LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮತ್ತೊಂದು ಕಾರ್ಯಕ್ಕೆ ಶಿಕ್ಷಕರ ಬಳಕೆ ಭುಗಿಲೆದ್ದ ಆಕ್ರೋಶ.....

ಬೆಂಗಳೂರು -

ಭಾರತ್ ಜೋಡೋ ಸಂಘದ ಕಾರ್ಯಕ್ರಮದ ಕೆಲಸ ಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಎಂಎಲ್‌ಸಿ ಎಸ್.ಎಲ್. ಭೋಜೇಗೌಡ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರಿಸುವ ಉದ್ದೇಶದ ಕಾರ್ಯಕ್ರಮಕ್ಕೆ ಶಿಕ್ಷಕರನ್ನು ನಿಯೋಜಿ ಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.ವಿಧಾನಸೌಧದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಭೋಜೇಗೌಡ, ಭಾರತ್ ಜೋಡೋ ಸಂಘಕ್ಕೆ ಸರ್ಕಾರ 1,000 ಕೋಟಿ ರೂಪಾಯಿ ಹಣ ಮೀಸಲಿಟ್ಟಿದೆ ಎಂದು ಆರೋಪಿ ಸಿದರು. ಆದರೆ, ಆ ಹಣ ಎಲ್ಲಿದೆ ಎಂಬುದೇ ತಿಳಿದಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರ್ಪಡೆ ಗೊಳಿಸುವ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ ಪಕ್ಷದ ಕಾರ್ಯಕರ್ತರನ್ನು ಸೇರಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡುವ ಅಗತ್ಯವೇನಿದೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಭಾರತ್ ಜೋಡೋ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಶಿಕ್ಷಕರನ್ನು ಬಳಸಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು ಶಿಕ್ಷಕರನ್ನು ಇಂತಹ ಕೆಲಸ ಗಳಿಗೆ ನಿಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆ ಯನ್ನು ಅಧೋಗತಿಗೆ ತಳ್ಳುವ ಕೆಲಸ ಮಾಡಲಾ ಗುತ್ತಿದೆ ಎಂದು ಭೋಜೇಗೌಡ ಟೀಕಿಸಿದರು.

ಎಲ್ಲ ಜಿಲ್ಲಾಧಿಕಾರಿಗಳು ಈ ಸಂಬಂಧ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದ ಅವರು, ಭಾರತ್ ಜೋಡೋ ಕಾರ್ಯಕ್ರಮದ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ.....DDPI ಅಧಿಕಾರಿಗಳ ವರ್ಗಾವಣೆ.....KPS ಕೆಪಿಎಸ್ ಶಾಲೆ ಹೆಸರಲ್ಲಿ 48 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಪ್ಲಾನ್.....ಭುಗಿಲೆದ್ದ ಆಕ್ರೋಶ ಅಸಮಾಧಾನ.....ಹೊರನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ.....ಅರಣ್ಯಕ್ಕೆ ಕಂಟಕವಾದ ಒತ್ತುವರಿ ಆರೋಪ! ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ.....ಮತ್ತೊಂದು ಕಾರ್ಯಕ್ಕೆ ಶಿಕ್ಷಕರ ಬಳಕೆ ಭುಗಿಲೆದ್ದ ಆಕ್ರೋಶ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಪರೀಕ್ಷೆ ಹೆಸರಲ್ಲಿ ಹಣ ವಸೂಲಿ ಮುಖ್ಯ ಶಿಕ್ಷಕನಿಗೆ ದೀರ್ಘ ರಜೆ ಸೂಚನೆ.....ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಹೊಸ ರೂಪ.....ದೇಶಕ್ಕೆ ಮಾದರಿಯಾಯಿತು ರಾಜ್ಯದ ಸರ್ಕಾರಿ ಶಾಲೆ.....ಶಿಕ್ಷಕರ ಕೈಚಳಕದಿಂದ ಸುಂದರವಾಗಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ‌..... ಧಾರವಾಡದ ನೆಹರು ನಗರದಲ್ಲಿ ಪೆವರ್ಸ್ ಕಾಮಗಾರಿಗೆ ಭೂಮಿಪೂಜೆ.....ಹೊಸ ದಾಖಲೆ ನಿರ್ಮಿಸಿದ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕ.....ಬದಲಾದ ಜಗತ್ತಿನಲ್ಲಿ ಬದಲಾಗದ ಸರ್ಕಾರಿ ಶಾಲಾ ಶಿಕ್ಷಕ.....