಶಿಕ್ಷಕರಿಗೆ ಆಗುವ ಅನ್ಯಾ ಯಗಳ ವಿರುದ್ಧ ಹೋರಾಟ ಸತ್ಯಾಗ್ರಹ, ಇಲಾಖೆಯ ಜೊತೆ ಸೌಹಾರ್ದ ಸಂಬಂಧ,

ಶಿಕ್ಷಣವೇ ಶಕ್ತಿ, ಗುಣಮಟ್ಟದ ಸಮವಸ್ತ್ರಗಳ ವಿತರಣೆ ಮುಂತಾದ ಹತ್ತು ಹಲವಾರು ಬೇಡಿಕೆ ಗಳನ್ನು ಈಡೇರಿಸಿಕೊಳ್ಳಲು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ವೃಂದ ಸಂಘಗಳ ಸಹಕಾರ ಪಡೆದು ಈಡೇರಿಸಿಕೊಳ್ಳಲಾಗುವುದೆಂದು ರಾಜ್ಯಾಧ್ಯಕ್ಷರಾದ ಡಾ|| ಆರ್ ನಾರಾಯಣ ಸ್ವಾಮಿ ಚಿಂತಾಮಣಿ ರವರು ಅಭಿಪ್ರಾಯಸಿದರು

ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಂಗಮೇಶ ಖನ್ನಿನಾಯ್ಕರ್ ರವರು ಮಾತನಾಡುತ್ತಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ಧಯೋದ್ದೇಶಗಳನ್ನು ಈಡೇರಿಸಲು ನಾನು ಅಧ್ಯಕ್ಷರೊಂದಿಗೆ ಜೊತೆ ಗೂಡಿ ವೃಂದ ಸಂಘಗಳ ಪದಾಧಿಕಾರಿಗಳ ಸಹಕಾರ ಪಡೆದು ಅಧ್ಯಕ್ಷರು ನುಡಿದ ವಿಚಾರಗ ಳನ್ನು ಗಮನದಲ್ಲಿರಿಸಿಕೊಂಡು ಅವರ ಜೊತೆ ಗೂಡಿ ಜೋಡೆತ್ತುಗಳಂತೆ ಕಾರ್ಯನಿರ್ವಹಿಸಲು ಸದಾ ಸಿದ್ದನಾಗಿರುತ್ತೇನೆಂದು ನುಡಿದರು

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್‌ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ಗುರುತಿಗಡಿ,ಕಾಶಪ್ಪ ದೊಡವಾಡ ಸಿ.ಎಂ.ಕಿತ್ತೂರ, ಸೀತಾ ಚಾಕಲಬ್ಬಿ, ಲೀಲಾವತಿ ಬಾಗಲಕೋಟಿ ಎಂ.ಐ.ದೀವಟಗಿ, ರುದ್ರೇಶ ಕುರ್ಲಿ, ಮಂಜುನಾಥ ಮುಂಗೋಡಿ, ಆರ್. ಎಸ್ ಹಿರೇಗೌಡರ, ಎಂ.ವಿ. ಸಿದ್ಧಲಿಂಗೇಶ .ಮುಂತಾದವರು ಹಾಜರಿದ್ದು ಶುಭ ಹಾರೈಸಿದರು.

ವರದಿ ಎಲ್ ಐ ಲಕ್ಕಮ್ಮನವರ ಹಿರಿಯ ಶಿಕ್ಷಕರು.


Google News Join The Telegram Join The WhatsApp

 

 

Suddi Sante Desk

Leave a Reply