ಶಿವಮೊಗ್ಗ -
ಶಾಲೆಯ ಕೆಲಸವೇ ಬದುಕಿನ ಬದ್ಧತೆ ಎಂದು ಭಾವಿಸಿ ಕೆಲಸ ಮಾಡುವ ಜಿಲ್ಲೆಯ ಶಿಕ್ಷಕರ ಬಗ್ಗೆ ಅದೊಂದು ದಿನ ಚರ್ಚಿಸುತ್ತಿದ್ದ ಶಿವಮೊಗ್ಗ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ, ಗೆಳೆಯ ಪರಶುರಾಮ್, ತಾವು ಈ ಹಿಂದೆ ತೀರ್ಥಹಳ್ಳಿಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಕೊಂಡ್ಲೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಂಪತ್ ಅವರ ಕಾರ್ಯಶೈಲಿಯನ್ನು ಪ್ರಸ್ತಾಪಿಸಿದರು ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಾ, ಹಗಲಿ ರುಳು ಶಾಲೆಯ ಎಂಟು ಎಕರೆ ಜಮೀನನ್ನು ಸಮೃದ್ಧ ತೋಟವಾಗಿಸಿ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಖಾತೆಗೆ ಬರಪೂರ ಆದಾಯ ಬರುವಂತೆ ಮಾಡಿರುವ ಹಾಗೂ ಶಾಲೆಯನ್ನು ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಫಲಿತಾಂಶ ಪಡೆಯುವ ಹಂತಕ್ಕೆ ತಂದಿರುವ ಸಂಗತಿ ಗೊತ್ತಾಯಿತು.ಹೀಗಾಗಿ ಕೊಂಡ್ಲೂರಿಗೆ ತೆರಳಿ ಪರಿಸರ ವನ್ನು ಕಣ್ತುಂಬಿಕೊಳ್ಳುವ ಪ್ರಯತ್ನಕ್ಕೆ ಮುಂದಾದೆನು. ನನ್ನೊಂದಿಗೆ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಕೂಡ ಜೊತೆಯಾದರು ತೀರ್ಥಹಳ್ಳಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಕೊಂಡ್ಲೂರಿನ ಶಾಂತವೇರಿ ಗೋಪಾಲಗೌಡ ಸರ್ಕಾರಿ ಪ್ರೌಢಶಾಲೆಗೆ ಬೆಳಿಗ್ಗೆ ತೆರಳಿ ದ್ದಾಗ ತುಸು ಸಂಕೋಚದಿಂದಲೇ ಮುಖ್ಯ ಶಿಕ್ಷಕ ಎಚ್.ವಿ.ಸಂಪತ್ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಮಕ್ಕಳ ಬಳಗ ನಮ್ಮನ್ನು ಸ್ವಾಗತಿಸಿತು ಶಾಲೆಯ ಅಂಗಳದಲ್ಲೇ ಬೆಳೆದ ತಾವರೆ ಹೂ (ಕಮಲ) ಕೈಗಿತ್ತ ಮಕ್ಕಳು ನಮ್ಮನ್ನು ಇದಿರುಗೊಂಡರು.
ಅಲ್ಲಿನ ಅಡಿಕೆ ತೆಂಗು, ಗೇರು (ಗೋಡಂಬಿ), ರಬ್ಬರ್ ತೋಟದ ಅಂಗಳದಲ್ಲಿ ಅಡ್ಡಾಡುತ್ತಾ ಈಗ ಅಡಿಕೆ, ತೆಂಗಿನ ಗೊನೆ ತುಂಬಿ ತೊನೆಯುತ್ತಿದ್ದ ಗಿಡ–ಮರಗಳ ಪರಿಚಯ ಮಾಡಿಕೊಡುತ್ತಾ ನಮ್ಮೊಂದಿಗೆ ಹೆಜ್ಜೆ ಹಾಕಿದ ಸಂಪತ್ ಕಳೆದ 9 ವರ್ಷಗಳ ಹಸಿರ ಹಾದಿಯ ಪಯಣವನ್ನು ಎದುರು ಬಿಚ್ಚಿಟ್ಟರು ‘2001ರಲ್ಲಿ ನಾನು ಬಿ.ಇಡಿ ಮುಗಿಸಿದ್ದಾಗ ತೀರ್ಥ ಹಳ್ಳಿಯ ಯಾವುದಾದರೂ ಶಾಲೆಯಲ್ಲಿ ₹600 ವೇತನಕ್ಕೆ ಕೆಲಸ ಸಿಕ್ಕರೆ ಸಾಕು ಎಂದು ಹುಡುಕುತ್ತಿದ್ದೆ. ಆದರೆ ಈಗ ಸರ್ಕಾರ ನನಗೆ ನೌಕರಿ ಕೊಟ್ಟು ನಿತ್ಯ ₹4,000ದಂತೆ ಕೈತುಂಬಾ ಸಂಬಳ ಕೊಡುತ್ತಿದೆ ಈ ವ್ಯವಸ್ಥೆಯ ಋಣ ತೀರಿಸುವ ಪುಟ್ಟ ಪ್ರಯತ್ನವಿದು. ಇದರಲ್ಲಿ ಮಹತ್ವದ್ದೇನೂ ಇಲ್ಲ. ಕೆಲಸದ ಹೊತ್ತಿನ ಬಿಡುವಿನಲ್ಲಿ ಮಾಡಿದ್ದು. ನನ್ನೊಂದಿಗೆ ಶಾಲೆಯ ಶಿಕ್ಷಕರು, ಮಕ್ಕಳು, ಸಮುದಾಯ ಕೂಡ ಕೈ ಜೋಡಿಸಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದ್ದೇನೆ’ ಎನ್ನುತ್ತಾ ಸಂಕೋಚದ ಚಿಪ್ಪಿನಲ್ಲಿ ಹುದುಗಿಕೊಂಡರು.
ಕೊಂಡ್ಲೂರಿನ ಸರ್ಕಾರಿ ಶಾಲೆಯಲ್ಲಿ ಒಂದೂವರೆ ಎಕರೆಯಷ್ಟು ಅಡಿಕೆ, ಮೂರು ಎಕರೆ ಗೋಡಂಬಿ (ಗೇರು), ಒಂದು ಎಕರೆಯಲ್ಲಿ 40 ತೆಂಗಿನ ಮರ, ಉಳಿದ ಜಮೀನಿನಲ್ಲಿ ರಬ್ಬರ್, ಅಪ್ಪೆ ಮಿಡಿ ಮಾವು ಬೆಳೆಯಲಾಗಿದೆ. ಕಾಳು ಮೆಣಸಿನ ಬಳ್ಳಿ, ಸೀಬೆ, ಮಾವು, ಹಲಸು ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳು ಜಾಗ ಪಡೆದಿವೆ.ಶಾಲೆಯ ಮುಂಭಾಗದ ಕೊಳದಲ್ಲಿ 11 ಬಣ್ಣಗಳ ಕಮಲ, ನಾಲ್ಕು ಬಣ್ಣದ ಗ್ಲಾಡಿಯಸ್, ಬಗೆ ಬಗೆಯ ಆರ್ಕಿಡ್ ನಗೆ ಚೆಲ್ಲುತ್ತಿವೆ. ತೋಟದಂದ ಪ್ರತಿ ವರ್ಷ ಬರುತ್ತಿರುವ ಲಕ್ಷಾಂತರ ರೂಪಾಯಿ ಆದಾಯ ಶಾಲೆಯ ಎಸ್‌ಡಿಎಂಸಿ ಖಾತೆಗೆ ಜಮೆ ಆಗುತ್ತಿದೆ. ಅಲ್ಲಿ ಬೆಳೆದ ಹಣ್ಣು, ಕಾಯಿ, ತರಕಾರಿ ಮಧ್ಯಾಹ್ನದ ಬಿಸಿಯೂಟಕ್ಕೂ ಬಳಕೆ ಯಾಗುತ್ತಿದೆ.
ಶಾಲೆಯ ಆ ಜಾಗದಲ್ಲಿ ಈ ಮೊದಲು ಅಕೇಶಿಯಾ ನೆಡುತೋಪು ಇತ್ತು. ಅದರ ಕಡಿತಲೆಯ ನಂತರ ಆ ಜಾಗ ಹಾಳು ಬಿದ್ದಿತ್ತು. ಸಂಪತ್ ಸರ್ ಬಂದ ನಂತರ ತೋಟ ಬೆಳೆಸಿದ್ದಾರೆ. ಅದಕ್ಕಾಗಿ ಅವರು ಬರೋಬ್ಬರಿ 10 ವರ್ಷ ಶ್ರಮ ಹಾಕಿದ್ದಾರೆ. ತೋಟದಲ್ಲಿ ಗುಂಡಿ ತೋಡಲು, ಸಸಿ ನೆಡಲು, ಮಣ್ಣು ತುಂಬಲು ಎಲ್ಲ ಕೆಲಸ ತಾವೇ ಮಾಡಿದ್ದಾರೆ. ಎಲ್ಲಿಯೂ ಆಳು–ಕಾಳು ಬಳಕೆ ಆಗಿಲ್ಲ. ಗಿಡಗಳ ತರಲು, ಡ್ರಿಪ್ ಮಾಡಿಸಲು ತಮ್ಮ ಜೇಬಿನಿಂದ ₹ 4 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಅಭಿಮಾನದಿಂದ ಹೇಳುತ್ತಾರೆ.
ಹಾಗೆಂದು ಸಂಪತ್ ತರಗತಿಯ ಅವಧಿಯಲ್ಲಿ ತೋಟ ಬೆಳೆಸಲು ಹೋಗಿಲ್ಲ. ಪಾಠದ ಅವಧಿಯಲ್ಲಿ ಮಕ್ಕಳಿಗೆ ನೆಚ್ಚಿನ ಶಿಕ್ಷಕ. ವಿರಾಮದ ಅವಧಿಯನ್ನು ತೋಟದ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ. ತಾವೇ ಗುರುತು (ಮಾರ್ಕ್) ಮಾಡಿ ಗುಂಡಿ ತೋಡಿ ಅಡಿಕೆ ಸಸಿ ತಂದು ಹಾಕಿದ್ದಾರೆ. ಆರಂಭದ ದಿನಗಳಲ್ಲಿ ಶಾಲೆಯ ಎದುರು ಇರುವ ಬಾವಿಯಿಂದ ನೀರು ಸೇದಿ ತೋಟಕ್ಕೆ ನೀರುಣಿಸಿದ್ದಾರೆ ಅವರ ಕೆಲಸದ ಬದ್ಧತೆಯ ಬಗ್ಗೆ ತಿಳಿದುಕೊಂಡು ತೀರ್ಥಹಳ್ಳಿಯ ಶಾಸಕರಾಗಿದ್ದ ವೇಳೆ ಕಿಮ್ಮನೆ ರತ್ನಾಕರ ಅವರು ಕೊಳವೆಬಾವಿ ಕೊರೆಸಿಕೊಟ್ಟಿದ್ದಾರೆ ಎನ್ನುತ್ತಾರೆ.
ಈಗ ತೋಟದ ಗಿಡ–ಮರಗಳೆಲ್ಲ ಬೆಳೆದು ನಿಂತಿವೆ. ಈಗಲೂ ಇಲ್ಲಿನ ಕೆಲಸಕ್ಕೆ ಕಾರ್ಮಿಕರನ್ನು ಕರೆಯು ವುದಿಲ್ಲ. ಗೇರು ಹಣ್ಣು ಕೀಳುವುದು, ಅಡಿಕೆ ಕೊಯ್ಲು ಎಲ್ಲವನ್ನೂ ಸಂಪತ್ ಅವರೇ ಮಾಡುತ್ತಾರೆ. ಕೆಲವೊಮ್ಮೆ ಮಕ್ಕಳಿಂದಲೂ ನೆರವು ಸಿಗುತ್ತದೆ ಎಂದು ಹಿರಿಯ ವಿದ್ಯಾರ್ಥಿ ಶ್ರೀಧರ್ ಹೇಳುತ್ತಾರೆ‘ಈಗಷ್ಟೇ ಅಡಿಕೆ, ತೆಂಗು, ರಬ್ಬರ್, ಗೇರು ಫಸಲು ಆರಂಭ ವಾಗಿದೆ. ತೋಟದ ಆದಾಯದ ಪ್ರತೀ ಪೈಸೆಯೂ ಶಾಲಾಭಿವೃದ್ಧಿ ಸಮಿತಿ ಖಾತೆಗೆ ಬರುವಂತೆ ಮುಖ್ಯ ಶಿಕ್ಷಕರು ಮಾಡಿದ್ದಾರೆ. ಕೆಲ ವರ್ಷಗಳಲ್ಲಿ ನಮ್ಮೂರ ಶಾಲೆ ಆರ್ಥಿಕವಾಗಿ ಸದೃಢಗೊಂಡು, ಸರ್ಕಾರದ ಅನುದಾನಕ್ಕೆ ಕಾಯುತ್ತಾ ಕೂರುವುದು ತಪ್ಪಲಿದೆ. ಇನ್ನು ನಾವು ಸ್ವಾವಲಂಬಿಗಳು‘ ಎಂದು ಶ್ರೀಧರ್ ಮೆಚ್ಚುಗೆಯಿಂದ ಹೇಳುತ್ತಾರೆ.
ತೋಟದಲ್ಲಿ ಗಿಡಮೂಲಿಕೆಗಳ ಬೆಳೆಸಲು,ತಾವರೆ ಕೊಳದ ನಿರ್ವಹಣೆ, ಉದ್ಯಾನವನದ ಸೌಂದರ್ಯೀ ಕರಣಕ್ಕೆ ಸಹ ಶಿಕ್ಷಕರಾದ ಮಂಜುಳಾ ಬಿ. ಗೌಡ್ರು, ಸಾಯಿದಾ ಬೇಗಂ, ವೀಣಾ ಪಿ., ಶೀಲಾ ಪಿ.ಓ., ಗಂಗಾಧರ್, ಅತಿಥಿ ಶಿಕ್ಷಕಿ ವನಿತಾ ಹಾಗೂ ಬಿಸಿ ಯೂಟ ಸಿಬ್ಬಂದಿ ನಾಗರತ್ನ ಮತ್ತು ಗಾಯತ್ರಿ ಬೆಂಬಲ ವಾಗಿ ನಿಂತಿದ್ದಾರೆ.ವಿದ್ಯಾರ್ಥಿಗಳು ಸಹ ತಮ್ಮ ಬಿಡುವಿನ ವೇಳೆಯಲ್ಲಿ ಗಿಡಗಳ ಆರೈಕೆಯಲ್ಲಿ ತೊಡಗಿ ಸಿಕೊಳ್ಳುವ ಮೂಲಕ ಪ್ರಾಯೋಗಿಕ ಕಲಿಕೆಯನ್ನು ಪಡೆಯುತ್ತಿದ್ದಾರೆ. ತೋಟಗಳ ನಿರ್ವಹಣೆ, ಅಡಿಕೆ, ತೆಂಗು ಕೊಯ್ಲು, ಗೇರು ಹಣ್ಣಿನಿಂದ ಬೀಜ ಬೇರ್ಪ ಡಿಸುವ ಕ್ರಮ, ರಬ್ಬರ್ ತೋಟದಲ್ಲಿ ಹಾಲು ಇಳಿಸು ವುದು, ಕಾಲಮಾನಕ್ಕೆ ತಕ್ಕಂತೆ ಗೊಬ್ಬರು–ಗೋಡು ಒದಗಿಸುವುದು, ಕಳೆ ನಿರ್ವಹಣೆ, ನೀರಿನ ವ್ಯವಸ್ಥೆ ಹೀಗೆ ಎಲ್ಲವನ್ನೂ ಶಾಲೆಯ ಮಕ್ಕಳು ಅರಿತಿದ್ದಾರೆ
ಶೈಕ್ಷಣಿಕವಾಗಿಯೂ ಈ ಶಾಲೆ ತಾಲೂಕಿನಲ್ಲಿಯೇ ಮುಂಚೂಣಿಯಲ್ಲಿದೆ. ಒಟ್ಟು 93 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆ, ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ನಿರಂತರವಾಗಿ ಶೇಕಡಾ 100 ಫಲಿತಾಂಶ ಪಡೆಯುತ್ತಿದೆ. ಈ ಬಾರಿ (2025–26) ಶೇಕಡಾ 91.4 ರಷ್ಟು ಸರಾಸರಿ ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಫಲಿತಾಂಶ ಪಡೆಯುವ ಮಾದರಿ ಶಾಲೆ ಎಂಬ ಶ್ರೇಯಕ್ಕೂ ಪಾತ್ರವಾಗಿದೆ. ಮಕ್ಕಳನ್ನು ಕಲಿಕೆ ಯಲ್ಲಿ ತೊಡಗಿಸಲು ಶಿಕ್ಷಕರು ಬೆಳಿಗ್ಗೆ ಮತ್ತು ಸಂಜೆ ವೇಳೆ ಮನೆಗಳಿಗೆ ಭೇಟಿ ನೀಡಿ ಅವರ ಅಭ್ಯಾಸವನ್ನು ಪರಿಶೀಲಿಸುವುದು, ನಸುಕಿನಲ್ಲಿ ಅವರನ್ನು ಎಬ್ಬಿಸು ವುದು,ರಜಾ ದಿನಗಳಲ್ಲಿ ಹಾಗೂ ಶಾಲೆಯ ಅವಧಿಯ ನಂತರವೂ ವಿಶೇಷ ತರಗತಿಗಳನ್ನು ನಡೆಸುವುದು ಈ ಉತ್ತಮ ಫಲಿತಾಂಶಕ್ಕೆ ಕಾರಣ ಎಂದು ಹಿರಿಯ ವಿದ್ಯಾರ್ಥಿ ಅಭಿನಯ್ ಹೇಳುತ್ತಾರೆ.
‘ದಸರಾ ರಜೆಯನ್ನು ಬದಿಗಿಟ್ಟು ಇಲ್ಲಿನ ಶಿಕ್ಷಕರು ಶಾಲೆಗೋಸ್ಕರ ಕೆಲಸ ಮಾಡುತ್ತಾರೆ. ಹಿರಿಯ ವಿದ್ಯಾರ್ಥಿಗಳ ಸಂಘ ರಚಿಸಿ ಶಾಲೆಯ ಬೆಳವಣಿಗೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಣ, ಕ್ರೀಡೆ ಎಲ್ಲದ ರಲ್ಲೂ ಮುಂಚೂಣಿಯಲ್ಲಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ’ ಎಂದು ಅಭಿನಯ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ.....