ಸಕಲೇಶಪುರ –
ಎರಡು ಬಾರಿ ಶಾಸಕರಾಗಿದ್ದ ಪತ್ನಿಯೊಬ್ಬರೊ ಬ್ಬರು ಪಿಂಚಣಿಗಾಗಿ ಪರದಾಡುತ್ತಿರುವ ಚಿತ್ರಣ ವೊಂದು ರಾಜ್ಯದಲ್ಲಿ ಬೆಳಕಿಗೆ ಬಂದಿದೆ.ಹೌದು ಸಕಲೇಶಪುರ ಶಾಸಕರಾಗಿದ್ದ ಜೆ ಡಿ ಸೋಮಪ್ಪ ಅವಪ ಪತ್ನಿ ಪಿಂಚಣಿಗಾಗಿ ಪರದಾಡುತ್ತಿದ್ದಾರೆ. ಸಕಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಜೆ.ಡಿ ಸೋಮಪ್ಪ ಪತ್ನಿಗೆ ನೀಡುವ ಪಿಂಚಣಿಯನ್ನು 25 ತಿಂಗಳಿಂದ ತಡೆ ಹಿಡಿಯಲಾಗಿದೆ.
ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಇವರ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ ಉಂಟಾಗಿದೆ.ಬೆನ್ನು ಹುರಿ ಶಸ್ತ್ರಚಿಕಿತ್ಸೆಗೆ ಈವರೆಗೆ ಸುಮಾರು 7 ಲಕ್ಷ ಖರ್ಚಾಗಿದ್ದು ಈ ಹಣವನ್ನು ಸರ್ಕಾರ ನಾಲ್ಕು ವರ್ಷಗಳಿಂದ ನೀಡದೇ ನಿರ್ಲಕ್ಷಿಸಿದ್ದು ಪಟ್ಟಣದ ಲಕ್ಷ್ಮಿಪುರ ಬಡಾವಣೆಯಲ್ಲಿ ವಾಸವಿರುವ ಜೆ.ಡಿ ಸೋಮಪ್ಪ ಪತ್ನಿ 79 ವರ್ಷದ ಜಯಮ್ಮ ಎದ್ದು ನಡೆದಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಮನೆ, ಆಸ್ತಿ ಮಾರಿ ರಾಜಕಾರಣ ಮಾಡಿದ್ರು ನಾನು ಎದುರಿಸುತ್ತಿರುವ ಸಮಸ್ಯೆ ಹೇಳಿಕೊಳ್ಳುವುದಕ್ಕೆ ನೋವಾಗುತ್ತದೆ ಎಂಬ ಮಾತನ್ನು ಹೇಳುತ್ತಿದ್ದಾರೆ.
ಆಲೂರು-ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ರು ಪುರಸಭೆ ಅಧ್ಯಕ್ಷರಾಗಿ ಶಾಸಕರಾಗಿದ್ದಾಗ ಒಂದು ಹಂಚಿನ ಮನೆಯಲ್ಲಿ ಬಾಡಿಗೆಗೆ ಇದ್ವಿ ಮನೆ ಆಸ್ತಿ ಮಾರಾಟ ಮಾಡಿ ರಾಜಕಾರಣ ಮಾಡಿದ್ರು ಎಂದು ಜಯಮ್ಮ ಹೇಳುತ್ತಾರೆ.ಈಗಲೂ ನಾವು ಅವರ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ.ಆದರೆ 2021ರ ಜನವರಿಯಿಂದ ಪಿಂಚಣಿ ನಿಲ್ಲಿಸಿರುವುದರಿಂದ ಆಸ್ಪತ್ರೆ ಹಾಗೂ ಇತರ ವೆಚ್ಚಕ್ಕಾಗಿ ಸಂಬಂಧಿಕರ ಬಳಿ ಸಾಲ ಮಾಡಿದ್ದೇನೆ ಕೈಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ ಎಂದು ನೊಂದು ನುಡಿದರು.
ಪಿಂಚಣಿ ಹಣ ಕೆನರಾ ಬ್ಯಾಂಕ್ ಖಾತೆಗೆ ಬರುತ್ತಿತ್ತು ಬ್ಯಾಂಕ್,ಖಜಾನೆ ಇಲಾಖೆ, ವಿಧಾನ ಸೌಧ ಸುತ್ತಾಡಿ ಸುಸ್ತಾಗಿದ್ದೇನೆ.ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸಹ ಅಧಿಕಾರಿಗಳಿಗೆ ಪೋನ್ ಮಾಡಿ ತಡೆ ಹಿಡಿದಿರುವ ಪಿಂಚಣಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದ್ದರು ಆದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನನಗೆ ಯಾರೂ ಸಹಾಯ ಮಾಡೋರಿಲ್ಲ. ತುಂಬಾ ಕಷ್ಟವಾಗಿದೆ ಎಂದರು.
2018 ರಿಂದ 2020ರ ನಡುವೆ ಸರ್ಕಾರ ನಿಗದಿಗೊಳಿಸಿರುವ ಪಿಂಚಣಿ ಮೊತ್ತಕ್ಕಿಂತ ಪ್ರತಿ ತಿಂಗಳು ₹ 10 ರಿಂದ ₹ 11 ಸಾವಿರದಷ್ಟು ಹೆಚ್ಚು ವರಿ ಹಣವನ್ನು ಅಧಿಕಾರಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.ಅದೇ ಸಮಯದಲ್ಲಿ ಅಮ್ಮ ಸ್ಪೈನಲ್ ಕಾರ್ಡ್ ಚಿಕಿತ್ಸೆಗಾಗಿ ವರ್ಷವೆಲ್ಲಾ ಬೆಂಗಳೂರಿನ ಆಸ್ಪತ್ರೆ ವಿಶ್ರಾಂತಿಯಲ್ಲಿಯೇ ಇದ್ದರು.ಅವರಿಗೂ ಆ ಬಗ್ಗೆ ಅಷ್ಟಾಗಿ ಗೊತ್ತಾಗಿಲ್ಲ. 2021ರ ಜನವರಿಯಿಂದ ಪಿಂಚಣಿಯನ್ನು ಸಂಪೂರ್ಣ ತಡೆಹಿಡಿದಿದ್ದಾರೆ ಎಂದು ಸೋಮಪ್ಪ ಅವರ ಪುತ್ರ ಹೇಮಂತಕುಮಾರ್ ಜೆ.ಡಿ. ತಿಳಿಸಿದರು
ಅದು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ತಾಂತ್ರಿಕ ದೋಷ. 25 ತಿಂಗಳಿಂದ ಸುಮಾರು ₹ 7.5 ಲಕ್ಷಕ್ಕೂ ಹೆಚ್ಚು ಪಿಂಚಣಿ ಹಣ ಬರಬೇಕು. ಇವರ ಖಾತೆಗೆ ಹಾಕಿರುವ ಹೆಚ್ಚುವರಿ ಕಳೆದರೂ ಇನ್ನೂ ಸುಮಾರು 2 ಲಕ್ಷ ಬಾಕಿ ಬರಬೇಕಿದೆ.ತಪ್ಪು ಮಾಡಿರುವ ಅಧಿಕಾರಿಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿ.ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ಹಾಸಿಗೆ ಹಿಡಿದಿರುವ ಅಮ್ಮನಿಗೆ ಸಮಸ್ಯೆ ಉಂಟಾಗಿದೆ.ಸರ್ಕಾರ ಕೂಡಲೆ ತಡೆಹಿಡಿದಿರುವ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಸಕಲೇಶಪುರ…..