ಬೆಂಗಳೂರು -
ಶಾಲಾ ಮಕ್ಕಳಿಗೆ 19 ದಿನ ದಸರಾ ರಜೆ ಘೋಷಣೆ ಮಾಡಲಾಗಿದ್ದು ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಯಂತೆ ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 3 ರಿಂದ ಅಕ್ಟೋಬರ್ 21 ರವರೆಗೆ ಒಟ್ಟು 19 ದಿನಗಳ ಕಾಲ ದಸರಾ ರಜೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಈ ವರ್ಷ ಒಟ್ಟು 119 ಸಾರ್ವತ್ರಿಕ ಹಾಗೂ ಸಾಂದರ್ಭಿಕ ರಜೆಗಳು ಇರಲಿದ್ದು 245 ದಿನಗಳು ಶಾಲಾ ಕರ್ತವ್ಯದ ದಿನಗಳಾಗಿರಲಿವೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆ ಕಡ್ಡಾಯ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇರುವುದರಿಂದ ಅಂದಿನಿಂದಲೇ ಮಕ್ಕಳಿಗೆ ನಿಯಮಿತ ತರಗತಿಗಳು ಮತ್ತು ನಿತ್ಯದ ಪಾಠ-ಪ್ರವಚನಗಳಿಂದ ಬಿಡುವು ಸಿಗಲಿದೆ ಆದರೆ ಅಂದು ಶಾಲೆಗಳಲ್ಲಿ ಗಾಂಧಿ ಜಯಂತಿ ನಿಮಿತ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಚರಣೆ ಯನ್ನು ಆಯೋಜಿಸುವುದು ಕಡ್ಡಾಯವಾಗಿದೆ.
ಈ ಆಚರಣೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿದ್ದು, ಕಾರ್ಯಕ್ರಮ ಮುಗಿದ ನಂತರ ಅಕ್ಟೋಬರ್ 3 ರಿಂದ ಅಧಿಕೃತವಾಗಿ ರಜೆಗಳು ಆರಂಭವಾಗಲಿವೆ.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದ್ದು ಶಿಕ್ಷಣ ಇಲಾಖೆಯು ಪ್ರಕಟಿಸಿರುವ ಈ ರಜಾ ವೇಳಾಪಟ್ಟಿ ಯು ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆ ಗಳಿಗೆ ಮಾತ್ರ ಅನ್ವಯವಾಗಲಿದೆ.
ಖಾಸಗಿ (ಅನುದಾನರಹಿತ) ಶಾಲೆಗಳು ತಮ್ಮದೇ ಶೈಕ್ಷಣಿಕ ಯೋಜನೆಯಂತೆ ಈಗಾಗಲೇ ರಜೆಗಳನ್ನು ನಿಗದಿಪಡಿಸಿಕೊಂಡಿವೆ. ಕೆಲವು ಖಾಸಗಿ ಶಾಲೆಗಳು ಒಂದು ವಾರಕ್ಕೆ ರಜೆಯನ್ನು ಸೀಮಿತಗೊಳಿಸಿದ್ದರೆ, ಇನ್ನು ಕೆಲವು ಶಾಲೆಗಳು 10 ದಿನಗಳ ಕಾಲ ದಸರಾ ರಜೆ ನೀಡಿವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....