ಬೆಂಗಳೂರು –
ಬೆಂಗಳೂರಿನಲ್ಲಿ ಏಪ್ರಿಲ್ 8 ರಂದು ಆರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ ಸಂಬಂಧ ರಾಜ್ಯ ಗೃಹ ಇಲಾಖೆಯಿಂದ ಸ್ಪೋಟ ಮಾಹಿತಿಯೊಂದನ್ನು ಹೋರಬಾಕಿದ್ದು ಸಧ್ಯ ಇದು ಬಹಿರಂಗವಾಗಿದೆ.ಹೌದು ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಇ ಮೇಲ್ ಗಳ ಹಿಂದೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಕೈವಾಡವಿರಬಹುದು ಎಂದು ನಗರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಇ-ಮೇಲ್ ಕಳುಹಿ ಸಿದ್ದ ನಾಲ್ಕು ಸರ್ವರ್ ಗಳ ಬಗ್ಗೆ ಗೂಗಲ್ ನೀಡಿದ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಪಾಕಿಸ್ತಾನದಿಂದ ಮೇಲ್ ಗಳು ಬಂದಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಆರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ- ಮೇಲ್ ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಗೃಹ ಇಲಾಖೆ ಮಹತ್ವದ ಮಾಹಿತಿ ಕಲೆಹಾಕಿದೆ ಈ ಬೆದರಿಕೆ ಬಾಂಬ್ ಕರೆ ಪಾಕಿಸ್ತಾನ ಭಯೋತ್ಪಾದಕರಿಂದ ಬಂದಿವೆ ಯಾ ಎಂಬುದನ್ನು ಹೆಚ್ಚಿನ ತನಿಖೆ ಕೈಗೊಂಡಿವೆ.ಏಪ್ರಿಲ್ 8 ರಂದು ಬೆಂಗಳೂರಿನ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂ, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರದ ಇಂಡಿ ಯನ್ ಪಬ್ಲಿಕ್ ಸ್ಕೂಲ್, ಹೆಬ್ಬಗೋಡಿ ವ್ಯಾಪ್ತಿಯ ಎಬಿನೈ ಸರ್ ಸ್ಕೂಲ್, ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್ ಗೆ ಬೆದರಿಕೆ ಕರೆ ಇ ಮೇಲ್ ಬಂದಿತ್ತು.