This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ತಂದೆ ತಾಯಿಗೆ ರಕ್ಷಣೆ ನೀಡಿದರೆ SIT ಮುಂದೆ ಹಾಜರಾಗುತ್ತೆನೆ – ಸಿಡಿ ಲೇಡಿ ಹೊಸ ಬಾಂಬ್…..

WhatsApp Group Join Now
Telegram Group Join Now

ಬೆಂಗಳೂರು –

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿಡಿಯೋದಲ್ಲಿ ಇದ್ದಳೆನ್ನಲಾದ ಯುವತಿ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಹೌದು ಅಜ್ಞಾತ ಸ್ಥಳದಿಂದ ಮತ್ತೊಂದು ವಿಡಿಯೋ ದಲ್ಲಿ ಯುವತಿ ಮಾತನಾಡಿ ರಿಲೀಸ್ ಮಾಡಿದ್ದು ತನ್ನ ಮನೆಯವರಿಗೆ ರಕ್ಷಣೆ ಕೊಟ್ಟರೆ ಮಾತ್ರ ತಾನು ಎಸ್ ಐಟಿ ವಿರುದ್ಧ ಹಾಜಾರಾಗುತ್ತೇನೆ ಎಂದು ಹೇಳಿದ್ದಾಳೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ರುವ ಯುವತಿ ನನ್ನ ಅಪ್ಪ ಅಮ್ಮ ಸ್ವ ಇಚ್ಛೆಯಿಂದ ದೂರು ನೀಡಿಲ್ಲ ಎಂದು ನನಗೆ ಗೊತ್ತು. ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದಾದಾಗ ಹೆದರುವ ಯಾವುದೇ ಅವಶ್ಯಕತೆಯಿಲ್ಲ. ನನಗೆ ನನ್ನ ಅಪ್ಪ ಅಮ್ಮನ ಸುರಕ್ಷತೆ ನನಗೆ ಮುಖ್ಯ.ಅವರು ಸುರಕ್ಷತೆ ಯಿಂದ ಇದ್ದಾರೆ ಎಂದು ನನಗೆ ಗೊತ್ತಾಗುತ್ತೋ ಆಗಲೇ ನಾನು SIT ಯವರ ಮುಂದೆ ಬಂದು ಹೇಳಿಕೆ ನೀಡುತ್ತೇನೆ ಎಂದು ವಿಡಿಯೋ ದಲ್ಲಿ ಹೇಳಿದ್ದಾಳೆ.

ನನ್ನ ಅಪ್ಪ ಅಮ್ಮನಿಗೆ ರಕ್ಷಣೆ ಕೊಡಿ ಎಂದು ನನಗೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಿಗೆ, ಮಹಿಳಾ ಸಂಘಟನೆಯವರಿಗೆ ಕೇಳಿಕೊಳ್ಳುತ್ತೇನೆ ನನಗೆ ನ್ಯಾಯ ಸಿಗುವ ಬಗ್ಗೆ ಎರಡು ದಿನದಿಂದ ಭರವಸೆಯಿದೆ ಎಂದಿದ್ದಾಳೆ.

ಮಾ.12ರಂದು ಒಂದು ವಿಡಿಯೋ ಮಾಡಿ ಪೊಲೀಸ್ ಆಯುಕ್ತರಿಗೆ ಮತ್ತು SIT ಅವರಿಗೆ ವಿಡಿಯೋ ಕಳಿಸಿದ್ದೆ. ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ಅರ್ಧ ಗಂಟೆಯಲ್ಲಿ ವಿಡಿಯೋ ರಿಲೀಸ್ ಮಾಡಲಾಗಿದೆ. ಹೀಗಾಗಿ ನನಗೆ SIT ಯಾರ ಪರವಾಗಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಯಾರನ್ನು ಸೇಫ್ ಮಾಡುತ್ತಿದ್ದಾ ರೆಂದು ಗೊತ್ತಾಗುತ್ತಿಲ್ಲ ಎಂದು ಯುವತಿ ವಿಡಿಯೋ ದಲ್ಲಿ ಹೇಳಿದ್ದಾಳೆ.

ಒಟ್ಟಾರೆ ಆ ಸಿಡಿ ಯಲ್ಲಿನ ಲೇಡಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು ಇದರ ನಡುವೆ ಮತ್ತೇನು ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು‌


Google News

 

 

WhatsApp Group Join Now
Telegram Group Join Now
Suddi Sante Desk