LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹೊರನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ.....ಅರಣ್ಯಕ್ಕೆ ಕಂಟಕವಾದ ಒತ್ತುವರಿ ಆರೋಪ! ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ.....

ಕಳಸ -

ಹೊರನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ ಆರೋಪ
ಕಟ್ಟೆಗುಣಿ ಅರಣ್ಯ ಪ್ರದೇಶದಲ್ಲಿ ಮರಗಳ ಮಾರಣ ಹೋಮ – ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಸಿದ್ಧತೆ
ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದ ಸರ್ವೆ ನಂಬರ್ 62ರಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಅಕ್ರಮ ವಾಗಿ ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.ಹೊರನಾಡು–ಶೃಂಗೇರಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕಟ್ಟೆಗುಣಿ ಅರಣ್ಯ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಹತ್ತಾರು ಎಕರೆ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಅಕ್ರಮ ವಾಗಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಉದ್ದೇಶದಿಂದ ಬೃಹತ್ ಮರಗಳನ್ನು ಕಡಿದು ಜಾಗವನ್ನು ಸಮತಟ್ಟು ಮಾಡಲಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಅಷ್ಟೇ ಅಲ್ಲದೆ, ನಿರ್ಮಾಣ ಕಾಮಗಾರಿಗಾಗಿ ಕಟ್ಟಡ ಸಾಮಗ್ರಿಗಳನ್ನು ಸ್ಥಳಕ್ಕೆ ತರಲಾಗಿದ್ದು, ಕಾಮಗಾರಿ ಯನ್ನೂ ಆರಂಭಿಸಲಾಗಿದೆ ಎನ್ನಲಾಗಿದೆ ಈ ಕುರಿತು ಗ್ರಾಮಸ್ಥರು ಈಗಾಗಲೇ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಅರಣ್ಯ ಸಂಪತ್ತಿನ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಇಲಾಖೆಗಳ ಗಮನಕ್ಕೆ ವಿಷಯ ಬಂದಿದ್ದರೂ ಕಾಮಗಾರಿ ಮುಂದುವರಿದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಅರಣ್ಯ ಪ್ರದೇಶದಲ್ಲಿನ ಬೃಹತ್ ಮರಗಳ ಕಡಿತ ಹಾಗೂ ಸರ್ಕಾರಿ ಭೂಮಿಯ ಒತ್ತುವರಿ ಆರೋಪದ ಬಗ್ಗೆ ಜಿಲ್ಲಾಡಳಿತ ತಕ್ಷಣವೇ ಗಮನಹರಿಸಬೇಕು. ಸ್ಥಳ ಪರಿಶೀಲನೆ ನಡೆಸಿ, ಭೂಮಿಯ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅಕ್ರಮವೆಂದು ಸಾಬೀತಾದಲ್ಲಿ ಒತ್ತುವರಿ ತೆರವುಗೊಳಿಸಿ, ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಲಾಖೆಗಳ ನಿರ್ಲಕ್ಷ್ಯ ಮುಂದುವರಿದರೆಹೋರಾಟದ ಹಾದಿ ಸಂಬಂಧಪಟ್ಟ ಅರಣ್ಯ ಮತ್ತು ಕಂದಾಯ ಇಲಾಖೆಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಅಕ್ರಮ ಕಂಡು ಬಂದಲ್ಲಿ ತಕ್ಷಣ ತಡೆಹಿಡಿದು ಒತ್ತುವರಿ ತೆರವು ಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಹೊರನಾಡಿನ ಕಟ್ಟೆಗುಣಿ ಅರಣ್ಯ ಪ್ರದೇಶದಲ್ಲಿ ಕೇಳಿಬಂದಿರುವ ಒತ್ತುವರಿ ಮತ್ತು ಮರಗಳ ಕಡಿತದ ಆರೋಪಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಯಾವ ರೀತಿ ಸ್ಪಂದಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಕಳಸ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ.....DDPI ಅಧಿಕಾರಿಗಳ ವರ್ಗಾವಣೆ.....KPS ಕೆಪಿಎಸ್ ಶಾಲೆ ಹೆಸರಲ್ಲಿ 48 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಪ್ಲಾನ್.....ಭುಗಿಲೆದ್ದ ಆಕ್ರೋಶ ಅಸಮಾಧಾನ.....ಹೊರನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ.....ಅರಣ್ಯಕ್ಕೆ ಕಂಟಕವಾದ ಒತ್ತುವರಿ ಆರೋಪ! ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ.....ಮತ್ತೊಂದು ಕಾರ್ಯಕ್ಕೆ ಶಿಕ್ಷಕರ ಬಳಕೆ ಭುಗಿಲೆದ್ದ ಆಕ್ರೋಶ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಹೊಸ ರೂಪ.....ದೇಶಕ್ಕೆ ಮಾದರಿಯಾಯಿತು ರಾಜ್ಯದ ಸರ್ಕಾರಿ ಶಾಲೆ.....ಶಿಕ್ಷಕರ ಕೈಚಳಕದಿಂದ ಸುಂದರವಾಗಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ‌..... ಧಾರವಾಡದ ನೆಹರು ನಗರದಲ್ಲಿ ಪೆವರ್ಸ್ ಕಾಮಗಾರಿಗೆ ಭೂಮಿಪೂಜೆ.....ಹೊಸ ದಾಖಲೆ ನಿರ್ಮಿಸಿದ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕ.....ಬದಲಾದ ಜಗತ್ತಿನಲ್ಲಿ ಬದಲಾಗದ ಸರ್ಕಾರಿ ಶಾಲಾ ಶಿಕ್ಷಕ.....