LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಕಚೇರಿ ಗೆ ಪೊಲೀಸರ ತಂಡ ಪರಿಶೀಲನೆ..... ಆರಂಭಗೊಂಡ ತನಿಖೆ.....

ಕೊಪ್ಪಳ -

ಕುಷ್ಟಗಿ BEO ಕಚೇರಿಯಲ್ಲಿ ನಡೆದ ₹70 ಲಕ್ಷದ ಅವ್ಯವಹಾರ ಪ್ರಕರಣದ ತನಿಖೆ ಆರಂಭಗೊಂಡಿದೆ ₹70 ಲಕ್ಷಕ್ಕೂ ಅಧಿಕ ಸರ್ಕಾರಿ ಹಣ ದುರುಪಯೋ ಗದ ಆರೋಪ ಪ್ರಕರಣದ ತನಿಖೆಗೆ ವೇಗ ಸಿಕ್ಕಿದ್ದು ಸಂಜೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವಿಶೇಷ ಪೊಲೀಸ್ ತಂಡಗಳು ಕಚೇರಿಗೆ ಭೇಟಿ ನೀಡಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿವೆ.ಈ ವೇಳೆ ಮಹತ್ವದ ಕಡತಗಳು ಹಾಗೂ ಕಂಪ್ಯೂಟರ್‌ಗೆ ಸಂಬಂಧಿಸಿದ ಸಾಮಗ್ರಿ ಗಳನ್ನು ವಶಕ್ಕೆ ಪಡೆದಿದ್ದಾರೆ

ಮಹಾಲೇಖಪಾಲರ (ಎಜಿ) ತಂಡದ ಲೆಕ್ಕಪರಿಶೋ ಧನೆ ವೇಳೆ ಹಣಕಾಸಿನ ವ್ಯವಹಾರಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ನಿವೃತ್ತ ನೌಕರರ ಗಳಿಕೆ ರಜೆ ನಗದೀ ಕರಣ, ಅತಿಥಿ ಶಿಕ್ಷಕರ ಗೌರವಧನ ಹಾಗೂ ಸಾಮಾನ್ಯ ಭವಿಷ್ಯನಿಧಿ (ಜಿಪಿಎಫ್) ಪಾವತಿಗೆ ಸಂಬಂಧಿಸಿದ ಹಣವನ್ನು ಅರ್ಹ ಫಲಾನುಭವಿಗಳಿಗೆ ಪಾವತಿಸುವ ಬದಲು ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸ ಲಾಗಿದೆ ಎಂಬ ಆರೋಪವಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕನಕಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿರುವ ಹಿನ್ನೆಲೆಯಲ್ಲಿ ವಿಶೇಷ ತಂಡ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದೆ.

ವಶಪಡಿಸಿಕೊಂಡ ದಾಖಲೆಗಳು ಕಂಪ್ಯೂಟರ್‌ ಸಾಮಗ್ರಿಗಳು ಹಾಗೂ ಬ್ಯಾಂಕ್ ವಹಿವಾಟುಗಳ ಪರಿಶೀಲನೆಯಿಂದ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ ಹಣಕಾಸಿನ ವ್ಯವಹಾರಗಳಲ್ಲಿ ಯಾರ ಪಾತ್ರವಿದೆ ಮತ್ತು ಕಡತಗಳು ಲಭ್ಯವಾಗದಿರುವುದಕ್ಕೆ ಕಾರಣವೇನು ಎಂಬುದು ತನಿಖೆಯಿಂದ ದೃಢಪಡಬೇಕಿದೆ. ಆರೋಪಗಳ ಸತ್ಯಾ ಸತ್ಯತೆ ಪೊಲೀಸ್ ತನಿಖೆಯ ನಂತರವೇ ಸ್ಪಷ್ಟವಾಗ ಲಿದೆ

ಬಿಇಒ ಕಚೇರಿಯಲ್ಲಿ ನಡೆದಿರುವ ಅಕ್ರಮ ಕುರಿತು ಕನಕನಗೌಡ ವಿರುದ್ಧ ಪ್ರಕರಣ ದಾಖಲು ಮಾಡ ಲಾಗಿತ್ತು. ಆ ಹಿನ್ನೆಲೆಯಲ್ಲಿ ಆಗಮಿಸಿದ ಪಿಎಸ್‌ಐ ಹನುಮಂತಪ್ಪ ತಳವಾರ ನೇತೃತ್ವದ ವಿಶೇಷ ಪೋಲಿಸರ ತಂಡ ಪರಿಶೀಲನೆ ನಡೆಸಿ ಅಕ್ರಮಕ್ಕೆ ಸಂಬಂಧಿಸಿದ ಕಂಪ್ಯೂಟರ್‌ಗಳು ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇಲಾಖೆ ಸಿಬ್ಬಂದಿಯಿಂದಲೂ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸಂಪೂರ್ಣ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಕುಷ್ಟಗಿ ಬಿಇಒ ಉಮಾದೇವಿ ಬಸಾಪುರ ಹೇಳಿದರು.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕಿ.....ಎಚ್ಚರಿಕೆ ನೀಡಿದ ಮೇಲಾಧಿಕಾರಿಗಳು.....ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ನೆರವು.....ಸರ್ಕಾರಿ ನೌಕರರ ಸಂಘದಿಂದ ನೆರವು.....ಕೆಲಸಕ್ಕೆ ಹಾಜರಾಗದಿದ್ದರೂ ಪ್ರತಿ ತಿಂಗಳು ಬರುತ್ತೆ ಸಂಬಳ.....ತಪ್ಪದೆ ಸಂಬಳ ಪಡೆಯುವ 'ಸರ್ಕಾರಿ ಸಿಬ್ಬಂದಿ'.....BEO ಕಚೇರಿ ಗೆ ಪೊಲೀಸರ ತಂಡ ಪರಿಶೀಲನೆ..... ಆರಂಭಗೊಂಡ ತನಿಖೆ.....ಮೂರನೇ ಮಗು ಹುಟ್ಟಿದ್ರೆ 1 ವರ್ಷ ಸರ್ಕಾರಿ ನೌಕರರಿಗೆ ರಜೆ ಘೋಷಣೆ.....ರಜೆ ಘೋಷಣೆ ಪ್ರಾದೇಶಿಕ ಆಯುಕ್ತರಿಂದ ಆದೇಶ.....ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....ನೋವು ಗಳಿಗೆ ಬೇಸತ್ತು ಸಾವಿಗೆ ಶರಣು.....ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು....9 k ತಗೆದುಕೊಳ್ಳುವಾಗ ಲಾಕ್.....ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಾತನಾಡದ ಶಿಕ್ಷಣ ಸಚಿವರು..... ಏನೆಲ್ಲಾ ಮಾತನಾಡುವ ಅಬ್ಬರದಲ್ಲಿ ವರ್ಗಾವಣೆ ಮರೆತ್ರಾ......3 ಸಾವಿರ ಲಂಚ ಪಡೆದ ಸರ್ಕಾರಿ ನೌಕರರಿಗೆ 4 ವರ್ಷ ಜೈಲು ಶಿಕ್ಷೆ 1 ಲಕ್ಷ ದಂಡ.....