LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಹೊಸ ರೂಪ.....

ಬೆಂಗಳೂರು -

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೀಡ ಲಾಗುವ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಸುಧಾರಿಸಲು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ ಮಕ್ಕಳಿಗೆ ಕೇವಲ ಹೊಟ್ಟೆ ತುಂಬಿಸುವ ಊಟ ನೀಡುವುದಷ್ಟೇ ಅಲ್ಲದೆ, ಅಗತ್ಯ ಪೌಷ್ಟಿಕಾಂಶ,ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸುವ ಉದ್ದೇಶದಿಂದ ವಿಶೇಷ ಆಡಿಟ್ ವ್ಯವಸ್ಥೆ ರೂಪಿಸುವ ಚಿಂತನೆ ನಡೆಸಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಈ ಯೋಜನೆಯಲ್ಲಿ ಆಹಾರದ ಗುಣಮಟ್ಟ ಹಾಗೂ ವಿತರಣೆಯಲ್ಲಿ ಸಮಾನತೆ ಕಾಪಾಡಲು ಇಲಾಖೆ ಒತ್ತು ನೀಡುತ್ತಿದೆ.ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ 1,591 ಕೋಟಿ ರೂಪಾಯಿ ನೆರವು ದೊರೆತಿದೆ. ರಾಜ್ಯ ಸರ್ಕಾರವೂ ಸಾರ್ವಜನಿಕರ ತೆರಿಗೆ ಹಣವನ್ನು ಈ ಯೋಜನೆಗೆ ವೆಚ್ಚ ಮಾಡುತ್ತಿದೆ. ಹೀಗಾಗಿ ಮಕ್ಕಳಿಗೆ ವಿತರಿಸುವ ಆಹಾರದಲ್ಲಿ ನಿಗದಿತ ಗುಣಮಟ್ಟದ ಮಾನದಂಡ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ವಿಶೇಷ ಆಡಿಟ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ.

ಆಹಾರ ತಯಾರಿಕೆ, ವಿತರಣೆ, ಪೌಷ್ಟಿಕಾಂಶದ ಪ್ರಮಾಣ ಮತ್ತು ಮಕ್ಕಳಿಗೆ ಸಿಗುವ ಆಹಾರದ ಗುಣಮಟ್ಟದ ಮೇಲೆ ನಿರಂತರ ನಿಗಾ ಇಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡುವುದು ಸೇರಿದಂತೆ ಆಹಾರ ವಿತರಣೆಯಲ್ಲಿ ಸಮಾನತೆ ಕಾಪಾಡಲು ಇಲಾಖೆ ಮುಂದಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ.....DDPI ಅಧಿಕಾರಿಗಳ ವರ್ಗಾವಣೆ.....KPS ಕೆಪಿಎಸ್ ಶಾಲೆ ಹೆಸರಲ್ಲಿ 48 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಪ್ಲಾನ್.....ಭುಗಿಲೆದ್ದ ಆಕ್ರೋಶ ಅಸಮಾಧಾನ.....ಹೊರನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ.....ಅರಣ್ಯಕ್ಕೆ ಕಂಟಕವಾದ ಒತ್ತುವರಿ ಆರೋಪ! ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ.....ಮತ್ತೊಂದು ಕಾರ್ಯಕ್ಕೆ ಶಿಕ್ಷಕರ ಬಳಕೆ ಭುಗಿಲೆದ್ದ ಆಕ್ರೋಶ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಹೊಸ ರೂಪ.....ದೇಶಕ್ಕೆ ಮಾದರಿಯಾಯಿತು ರಾಜ್ಯದ ಸರ್ಕಾರಿ ಶಾಲೆ.....ಶಿಕ್ಷಕರ ಕೈಚಳಕದಿಂದ ಸುಂದರವಾಗಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ‌..... ಧಾರವಾಡದ ನೆಹರು ನಗರದಲ್ಲಿ ಪೆವರ್ಸ್ ಕಾಮಗಾರಿಗೆ ಭೂಮಿಪೂಜೆ.....ಹೊಸ ದಾಖಲೆ ನಿರ್ಮಿಸಿದ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕ.....ಬದಲಾದ ಜಗತ್ತಿನಲ್ಲಿ ಬದಲಾಗದ ಸರ್ಕಾರಿ ಶಾಲಾ ಶಿಕ್ಷಕ.....