ಬೈಂದೂರು -
ಪತ್ನಿಯ ಕಾಟಕ್ಕೆ ಶಿಕ್ಷಕ ನೊರ್ವ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ ಬಿಜೂರು ಉಪ್ಪುಂದ ಮಾಧವ ದೇವಾಡಿಗ (52) ಅವರು ತನಗಿದ್ದ ಬೆನ್ನುನೋವು ಹಾಗೂ ಪತ್ನಿಯ ಕಾಯಿಲೆ ಯಿಂದ ಬೇಸತ್ತು ಮನೆಯ ಸಮೀಪದ ಹಾಡಿಯ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ದಸರಾ ರಜೆ ಇದೆ ಎಂದುಕೊಂಡು ಭಟ್ಕಳಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬೆಳಗ್ಗೆ 5:00 ಗಂಟೆ ಸುಮಾರಿಗೆ ಅಳಿಯ ಚಂದ್ರರಿಗೆ ಕರೆ ಮಾಡಿ ತನಗೆ ಹಾಗೂ ಹೆಂಡತಿಗೆ ಹುಸಾರಿಲ್ಲ ಎಲ್ಲರನ್ನೂ ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರು ಬಳಿಕ ಎಲ್ಲರೂ ಸೇರಿ ಹುಡುಕಿದಾಗ ಮನೆಯ ಬಳಿಯ ಹಾದಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೈಂದೂರು.....