ಧಾರವಾಡ -
ಧಾರವಾಡ ದ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಮೇಳ ಆರಂಭವಾಗಿದೆ.ಆರಂಭದ ಮೊದಲನೇಯ ದಿನವೇ ಕೃಷಿ ಮೇಳದಲ್ಲಿ ಅವಘಡ ವೊಂದು ನಡೆದಿದೆ ಹೌದು ಮೇಳದ ಆವರಣದಲ್ಲಿರುವ ಧಾರವಾಡ ಕೃಷಿ ಮೇಳದಲ್ಲಿ ಪೆಂಡಾಲ್ ಕುಸಿತ ವಾಗಿದ್ದು ದೊಡ್ಡ ಪ್ರಮಾಣದ ಭಾರೀ ಅನಾಹುತ ವೊಂದು ತಪ್ಪಿದಂತಾಗಿದೆ
ಮೊದಲನೇ ದಿನವೇ ಆತಂಕಕಾರಿ ಘಟನೆ ನಡೆದಿದ್ದು ಐದಾರು ಜನರಿಗೆ ಗಾಯಗಳಾಗಿವೆ. ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮೊದಲನೇ ದಿನವೇ ಆತಂಕಕಾರಿ ಘಟನೆ ನಡೆದಿದೆ. ಮೇಳದ ಆವರಣ ದಲ್ಲಿ ನಿರ್ಮಿಸಲಾಗಿದ್ದ ಆರೋಗ್ಯ ಪರೀಕ್ಷಾ ಟೆಂಟ್ ಏಕಾಏಕಿ ಕುಸಿದು ಬಿದ್ದಿದ್ದು, ಐದಾರು ಜನರಿಗೆ ಗಾಯಗಳಾಗಿವೆ
ಟೆಂಟ್ ಕುಸಿಯುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿ ಕರಲ್ಲಿ ಕೆಲಕಾಲ ಗೊಂದಲ ಹಾಗೂ ಆತಂಕದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳದಲ್ಲಿದ್ದವರು ಗಾಯಾಳುಗಳ ನೆರವಿಗೆ ಧಾವಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಬಳಿಕ ಗಾಯಾಳುಗಳಿಗೆ ಅಗತ್ಯ ಆರೋಗ್ಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗಿದೆ.ಅದೃಷ್ಟವಶಾತ್ ಘಟನೆ ವೇಳೆ ಭಾರೀ ಪ್ರಮಾಣದ ಅನಾಹುತ ಸಂಭವಿಸಿಲ್ಲ.
ಇಲ್ಲದಿದ್ದರೆ ಕೃಷಿ ಮೇಳಕ್ಕೆ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಜನರ ನಡುವೆ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇತ್ತು.ಕೃಷಿ ಮೇಳದ ಮೊದಲನೇ ದಿನವೇ ಆರೋಗ್ಯ ಪರೀಕ್ಷೆಗಾಗಿ ನಿರ್ಮಿಸಲಾಗಿದ್ದ ಟೆಂಟ್ ಕುಸಿದಿರುವುದು ಆಯೋಜಕರ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಟೆಂಟ್ ನಿರ್ಮಾಣದ ಗುಣಮಟ್ಟ, ಅದರ ಭದ್ರತೆ ಹಾಗೂ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕಾಗಿದೆ.
ಮೇಳಕ್ಕೆ ಪ್ರತಿದಿನ ಸಾವಿರಾರು ರೈತರು,ಎಲ್ಲಾ ಪೆಂಡಾಲ್ ಗಳು ಮತ್ತು ತಾತ್ಕಾಲಿಕ ಕಟ್ಟಡಗಳ ಸುರಕ್ಷತೆ ಯನ್ನು ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ.ಮೊದಲ ದಿನವೇ ಸಂಭವಿಸಿದ ಈ ಘಟನೆ, ಮುನ್ನೆಚ್ಚರಿಕಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ......