ಬೆಂಗಳೂರು -
ಸರ್ಕಾರಿ ನೌಕರರ ಸೇವಾ ಪ್ರಶಸ್ತಿ'ಗೆ ಅರ್ಜಿ ಆಹ್ವಾನ ವನ್ನು ಮಾಡಲಾಗಿದೆ ಉತ್ತಮ ಸಾರ್ವಜನಿಕ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರದ ಅಧಿಕಾರಿ ಹಾಗೂ ನೌಕರ ರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 'ಸರ್ಕಾರಿ ನೌಕರರ ಸೇವಾ ಪ್ರಶಸ್ತಿ'ಗೆ ಅರ್ಹರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.ದಕ್ಷತೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಜನಾನುರಾಗಿ ಹಾಗೂ ಮಾದರಿ ಸೇವೆಯನ್ನು ಸಲ್ಲಿಸಿರುವ ನೌಕರರ ಕೊಡುಗೆಯನ್ನು ಪುರಸ್ಕರಿಸಲು ಮತ್ತು ಇತರ ನೌಕರ ರಲ್ಲಿ ಸೇವಾ ಮನೋಭಾವನೆಯನ್ನು ಉತ್ತೇಜಿಸಲು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಂಘ ತೀರ್ಮಾನಿಸಿದೆ.
ಒಟ್ಟು 271 ಪ್ರಶಸ್ತಿಗಳು, ತಲಾ ₹20,000 ನಗದು ಪುರಸ್ಕಾರ ಹೌದು
ರಾಜ್ಯಾದ್ಯಂತ ಒಟ್ಟು 271 ಅರ್ಹ ಅಧಿಕಾರಿ-ನೌಕರರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಒಟ್ಟು ₹54.20 ಲಕ್ಷ ಮೊತ್ತದ ಪುರಸ್ಕಾರ ನಿಗದಿಪಡಿಸಲಾಗಿದೆ.ಬೆಂಗಳೂರು ನಗರ: 10 ಪ್ರಶಸ್ತಿಗಳು ಜಿಲ್ಲಾ ಕೇಂದ್ರದ ತಾಲೂಕುಗಳು (31 × 2): 62 ಪ್ರಶಸ್ತಿಗಳು ಉಳಿದ ತಾಲೂಕುಗಳು (199 × 1): 199 ಪ್ರಶಸ್ತಿಗಳು
ಪ್ರಶಸ್ತಿಗೆ ಆಯ್ಕೆಯಾಗುವ ಪ್ರತಿಯೊಬ್ಬರಿಗೂ ₹20,000 ನಗದು, ಸ್ಮರಣಿಕೆ, ಶಾಲು ಹಾಗೂ ಹಾರ ನೀಡಿ ಗೌರವಿಸಲಾಗುವುದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರು ಅಥವಾ ರಾಜ್ಯದ ಯಾವುದಾದರೂ ಜಿಲ್ಲಾ ಕೇಂದ್ರದಲ್ಲಿ ಮುಖ್ಯಮಂತ್ರಿ ಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಲಾಗುವುದು.



ಅರ್ಹತೆಗಳು ಮತ್ತು ಮುಖ್ಯ ಷರತ್ತುಗಳು
ರಾಜ್ಯ ಸರ್ಕಾರದ ಗ್ರೂಪ್ 'ಎ', 'ಬಿ', 'ಸಿ' ಮತ್ತು 'ಡಿ' ವೃಂದದ ಖಾಯಂ ನೌಕರರಾಗಿರಬೇಕು.ಸಂಘಕ್ಕೆ ಪ್ರತಿ ವರ್ಷ ₹200 ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿರ ಬೇಕು ಹಾಗೂ ಸರ್ಕಾರಿ ಸೇವೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
ಸ್ವತಃ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಯಾವುದೇ ನೌಕರರು ಸ್ವತಃ ಅರ್ಜಿ ಸಲ್ಲಿಸುವಂತಿಲ್ಲ. ಬದಲಾಗಿ ಇಲಾಖಾ ಮುಖ್ಯಸ್ಥರು, ಮೇಲಾಧಿಕಾರಿಗಳು, ಸಹೋದ್ಯೋಗಿಗಳು, ಸಾರ್ವಜನಿಕರು ಅಥವಾ ನೌಕರರ ಸಂಘದ ಜಿಲ್ಲಾ ತಾಲೂಕು ಶಾಖೆಯ ಪದಾಧಿಕಾರಿಗಳು ಅರ್ಹರ ಹೆಸರನ್ನು ಶಿಫಾರಸು ನಾಮನಿರ್ದೇಶನ ಮಾಡಬೇಕು.
ಯಾವುದೇ ರೀತಿಯ ವೈಯಕ್ತಿಕ ಅಥವಾ ಬಾಹ್ಯ ಪ್ರಭಾವ ಒತ್ತಡ ಶಿಫಾರಸುಗಳಿಗೆ ಅವಕಾಶವಿರು ವುದಿಲ್ಲ
ಅರ್ಜಿ ಸಲ್ಲಿಕೆ ಹೇಗೆ
ಪ್ರಸ್ತಾವನೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ಲಿಂಕ್ ಮೂಲಕವೇ ಸಲ್ಲಿಸಬೇಕು. ಅಪೂರ್ಣ ಮಾಹಿತಿ ಅಥವಾ ನೇರವಾಗಿ ಸಲ್ಲಿಸುವ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.ವೆಬ್‌ಸೈಟ್ ಲಿಂಕ್: POWERMEDIA.INFO
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-10-2026
ಅರ್ಹ ಹಾಗೂ ದಕ್ಷ ನೌಕರರ ಹೆಸರುಗಳನ್ನು ನಿಗದಿತ ದಿನಾಂಕದೊಳಗೆ ಶಿಫಾರಸು ಮಾಡುವಂತೆ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......