ಧಾರವಾಡ –
ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರವನ್ನು ಬಿಟ್ಟು ಹಾವೇರಿ ಜಿಲ್ಲೆಯ ಶಿಗ್ಗಾವಿ ಸವಣೂರು ಕ್ಷೇತ್ರ ದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಿ ದಾಡುತ್ತಿದೆ.ಹೀಗಾಗಿ ಈ ಒಂದು ಸುದ್ದಿಯನ್ನು ಕೇಳಿದ ಅವರ ಅಭಿಮಾನಿಗಳು ಆಪ್ತರು ಕ್ಷೇತ್ರ ದಲ್ಲಿನ ಪಕ್ಷದ ಕಾರ್ಯಕರ್ತರು ಮುಖಂಡರು ಸಧ್ಯ ವಿನಯ ಕುಲಕರ್ಣಿ ನಿವಾಸದ ಮುಂದೆ ಹೋರಾಟಕ್ಕೆ ಮುಂದಾಗಿದ್ದಾರೆ.
ಹೌದು ಧಾರವಾಡದಲ್ಲಿನ ಬಾರಕುಟ್ರಾ ದಲ್ಲಿನ ಮನೆಯ ಮುಂದೆ ಏಪ್ರೀಲ್ 2 ರಿಂದ ಈ ಒಂದು ಹೋರಾಟವನ್ನು ಮಾಡಲು ನಿರ್ಧಾರವನ್ನು ಕೈಗೊಂಡಿದ್ದಾರೆ.ವಿನಯ ಕುಲಕರ್ಣಿ ಅವರು ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂದು ಸುದ್ದಿಗಳು ಕೇಳಿ ಬರುತ್ತಿದ್ದು ಹೀಗಾಗಿ ಈ ಒಂದು ಸುದ್ದಿಯನ್ನು ಕೇಳಿ ಧಾರವಾಡ 71 ಕ್ಷೇತ್ರದ ಜನತೆಗೆ ತೀರ್ವ ಬೇಜಾರಾಗಿ ದಿನಾಂಕ 2/4/2023 ರಂದು ವಿನಯ ಕುಲಕರ್ಣಿ ಅವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡೋಣ ಎಂಬ ಸಂದೇಶವನ್ನು ವಿನಯ ಕುಲಕರ್ಣಿ ಅಭಿಮಾನಿಗಳು ಆಪ್ತರು ಪಕ್ಷದ ಕಾರ್ಯಕರ್ತರು ಮುಖಂಡರು ಕರೆ ನೀಡಿದ್ದಾರೆ.
ರಾಜ್ಯದಲ್ಲೇ ಧಾರವಾಡ 71 ಕ್ಷೇತ್ರವನ್ನು ಅತಿ ಹೆಚ್ಚು ಅಭಿವೃದ್ಧಿ ಮಾಡಿ ಕ್ಷೇತ್ರದ ಜನತೆಯ ಜೊತೆ ಉತ್ತಮವಾದ ಸಂಬಂಧ ಇಟ್ಟುಕೊಂಡಿರುವ ಇವರು ಜನರ ಕಷ್ಟ ಸುಖದಲ್ಲಿ ಪಾಲ್ಗೊಂಡು ಜನರ ಸಮಸ್ಯೆಯನ್ನು ಸ್ಥಳದಲ್ಲಿ ಪರಿಹಾರ ಮಾಡುವ ಒಬ್ಬ ನಾಯಕನನ್ನು ಧಾರವಾಡ 71 ಕ್ಷೇತ್ರದ ಜನತೆ ಅವರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ .
ಅವರು ಕ್ಷೇತ್ರಕ್ಕೆ ಬರದೆ ಇದ್ರು ಅವರು ಮಾಡಿದ ಅಭಿವೃದ್ಧಿ ಕೆಲಸವನ್ನು ಜನರಿಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ತಿಳಿಸಿ ಅವರನ್ನು ಆರಿಸಿ ತರಲು ಹಗಲು ರಾತ್ರಿ ಎನ್ನದೆ ಒಂದು ರುಪಾಯಿ ಹಣವನ್ನು ಬಯಸದೆ ಅವರ ಗೆಲುವಿಗೆ ಶ್ರಮಿಸು ತ್ತೆವೆ ಆದ್ದರಿಂದ ಕಾಂಗ್ರೆಸ್ ವರಿಷ್ಠರು ವಿನಯ ಕುಲಕರ್ಣಿ ಅವರಿಗೆ 71 ನೇ ಕ್ಷೇತ್ರದ ಟಿಕೆಟ್ ನ್ನು ಘೋಷಣೆ ಮಾಡಬೇಕು ಮತ್ತು ವಿನಯ ಕುಲಕರ್ಣಿ ಅವರು ಧಾರವಾಡ 71 ನೇ ಕ್ಷೇತ್ರದಲ್ಲಿ ನಿಲ್ಲುತ್ತೆನೆ ಎಂಬ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಒತ್ತಾಯವನ್ನು ಮಾಡುತ್ತಾ ಸಾಂಕೇತಿಕ ವಾಗಿ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ
ವಿನಯ ಕುಲಕರ್ಣಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಒಂದು ಒತ್ತಡದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಈ ಒಂದು ಸಂದೇಶ ವೈರಲ್ ಆಗಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..