LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರನ್ನು ಬಿಟ್ಟು ಇತರೆ ಸರ್ಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ.....ಸಚಿವರ ಒತ್ತಾಯ ಮನವಿ‌‌.....

ಬೆಂಗಳೂರು -

ರಾಜ್ಯದಲ್ಲಿ ನಡೆಯುವ ಎಲ್ಲಾ ಸಮೀಕ್ಷೆ ಗಳಿಗೆ ಶಿಕ್ಷಕರ ಬದಲು ಇತರೆ ಸರ್ಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಚುನಾವಣಾ ಸಂಬಂಧಿತ ಕೆಲಸಗಳು ಹಾಗೂ ಆಡಳಿತಾತ್ಮಕ ಮಾಹಿತಿ ಸಂಗ್ರಹಣೆಯಂತಹ ಕಾರ್ಯ ಗಳಿಗೆ ಶಿಕ್ಷಕರನ್ನು ನಿಯೋಜಿಸುವ ಬದಲು, ಇತರೆ ಸರ್ಕಾರಿ ಸಿಬ್ಬಂದಿ, ನಿವೃತ್ತ ಸರ್ಕಾರಿ ನೌಕರರು ಹಾಗೂ ತರಬೇತಿ ಪಡೆದ ಸ್ವಯಂಸೇವಕರನ್ನು ಒಳಗೊಂಡ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ. ಕರಡು ಕಾನೂನಿನಲ್ಲೂ ಇಂತಹ ಪರ್ಯಾಯ ಸಿಬ್ಬಂದಿಯ ಬಳಕೆಗೆ ಆದ್ಯತೆ ನೀಡುವ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.

ಮಧ್ಯಂತರ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭ ದಲ್ಲಿ ಶಿಕ್ಷಕರ ಕೊರತೆ ಮುಂದುವರಿದರೆ ವಿದ್ಯಾರ್ಥಿಗಳ ಸಿದ್ಧತೆ ಹಾಗೂ ಶೈಕ್ಷಣಿಕ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಸಚಿವರು ಹೇಳಿದ್ದಾರೆ. ಶಿಕ್ಷಕರನ್ನು ಬೋಧನೆಯೇತರ ಕಾರ್ಯ ಗಳಿಗೆ ನಿಯೋಜಿಸುವ ಅಗತ್ಯ ಬಂದರೂ, ಶಾಲೆ ಯಲ್ಲಿನ ಬೋಧನಾ ವ್ಯವಸ್ಥೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸರ್ಕಾರದ ನಿಲುವಾಗಿದೆ.

ಶಿಕ್ಷಕರನ್ನು ಬೋಧನಾ ಕಾರ್ಯಕ್ಕೆ ಸೀಮಿತಗೊಳಿಸಿ, ಮಕ್ಕಳಿಗೆ ನಿರಂತರ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಪ್ರಸ್ತಾವಿತ ಕಾನೂನು ಮುಂದಿನ ಹಂತ ತಲುಪಿದರೆ, ಸರ್ಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ವೇದಿಕೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಸಚಿವರು, SIR ಕಾರ್ಯದಿಂದ ಶಿಕ್ಷಕರು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು. ಶಿಕ್ಷಕ ರನ್ನು ಈ ಕಾರ್ಯದಿಂದ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಕರು ಶಾಲೆಯಿಂದ ಹೊರಗಿರುವುದರಿಂದ ಕೆಲವೆಡೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ, ಮಕ್ಕಳಿಗೆ ಬೋಧನಾ ಸಮಯ ಕಡಿಮೆಯಾಗುತ್ತಿದೆ ಎಂಬ ದೂರುಗಳು ಪೋಷಕರು ಹಾಗೂ ವಿದ್ಯಾರ್ಥಿ ಗಳಿಂದ ಬರುತ್ತಿವೆ ಎಂದು ತಿಳಿಸಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆಗಳಿಗೆ ರಜೆ ಘೋಷಣೆ ಮಕ್ಕಳ ಬಗ್ಗೆ ಇರಲಿ ಎಚ್ಚರಿಕೆ.....ಬೆಳಗಾವಿಯಲ್ಲಿ Big Mishra ಗೆ ಭರ್ಜರಿ ರಿಸ್ಪಾನ್ಸ್.....ಸಂಜಯ ಮಿಶ್ರಾ ಕನಸಿನ Big Misha ಗೆ ಫುಲ್ ಮಾರ್ಕ್ಸ್.....ಶಿಕ್ಷಕರನ್ನು ಬಿಟ್ಟು ಇತರೆ ಸರ್ಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ.....ಸಚಿವರ ಒತ್ತಾಯ ಮನವಿ‌‌.....ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತೀರಾ.....ಮೊದಲು ಈ ಸ್ಟೋರಿ ನೋಡಿ..... ಇಲ್ಲವಾದರೆ ಆರೋಗ್ಯ.....ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ.....ಸಚಿವ ವಿಜಯಾನಂದ ಕಾಶಪ್ಪನವರ.....ಮುಖ್ಯಶಿಕ್ಷಕ ಬಂಧನ.....ನಿವೃತ್ತಿ ಅಂಚಿನಲ್ಲಿದ್ದ ಮುಖ್ಯಶಿಕ್ಷಕ.....ರಾಜ್ಯದ ಶಿಕ್ಷಕರಿಗೆ ಬಾರ ಇಳಿಸಿದ ರಾಜ್ಯ ಸರ್ಕಾರ.....ನಿಟ್ಟುಸಿರು ಬಿಟ್ಟ ಶಿಕ್ಷಕರು.....ಧಾರವಾಡ ಕೃಷಿ ಮೇಳದಲ್ಲಿ ಅವಘಡ ಕುಸಿದು ಬಿದ್ದ ಪೆಂಡಾಲ್ ತಪ್ಪಿತು ಅವಘಡ.....KAS ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಸರ್ಜರಿ.....ದಸರಾ ರಜೆ ಘೋಷಣೆ.....ಅಧಿಕೃತವಾಗಿ ಘೋಷಣೆ ಯಾಯಿತು ದಸರಾ ರಜೆ.....