LIVE TV LocalCrimeNationalInternationalPoliticsEducationTechnologyEntertainmentSportsFeature
State News

ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು....9 k ತಗೆದುಕೊಳ್ಳುವಾಗ ಲಾಕ್.....

ಯಾದಗಿರಿ -

ರಾಜ್ಯದಲ್ಲಿ ಸರ್ಕಾರಿ ನೌಕರರ ಲಂಚಾವತಾರ ಮುಂದುವರಿದಿದ್ದು ಮತ್ತೆ ಇಬ್ಬರು ಸರ್ಕಾರಿ ನೌಕರರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಯಾದಗಿರಿ ಯಲ್ಲಿ ನಡೆದಿದೆ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಜೆಸ್ಕಾಂ ಇಲಾಖೆಯ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿ ಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿ ದ್ದಾರೆ 

ಜೆಸ್ಕಾಂ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಚಿನ್ ಯೇಡಕೆ ಹಾಗೂ ಶ್ರೀಶೈಲ್ ತಮ್ಮದಡ್ಡಿ ಬಲೆಗೆ ಬಿದ್ದ ಅಧಿಕಾರಿ ಗಳಾಗಿ ದ್ದಾರೆ ತಿಂಥಣಿ ಗ್ರಾಮದ ನಿವಾಸಿ ಭೈರಣ್ಣ ಎಂಬುವ ವರು ನೀಡಿರುವ ದೂರಿನ ಆಧಾರದ ಮೇರೆಗೆ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಈ ದಾಳಿ ನಡೆಸಲಾಗಿದೆ

ದೂರುದಾರ ಭೈರಣ್ಣ ಅವರಿಗೆ ಸೇರಿದ ಅಂದಾಜು 3,63,942 ರೂಪಾಯಿ ಮೊತ್ತದ ಕಾಮಗಾರಿಯು ಸುಮಾರು ಎಂಟು ತಿಂಗಳ ಹಿಂದೆಯೇ ಸಂಪೂರ್ಣ ವಾಗಿ ಮುಗಿದಿತ್ತು ಕಾಮಗಾರಿ ಪೂರ್ಣಗೊಂಡಿದ್ದರೂ ಅದಕ್ಕೆ ಸಂಬಂಧಿಸಿದ ಕಡತ ವಿಲೇವಾರಿ, ಬಿಲ್ ಪಾವತಿ ಹಾಗೂ ಅಧಿಕೃತ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಲು ಈ ಇಂಜಿನಿಯರ್‌ಗಳು ಸತತವಾಗಿ ಸತಾಯಿಸುತ್ತಿದ್ದರು. ಕೆಲಸ ಮುಗಿಸಿಕೊಡಲು ಅಕ್ಷರಶಃ ಸತಾಯಿಸಿದ ಈ ಇಂಜಿನಿಯರ್‌ಗಳು, ಕೊನೆಗೆ ಒಟ್ಟು 9,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮೊದಲ ಕಂತಾಗಿ ಮುಂಗಡವಾಗಿ 3,000 ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿ, ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿ ದ್ದಾರೆ.ಈ ಭ್ರಷ್ಟಾಚಾರದ ವಿರುದ್ಧ ಯಾದಗಿರಿ ಲೋಕಾ ಯುಕ್ತ ಅಧೀಕ್ಷಕರು (SP) ಹಾಗೂ ಉಪಾಧೀಕ್ಷಕರ (DSP) ಮಾರ್ಗದರ್ಶನದಲ್ಲಿ, ಪೊಲೀಸ್ ಇನ್‌ಸ್ಪೆಕ್ಟರ್ ಪ್ರದೀಪ್ ತಲಕೇರಿ ಅವರ ನೇತೃತ್ವದಲ್ಲಿ ಈ ಕಾರ್ಯಾ ಚರಣೆ ನಡದಿದ್ದು ಈ ಕುರಿತು ಯಾದಗಿರಿ ಲೋಕಾ ಯುಕ್ತ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 08/2026 ರ ಅಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾ ಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಯಾದಗಿರಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕಿ.....ಎಚ್ಚರಿಕೆ ನೀಡಿದ ಮೇಲಾಧಿಕಾರಿಗಳು.....ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ನೆರವು.....ಸರ್ಕಾರಿ ನೌಕರರ ಸಂಘದಿಂದ ನೆರವು.....ಕೆಲಸಕ್ಕೆ ಹಾಜರಾಗದಿದ್ದರೂ ಪ್ರತಿ ತಿಂಗಳು ಬರುತ್ತೆ ಸಂಬಳ.....ತಪ್ಪದೆ ಸಂಬಳ ಪಡೆಯುವ 'ಸರ್ಕಾರಿ ಸಿಬ್ಬಂದಿ'.....BEO ಕಚೇರಿ ಗೆ ಪೊಲೀಸರ ತಂಡ ಪರಿಶೀಲನೆ..... ಆರಂಭಗೊಂಡ ತನಿಖೆ.....ಮೂರನೇ ಮಗು ಹುಟ್ಟಿದ್ರೆ 1 ವರ್ಷ ಸರ್ಕಾರಿ ನೌಕರರಿಗೆ ರಜೆ ಘೋಷಣೆ.....ರಜೆ ಘೋಷಣೆ ಪ್ರಾದೇಶಿಕ ಆಯುಕ್ತರಿಂದ ಆದೇಶ.....ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....ನೋವು ಗಳಿಗೆ ಬೇಸತ್ತು ಸಾವಿಗೆ ಶರಣು.....ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು....9 k ತಗೆದುಕೊಳ್ಳುವಾಗ ಲಾಕ್.....ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಾತನಾಡದ ಶಿಕ್ಷಣ ಸಚಿವರು..... ಏನೆಲ್ಲಾ ಮಾತನಾಡುವ ಅಬ್ಬರದಲ್ಲಿ ವರ್ಗಾವಣೆ ಮರೆತ್ರಾ......3 ಸಾವಿರ ಲಂಚ ಪಡೆದ ಸರ್ಕಾರಿ ನೌಕರರಿಗೆ 4 ವರ್ಷ ಜೈಲು ಶಿಕ್ಷೆ 1 ಲಕ್ಷ ದಂಡ.....