This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಎಲ್ಲರೂ ಸೇರಿ ಶಿಕ್ಷಕರ ವರ್ಗಾವಣೆಗೆ ಇತಿ ಶ್ರೀ ಹಾಡೊಣ ಬಸವರಾಜ ಹೊರಟ್ಟಿ – ಧಾರವಾಡ ದಲ್ಲಿ ಯಶಸ್ವಿಯಾಗಿ ನಡೆಯಿತು ಅಂತಾರಾಷ್ಟೀಯ ಶಿಕ್ಷಕ ದಿನೋತ್ಸವ ಸಮಾರಂಭ…..

WhatsApp Group Join Now
Telegram Group Join Now

ಧಾರವಾಡ –

ಅಂತಾರಾಷ್ಟೀಯ ಶಿಕ್ಷಕ ದಿನೋತ್ಸವದಲ್ಲಿ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಅಭಿನಂದನೆ ವಿವಿಧ ಪ್ರಶಸ್ತಿಗಳ ಪ್ರದಾನ

ಪ್ರಾಥಮಿಕ,ಪ್ರೌಢ,ಪದವಿ-ಪೂರ್ವ,ಪದವಿ ಮತ್ತು ವಿಶ್ವ ವಿದ್ಯಾಲಯಗಳ ಶಿಕ್ಷಕರ ಅನೇಕ ಸಮಸ್ಯೆಗಳ ಅರಿವು ತಮಗಿದ್ದು,ಎಲ್ಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸರಕಾರದ ಹಂತದಲ್ಲಿ ತಾವು ಪ್ರಾಮಾಣಿಕವಾಗಿ ಸ್ಪಂದಿಸಿ ಶಕ್ತಿಮೀರಿ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡದ ಕವಿವ ಸಂಘದ ಸಭಾಭವನದಲ್ಲಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ಅಂತಾರಾಷ್ಟೀಯ ಶಿಕ್ಷಕ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಳೆದ ೪೨ ವರ್ಷಗಳ ಸುದೀರ್ಘ ಅವಧಿಯಲ್ಲಿ ಎಲ್ಲಾ ಹಂತಗಳ ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಿದ್ದು,ಸರಕಾರದಿಂದ ಆದೇಶ ಮಾಡಿಸುವಲ್ಲಿ ಸಫಲನಾಗಿದ್ದೇನೆ.ಪ್ರಸ್ತುತ ಸಭಾಪತಿ ಹುದ್ದೆಯ ಅಧಿಕಾರದ ಮೂಲಕ ಬರುವ ದಿನಗಳಲ್ಲಿ ಪ್ರಾಥಮಿಕ,ಪ್ರೌಢ, ಪದವಿ- ಪೂರ್ವ,ಪದವಿ ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿಯೇ ಉನ್ನತ ಮಟ್ಟದ ಪ್ರತ್ಯೇಕ ಸಭೆಗಳನ್ನು ಜರುಗಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

೪೮ ಸಾವಿರ ಶಿಕ್ಷಕರ ನೇಮಕ ತಾವು ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯವ್ಯಾಪಿ ೧೦೩೯ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಿದ್ದು ದಾಖಲೆಯಾಗಿದೆ. ಜೊತೆಗೆ ೨೪ ಸಾವಿರ ಪ್ರಾಥಮಿಕ, ೨೨ ಸಾವಿರ ಪ್ರೌಢ ಹಾಗೂ ೨ ಸಾವಿರ ಪದವಿ-ಪೂರ್ವ ಕಾಲೇಜು ಶಿಕ್ಷಕರ ನೇಮಕ ಮಾಡಿದ್ದನ್ನು ನೆನಪಿಸಿದ ಅವರು, ಕರ್ನಾಟಕ ಸಿವ್ಹಿಲ್ ಸೇವೆಗಳ ವರ್ಗಾವಣೆ ನಿಯಂತ್ರಣ ಅಧಿನಿಯಮ ರೂಪಿಸಿ ವರ್ಗಾವಣೆ ದಂಧೆಯಲ್ಲಿ ನಡೆಯುತ್ತಿದ್ದ ಬಹು ಕೋಟಿ ರೂ.ಗಳ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇನೆ ಎಂದೂ ಹೊರಟ್ಟಿ ಹೇಳಿದರು.

ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚನ ನೀಡಿ,ಮನುಕುಲಕ್ಕೆ ಅಗತ್ಯ ಬೇಕಾದ ಅಕ್ಷರ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೋಧಿಸುವ ಶಿಕ್ಷಕರ ಸೇವೆಯ ಸ್ಮರಣೆ ನಿರಂತರವಾಗಿ ನಡೆಯಲಿ ಎಂದರು.ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಶಿಕ್ಷಕರ ಸಂಘದ ಅಧ್ಯಕ್ಷ ಗುರು ತಿಗಡಿ, ‘ಜೀವನ ಶಿಕ್ಷಣ’ ಮಾಸಪತ್ರಿಕೆ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ಹಾಗೂ ಶಿಕ್ಷಕಿ ಶಕುಂತಲಾ ಅರಮನಿ ಮಾತನಾಡಿದರು.ಶಿಕ್ಷಣ ಇಲಾಖೆ ಅಧಿಕಾರಿಗಳಾದ ಮೋಹನಕುಮಾರ ಹಂಚಾಟೆ, ಗಿರೀಶ ಪದಕಿ,ಉಮೇಶ ಬಮ್ಮಕ್ಕನವರ,ಎ.ಎ.ಖಾಜಿ, ಸುರೇಶ ಹುಗ್ಗಿ,ಎಸ್.ಎಂ.ಹುಡೇದಮನಿ,ವಿವಿಧ ಶಿಕ್ಷಕ ಸಂಘಟನೆಗಳ ಪರವಾಗಿ ಜಿ.ಆರ್.ಭಟ್,ಶಾಮ ಮಲ್ಲನಗೌಡರ,ಗುರು ಪೋಳ,ಎಸ್.ಬಿ.ಪಾಟೀಲ, ಎಲ್.ಐ.ಲಕ್ಕಮ್ಮನವರ,ಎಂ.ಎನ್.ಸತ್ತೂರ, ಶಾರದಾ ಶಿರಕೋಳ, ಗಂಗವ್ವ ಕೋಟಿಗೌಡರ,ಮಹಾದೇವಿ ದೊಡಮನಿ, ಪ್ರಭಾಕರ ಗರಗ, ಮಂಜುನಾಥ ಪೂಜಾರ, ಅಯ್ಯಪ್ಪ ಮೊಖಾಶಿ, ರುದ್ರಪ್ಪ ಕುರ್ಲಿ, ಎಂ.ಡಿ. ಹೊಸಮನಿ ವೇದಿಕೆಯಲ್ಲಿದ್ದರು.

ಮನವಿ ಅರ್ಪಣೆ -ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗುರು ತಿಗಡಿ, ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಘಟ್ಟಿ, ಜಿಲ್ಲಾಧ್ಯಕ್ಷ ಆರ್.ಎಸ್. ಹಿರೇಗೌಡರ ಹಾಗೂ ಕಾರ್ಯದರ್ಶಿ ಎಸ್.ಬಿ. ಶಿವಸಿಂಪಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಅರ್ಪಿಸಿದರು.

ಅಭಿನಂದನೆ : ವಿಧಾನ ಪರಿಷತ್ ಸದಸ್ಯರಾಗಿ ೪೨ ವರ್ಷಗಳನ್ನು ಪೂರೈಸಿರುವ ಮಾಜಿ ಶಿಕ್ಷಣ ಸಚಿವ ಮತ್ತು ಪ್ರಸ್ತುತ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.ಗ್ರಾ.ಪಂ. ಸದಸ್ಯರುಗಳಾದ ಸಿ.ಎಂ.ಕಿತ್ತೂರ ಮತ್ತು ಭೀಮಪ್ಪ ಕಾಸಾಯಿ,ಎಚ್.ಎಸ್.ಬಡಿಗೇರ,ನಾರಾಯಣ ಭಜಂತ್ರಿ, ಪ್ರೇಮಾ ಆರಟ್ಟಿ,ಸುಮಿತಾ ಹಿರೇಮಠ, ಕೆ.ಎಲ್.ಕರ್ಚಕಟ್ಟಿ, ಎಂ.ಜಿ.ಸುಬೇದಾರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರು ಹಾಗೂ ಶಾಲೆಗ ಳಿಗೆ ಪ್ರಶಸ್ತಿ ನೀಡಲಾಯಿತು.ಶಿಕ್ಷಕರ ಸಂಘದ ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳಾದ ಚಂದ್ರಶೇಖರ ತಿಗಡಿ, ಭಾರತಿ ಸಾಧನಿ, ಆರ್.ಬಿ. ಮಂಗೋಡಿ,ಸಿ.ಎಂ.ಹೂಲಿ, ಅಲ್ಲಾಭಕ್ಷ ನದಾಫ, ಎಂ.ಐ.ದೀವಟಗಿ, ಐ.ಎಚ್. ನದಾಫ್, ಎ.ಎ. ಮುಲ್ಲಾ, ಹೇಮನಗೌಡ ಬದ್ನೂರ, ನಾಗವೇಣಿ ಭಟ್, ಜೆ.ಜೆ. ಹೆಬ್ಬಾಳ,ಆರ್.ಎನ್. ಬಸ್ತವಾಡಕರ, ರಂಜನಾ ಪಂಚಾಳ,ಎಂ.ಟಿ.ಸುಂಕದ, ವ್ಹಿ.ಟಿ. ಭಜಂತ್ರಿ, ಸುರೇಶ ಪಾಟೀಲ ಇದ್ದರು.ಶಿಕ್ಷಕ ಲಮಾಣಿ ಪ್ರಾರ್ಥನೆ ಹಾಡಿದರು. ಕಾಶಪ್ಪ ದೊಡವಾಡ ಸ್ವಾಗತಿಸಿದರು. ಎಸ್.ಬಿ. ಶಿವಸಿಂಪಿ ನಿರೂಪಿಸಿದರು. ಆರ್.ಎಸ್. ಹಿರೇಗೌಡರ ವಂದಿಸಿದರು.


Google News

 

 

WhatsApp Group Join Now
Telegram Group Join Now
Suddi Sante Desk