ಬೆಂಗಳೂರು -
ಶಾಲೆಗಳಿಗೆ 19 ದಿನ ದಸರಾ ರಜೆ ಘೋಷಣೆ ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ ಹೌದುವಿಶ್ವವಿಖ್ಯಾತ ಮೈಸೂರು ದಸರಾಗಾಗಿ ಒಂದು ಕಡೆ ಭರ್ಜರಿ ಸಿದ್ಧತೆಗಳು ನಡೆದಿದ್ದು ಸಾಂಸ್ಕೃತಿ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಮತ್ತೊಂದೆಡೆ ಶೈಕ್ಷಣಿಕ ವರ್ಷದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಹೌದು ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 3 ರಿಂದ 21 ರವರೆಗೆ 19 ದಿನಗಳ ಕಾಲ ದಸರಾ ರಜೆ ಘೋಷಿಸ ಲಾಗಿದೆ.
ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ
ಶಾಲಾ ಮಕ್ಕಳಿಗೆ ರಜೆ ಸಿಕ್ಕರೆ ಸಾಕು ಹೆತ್ತವರ ಕೈಗೆ ಸಿಗುವುದಿಲ್ಲ. ಇತರೆ ಮಕ್ಕಳೊಂದಿಗೆ ಆಟದಲ್ಲಿ ನಿರತ ರಾಗಿರುತ್ತಾರೆ. ಆಟವಾಡಿದರೆ ಪರವಾಗಿಲ್ಲ. ರಜೆ ಸಿಕ್ಕಿದೆಯಲ್ಲಾ ಮಕ್ಕಳು ಮಜಾ ಮಾಡಲಿ ಎಂದು ಅವರನ್ನು ಹಾಗೇ ಬಿಡಬೇಡಿ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮಕ್ಕಳು ಮನೆಯಿಂದ ಹೊರಗಡೆ ಆಟ ವಾಡಲು ತೆರಳಿದಲ್ಲಿ ಅವರನ್ನು ವಿಚಾರಿಸುತ್ತಲೇ ಇರಬೇಕಾಗುತ್ತದೆ. ಇತರ ಮಕ್ಕಳೊಂದಿಗೆ ಸೇರಿದಾಗ, ನಾವು ಮಾಡುತ್ತಿರುವುದು ತಪ್ಪು, ಅಪಾಯಕಾರಿ ಎಂಬುದು ಪರಿಜ್ಞಾನವೇ ಮಕ್ಕಳಿಗೆ ಇರುವುದಿಲ್ಲ.
ಆಟವಾಡಲು ತೆರಳಿ ಜೀವಕ್ಕೆ ಅಪಾಯವಾಗದೇ ಇರಲಿ ಎಂಬ ಉದ್ದೇಶಕ್ಕಾಗಿ ರಜೆಯ ಮಜಾದಲ್ಲಿ ರುವ ಮಕ್ಕಳ ಮೇಲೆ ಹೆತ್ತವರ ಕಣ್ಣಿರಬೇಕಾಗಿದೆ. ಅಪಾಯ ಯಾವುದು ಎಂಬುದು ಮುಗ್ಧ ಮಕ್ಕಳಿಗೆ ಗೊತ್ತಿರುವುದಿಲ್ಲ. ಮಕ್ಕಳಾಟಿಕೆ ಕೆಲವೊಮ್ಮೆ ಜೀವಕ್ಕೆ ಅಪಾಯ ತಂದೊಡ್ಡಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹೀಗಾಗಿ ರಜಾ ಮಜಾ ದಿನಗಳಲ್ಲಿ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಅಗತ್ಯ ವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......