ಧಾರವಾಡ –
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ RCHO ಅಧಿಕಾರಿಯಾಗಿ ಡಾ ಸುಜಾತಾ ಹಸವಿಮಠ ನೇಮಕವಾಗಿದ್ದಾರೆ ಹೌದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCHO) ಅಧಿಕಾರಿಯಾಗಿ ಡಾ: ಸುಜಾತಾ ಹಸವಿಮಠ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಇತ್ತಿಚಿಗೆ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿದ್ದ ಡಾ ಸುಜಾತಾ ಹಸವಿಮಠ ಆರ್ಸಿಹೆಚ್ಓ ಹುದ್ದೆಯ ಕಾರ್ಯ ಬಾರ ವಹಿಸಿಕೊಂಡಿದ್ದಾರೆ.ಜಿಲ್ಲಾ ಆರೋಗ್ಯಾ ಧಿಕಾರಿ ಡಾ: ಶಶಿ ಪಾಟೀಲ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..