LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕ ಬಂಧನ.....ನಿವೃತ್ತಿ ಅಂಚಿನಲ್ಲಿದ್ದ ಮುಖ್ಯಶಿಕ್ಷಕ.....

ಮೈಸೂರು -

ಶಾಲಾ ಮಕ್ಕಳ ಜೊತೆ ಅನುಚಿತ ವರ್ತನೆ ನಿವೃತ್ತಿಯ ಅಂಚಿನಲ್ಲಿದ್ದ ಶಿಕ್ಷಕ ಅರೆಸ್ಟ್ ಹೌದು ಇಂತಹ ದೊಂದು ಘಟನೆ ಮೈಸೂರಿನಲ್ಲಿ ನಡೆದಿದೆ.ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಎಂಬಂತೆ ವಿದ್ಯೆ ಕಲಿಸುವ ಗುರುವಿಗೆ ಶ್ರೇಷ್ಠ ಸ್ಥಾನವಿದೆ ಅಲ್ಲದೇ ಶಿಕ್ಷಕರು ದೇವರ ಸಮಾನ ಅಂತಲೂ ಹೇಳಲಾಗು ತ್ತದೆ. ಆದರೆ, ಮೈಸೂರು ಜಿಲ್ಲೆಯಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಶಿಕ್ಷಣ ಹೇಳಿಕೊಡಬೇಕಾಗಿದ್ದ ಶಿಕ್ಷಕನೊಬ್ಬ ಮಾಡಬಾರದ ಕೆಲಸ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.

ಶಾಲಾ ಮಕ್ಕಳ ಜೊತೆ ಅನುಚಿತ ವರ್ತನೆ ಆರೋಪ ಹಿನ್ನೆಲೆ ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಶಿಕ್ಷಕ ನನ್ನು ಪೊಲೀಸರು ಬಂಧಿಸಿದ್ದಾರೆ.ಮಕ್ಕಳ ಗುಪ್ತಾಂಗ ಸ್ಪರ್ಶಿಸಿ ಕಿರುಕುಳ ನೀಡಿದ ಆರೋಪ ಕೇಳಿಬಂದ ಹಿನ್ನೆಲೆ ಶಿಕ್ಷಕನನ್ನು ಅರೆಸ್ಟ್​ ಮಾಡಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ. ಮುಖ್ಯ ಶಿಕ್ಷಕ ರಾಮಶೆಟ್ಟಿ ಎಂಬುವರನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ಕಳೆದ ಮೂವತ್ತು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 59 ವರ್ಷದ ಶಿಕ್ಷಕ ರಾಮಶೆಟ್ಟಿ ನಿವೃತ್ತಿಯ ಅಂಚಿನಲ್ಲಿದ್ದರು ಆದರೆ, ಶಿಕ್ಷಕನ ವರ್ತನೆ ಬಗ್ಗೆ ವಿದ್ಯಾರ್ಥಿಗಳಿಂದ ಮತ್ತು ಪೋಷಕರಿಂದ ದೂರು ಕೇಳಿ ಬಂದಿತ್ತು.

ವಿದ್ಯಾರ್ಥಿಗಳ ಪೋಷಕರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಶಾಲೆಗೆ ಮಕ್ಕಳ ರಕ್ಷಣಾ ಘಟಕ ಭೇಟಿ ನೀಡಿ, ವಿದ್ಯಾರ್ಥಿ ಗಳಿಂದ ಹೇಳಿಕೆ ಸಂಗ್ರಹಿಸಲಾಗಿತ್ತು. ಪ್ರಭಾರಿ ಬಿಇಒ ಅನಂತರಾಜು ಉಪಸ್ಥಿತಿಯಲ್ಲಿ ಹೇಳಿಕೆ ದಾಖಲು ಮಾಡಲಾಗಿತ್ತು. ಬಳಿಕ ಮಕ್ಕಳ ಹೇಳಿಕೆ ಆಧರಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ ಪೊಲೀಸರು

ಇಲಾಖೆ ಆರೋಪಿ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದು ವರಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮೈಸೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆಗಳಿಗೆ ರಜೆ ಘೋಷಣೆ ಮಕ್ಕಳ ಬಗ್ಗೆ ಇರಲಿ ಎಚ್ಚರಿಕೆ.....ಬೆಳಗಾವಿಯಲ್ಲಿ Big Mishra ಗೆ ಭರ್ಜರಿ ರಿಸ್ಪಾನ್ಸ್.....ಸಂಜಯ ಮಿಶ್ರಾ ಕನಸಿನ Big Misha ಗೆ ಫುಲ್ ಮಾರ್ಕ್ಸ್.....ಶಿಕ್ಷಕರನ್ನು ಬಿಟ್ಟು ಇತರೆ ಸರ್ಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ.....ಸಚಿವರ ಒತ್ತಾಯ ಮನವಿ‌‌.....ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತೀರಾ.....ಮೊದಲು ಈ ಸ್ಟೋರಿ ನೋಡಿ..... ಇಲ್ಲವಾದರೆ ಆರೋಗ್ಯ.....ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ.....ಸಚಿವ ವಿಜಯಾನಂದ ಕಾಶಪ್ಪನವರ.....ಮುಖ್ಯಶಿಕ್ಷಕ ಬಂಧನ.....ನಿವೃತ್ತಿ ಅಂಚಿನಲ್ಲಿದ್ದ ಮುಖ್ಯಶಿಕ್ಷಕ.....ರಾಜ್ಯದ ಶಿಕ್ಷಕರಿಗೆ ಬಾರ ಇಳಿಸಿದ ರಾಜ್ಯ ಸರ್ಕಾರ.....ನಿಟ್ಟುಸಿರು ಬಿಟ್ಟ ಶಿಕ್ಷಕರು.....ಧಾರವಾಡ ಕೃಷಿ ಮೇಳದಲ್ಲಿ ಅವಘಡ ಕುಸಿದು ಬಿದ್ದ ಪೆಂಡಾಲ್ ತಪ್ಪಿತು ಅವಘಡ.....KAS ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಸರ್ಜರಿ.....ದಸರಾ ರಜೆ ಘೋಷಣೆ.....ಅಧಿಕೃತವಾಗಿ ಘೋಷಣೆ ಯಾಯಿತು ದಸರಾ ರಜೆ.....