LIVE TV LocalCrimeNationalInternationalPoliticsEducationTechnologyEntertainmentSportsFeature
State News

KPS ಕೆಪಿಎಸ್ ಶಾಲೆ ಹೆಸರಲ್ಲಿ 48 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಪ್ಲಾನ್.....ಭುಗಿಲೆದ್ದ ಆಕ್ರೋಶ ಅಸಮಾಧಾನ.....

ಚಿತ್ರದುರ್ಗ -

ಕೆಪಿಎಸ್ ಶಾಲೆ ಹೆಸರಲ್ಲಿ 48 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಹೊರಟಿರುವುದು ದೊಡ್ಡ ದುರಂತ ಎಂದು  ಜೆ.ಯಾದವರೆಡ್ಡಿ ಹೇಳಿದ್ದಾರೆ ಏಷಿಯನ್ ಡೆವಲಪ್‍ ಮೆಂಟ್ ಬ್ಯಾಂಕ್‍ನಿಂದ ರಾಜ್ಯ ಸರ್ಕಾರ 4800 ಕೋಟಿ ರೂ.ಗಳ ಷರತ್ತು ಬದ್ದ ಸಾಲ ಪಡೆದು ಕೆಪಿಎಸ್. ಶಾಲೆಗಳನ್ನು ತೆರೆದು 48 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ದೊಡ್ಡ ದುರಂತ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಯಾದವರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗ ದಲ್ಲಿ ಮಾತನಾಡಿದ ಅವರು ಮೂರು ಪಂಚಾಯಿತಿಗೆ ಒಂದರಂತೆ 3674 ಕೆಪಿಎಸ್. ಶಾಲೆ ಆರಂಭಿಸಲು 1200 ಮಕ್ಕಳನ್ನು ಕರೆತರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ ಆರ್ಟಿಕಲ್ 21(ಎ) ಪ್ರಕಾರ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಬೇಕೆಂದು ಸಂವಿಧಾನದಲ್ಲಿ ಹೇಳಿದೆ ಸರ್ಕಾರಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ರಾಜ್ಯದಲ್ಲಿ ಹದಿನೇಳು ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ

ಇದಕ್ಕೆ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಮೂಲ ಭೂತ ಸೌಲಭ್ಯಗಳಿಲ್ಲದಿರುವುದೇ ಪ್ರಮುಖ ಕಾರಣ. ಎಡಿಬಿ.ಯಿಂದ ಪಡೆದಿರುವ 4800 ಕೋಟಿ ರೂ.ಗಳ ಸಾಲವನ್ನು ಬೀಳುವ ಹಂತದಲ್ಲಿರುವ 20 ಸಾವಿರ ಸರ್ಕಾರಿ ಶಾಲೆಗಳ ರಿಪೇರಿಗೆ ಬಳಸಲಿ ಎಂದು ಆಗ್ರಹಿಸಿದರು.ಸರ್ಕಾರಿ ಶಾಲೆಗಳನ್ನು ಖಾಸಗಿ ಯವರಿಗೆ ದತ್ತು ಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾರ್ಪೊರೇಟ್ ಉದ್ಯಮಿಗಳಿಗೆ ಅನುಕೂಲ ಮಾಡಲು ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ

ಕನ್ನಡ ಉಳಿಯಬೇಕಾದರೆ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಸರ್ಕಾರಿ ಶಾಲೆಗಳಿಂದ ಮಾತ್ರ ಭಾವನಾತ್ಮಕ ಸಂಬಂಧಗಳು ಉಳಿಯಲು ಸಾಧ್ಯ. ಬಡ ಮಕ್ಕಳ ಭವಿಷ್ಯ ಹಾಳಾಗುವ ಇಂತಹ ಯೋಜನೆಗಳು ಬೇಡ. ಬಡತನ ಕಾರಣಕ್ಕಾಗಿ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದೆಂದರೆ ಸರ್ಕಾರಿ ಶಾಲೆಗಳನ್ನು ಬಲಪಡಿಸಿ ಶಿಕ್ಷಕರುಗಳನ್ನು ನೇಮಕ ಮಾಡುವಂತೆ ಜೆ.ಯಾದವರೆಡ್ಡಿ ಮನವಿ ಮಾಡಿದರು.

ಎಐಡಿಎಸ್‍ಓ ರಾಜ್ಯ ಕಚೇರಿ ಕಾರ್ಯದರ್ಶಿ  ಮಹಾಂತೇಶ್ ಮಾತನಾಡಿ ಬರ ಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಮಾಣ ಕಡಿಮೆ ಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಕೆಪಿಎಸ್. ಯೋಜನೆಯನ್ನು ಜಾರಿ ತರುವ ನಿರ್ಧಾರ ಕೈಬಿಡಬೇಕು. ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ 70 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಕೊಠಡಿ, ಲೈಬ್ರರಿ, ಆಟದ ಮೈದಾನ, ಶೌಚಾಲಯ, ಶುದ್ದ ಕುಡಿಯುವ ನೀರು ಪೂರೈಸಿದರೆ ಮಕ್ಕಳು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುವುದಿಲ್ಲ ಎಂದು ಹೇಳಿದರು. ಎಐಡಿಎಸ್‍ಓ. ಜಿಲ್ಲಾ ಸಂಚಾಲಕ ಕೆ.ಈರಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ.....DDPI ಅಧಿಕಾರಿಗಳ ವರ್ಗಾವಣೆ.....KPS ಕೆಪಿಎಸ್ ಶಾಲೆ ಹೆಸರಲ್ಲಿ 48 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಪ್ಲಾನ್.....ಭುಗಿಲೆದ್ದ ಆಕ್ರೋಶ ಅಸಮಾಧಾನ.....ಹೊರನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ.....ಅರಣ್ಯಕ್ಕೆ ಕಂಟಕವಾದ ಒತ್ತುವರಿ ಆರೋಪ! ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ.....ಮತ್ತೊಂದು ಕಾರ್ಯಕ್ಕೆ ಶಿಕ್ಷಕರ ಬಳಕೆ ಭುಗಿಲೆದ್ದ ಆಕ್ರೋಶ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಹೊಸ ರೂಪ.....ದೇಶಕ್ಕೆ ಮಾದರಿಯಾಯಿತು ರಾಜ್ಯದ ಸರ್ಕಾರಿ ಶಾಲೆ.....ಶಿಕ್ಷಕರ ಕೈಚಳಕದಿಂದ ಸುಂದರವಾಗಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ‌..... ಧಾರವಾಡದ ನೆಹರು ನಗರದಲ್ಲಿ ಪೆವರ್ಸ್ ಕಾಮಗಾರಿಗೆ ಭೂಮಿಪೂಜೆ.....ಹೊಸ ದಾಖಲೆ ನಿರ್ಮಿಸಿದ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕ.....ಬದಲಾದ ಜಗತ್ತಿನಲ್ಲಿ ಬದಲಾಗದ ಸರ್ಕಾರಿ ಶಾಲಾ ಶಿಕ್ಷಕ.....