ಚೆನೈ -
ಮೂರನೇ ಮಗು ಹುಟ್ಟಿದ್ರೆ 1 ವರ್ಷ ಹೆರಿಗೆ ರಜೆ ಘೋಷಣೆಯನ್ನು ಚೆನೈ ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಹೌದು ಮಹಿಳಾ ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ ಇನ್ನು ಮುಂದೆ ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳಾ ಸರ್ಕಾರಿ ನೌಕರರಿಗೂ 365 ದಿನಗಳ ವೇತನ ಸಹಿತ ಪ್ರಸೂತಿ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಈ ಸೌಲಭ್ಯ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗುತ್ತಿತ್ತು.
ತಮಿಳುನಾಡಿನಲ್ಲಿ ಪ್ರಸ್ತುತ ಇಬ್ಬರಿಗಿಂತ ಕಡಿಮೆ ಜೀವಂತ ಮಕ್ಕಳನ್ನು ಹೊಂದಿರುವ ಮಹಿಳಾ ಸರ್ಕಾರಿ ನೌಕರರಿಗೆ ಒಂದು ವರ್ಷದ ಪ್ರಸೂತಿ ರಜೆ ಸಿಗುತ್ತಿತ್ತು. ಆದರೆ ಈಗಾಗಲೇ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಜೀವಂತವಾಗಿದ್ದರೆ, ಮೂರನೇ ಮಗುವಿನ ಸಂದರ್ಭದಲ್ಲಿ ಕೇವಲ 12 ವಾರಗಳು ಅಥವಾ 84 ದಿನಗಳ ಪ್ರಸೂತಿ ರಜೆಗೆ ಅವಕಾಶವಿತ್ತು.
ಹೊಸ ನಿರ್ಧಾರದ ಮೂಲಕ ಮೂರನೇ ಮಗುವಿಗೂ ಇದೇ ನಿಯಮ ಅನ್ವಯವಾಗುವಂತೆ ಮಾಡಿ, ರಜೆಯ ಅವಧಿಯನ್ನು 84 ದಿನಗಳಿಂದ ನೇರವಾಗಿ 365 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಮೂರನೇ ಮಗುವಿನ ಜನನದ ಸಂದರ್ಭದಲ್ಲಿಯೂ ಮಹಿಳಾ ಸರ್ಕಾರಿ ನೌಕರರಿಗೆ ಪೂರ್ಣ ವೇತನದೊಂದಿಗೆ ಒಂದು ವರ್ಷದ ರಜೆ ದೊರೆಯಲಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಕುರಿತ ಚರ್ಚೆಯ ವೇಳೆ ಸಚಿವ ಶರತ್ಕುಮಾರ್ ಈ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದಾರೆ. ಮಹಿಳಾ ನೌಕರರ ಆರೋಗ್ಯ ಹಾಗೂ ನವಜಾತ ಶಿಶುಗಳ ಆರೈಕೆಗೆ ಹೆಚ್ಚಿನ ಸಮಯ ಸಿಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರ ಪ್ರಸೂತಿ ರಜೆ ಕಳೆದ ಹಲವು ವರ್ಷಗಳಿಂದ ಹಂತ ಹಂತವಾಗಿ ಹೆಚ್ಚಾಗಿದೆ. ಆರಂಭದಲ್ಲಿ 90 ದಿನ ಗಳಷ್ಟಿದ್ದ ರಜೆಯನ್ನು 2011ರಲ್ಲಿ ಆರು ತಿಂಗಳಿಗೆ, 2016ರಲ್ಲಿ ಒಂಬತ್ತು ತಿಂಗಳಿಗೆ ಹೆಚ್ಚಿಸಲಾಗಿತ್ತು. ಬಳಿಕ ಜುಲೈ 2021ರಲ್ಲಿ ಪ್ರಸೂತಿ ರಜೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು.ಇದೀಗ ಇದೇ ಒಂದು ವರ್ಷದ ರಜೆ ಸೌಲಭ್ಯವನ್ನು ಮೂರನೇ ಮಗುವಿಗೂ ವಿಸ್ತರಿಸುವ ಮೂಲಕ ತಮಿಳುನಾಡು ಸರ್ಕಾರ ಮತ್ತೊಂದು ಮಹತ್ವದ ಬದಲಾವಣೆ ತಂದಿದೆ.
ಸುದ್ದಿ ಸಂತೆ ನ್ಯೂಸ್ ಚೆನೈ.....