ನವದೆಹಲಿ -
ಉತ್ತರ ಭಾರತದ ಪ್ರಮುಖ ಸಾಂಪ್ರದಾಯಿಕ ಹಬ್ಬ ಗಳಲ್ಲಿ ಒಂದಾದ ಛತ್ ಪೂಜೆಯ ಪ್ರಯುಕ್ತ ದೆಹಲಿ ಸರ್ಕಾರ ನವೆಂಬರ್ 16, 2026ರಂದು ಸಾರ್ವಜನಿಕ ರಜೆ ಘೋಷಿಸಿದೆ ಈ ಕುರಿತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆದೇಶ ಹೊರಡಿಸಿದ್ದಾರೆ.ರಜೆಯ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮ ಗಳು (ಪಿಎಸ್‌ಯು) ಮುಚ್ಚಿರಲಿವೆ.ಪ್ರತಿಹಾರ್ ಷಷ್ಠಿ ಅಥವಾ ಸೂರ್ಯ ಷಷ್ಠಿ ಎಂದೂ ಕರೆಯಲಾಗುವ ಛತ್ ಪೂಜೆಯ ಮಹತ್ವವನ್ನು ಪರಿಗಣಿಸಿಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಕೆಲವು ಸಂಸ್ಥೆಗಳು ಅಥವಾ ಕಚೇರಿಗಳಿಗೆ ಮಾತ್ರ ಅನ್ವಯವಾಗುವ ರಜೆ ವ್ಯವಸ್ಥೆ ಇದ್ದರೆ, ಇದೀಗ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಛತ್ ಪೂಜೆಯು ಮುಖ್ಯವಾಗಿ ಸೂರ್ಯ ದೇವರು ಮತ್ತು ಛಠಿ ಮೈಯಾ ಅವರಿಗೆ ಸಮರ್ಪಿತವಾದ ಹಬ್ಬವಾಗಿದೆ. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಈ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ದೆಹಲಿ ಯಲ್ಲಿಯೂ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶ ಮೂಲದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರು ವುದರಿಂದ ಛತ್ ಹಬ್ಬಕ್ಕೆ ವಿಶೇಷ ಮಹತ್ವವಿದೆ.
2026ರಲ್ಲಿ ಛತ್ ಹಬ್ಬದ ಆಚರಣೆ ನವೆಂಬರ್ 13ರಿಂದ ಆರಂಭವಾಗಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ಕಠಿಣ ಉಪವಾಸ, ಪೂಜೆ, ಸೂರ್ಯನಿಗೆ ಅರ್ಘ್ಯ ಅರ್ಪಿಸು ವುದು ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನ ಗಳನ್ನು ನೆರವೇರಿಸುತ್ತಾರೆ.ಹಬ್ಬದ ಕೊನೆಯ ದಿನ ವಾದ ನವೆಂಬರ್ 16ರಂದು ಬೆಳಗಿನ ಜಾವ ಉದಯಿಸುವ ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಮೂಲಕ ವ್ರತವನ್ನು ಪೂರ್ಣಗೊಳಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಅಂದು ಸಾರ್ವಜನಿಕ ರಜೆ ಘೋಷಿಸಿದೆ.
ವಿವಿಧ ರಾಜ್ಯಗಳು, ಭಾಷೆ ಮತ್ತು ಸಂಸ್ಕೃತಿಗಳ ಜನರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಛತ್ ಹಬ್ಬವು ಜನರನ್ನು ಒಗ್ಗೂಡಿ ಸುವ ಪ್ರಮುಖ ಸಾಂಸ್ಕೃತಿಕ ಆಚರಣೆಯಾಗಿದೆ. ಪ್ರತಿಯೊಬ್ಬ ಭಕ್ತರೂ ಯಾವುದೇ ತೊಂದರೆಯಿಲ್ಲದೆ, ಸಂಪೂರ್ಣ ಶ್ರದ್ಧೆ, ಗೌರವ ಮತ್ತು ಮನಸ್ಸಿನ ಶಾಂತಿ ಯಿಂದ ಹಬ್ಬವನ್ನು ಆಚರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದಿದ್ದಾರೆ ನವೆಂಬರ್ 16ರಂದು ಸಾರ್ವಜನಿಕ ರಜೆ ಘೋಷಿಸಿರುವುದರಿಂದ ಛತ್ ಪೂಜೆಯಲ್ಲಿ ಪಾಲ್ಗೊಳ್ಳುವ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಬೆಳಗಿನ ಜಾವ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಯಾವುದೇ ಕೆಲಸದ ಒತ್ತಡ ವಿಲ್ಲದೆ ಭಾಗವಹಿಸಲು ಅವಕಾಶ ದೊರೆಯಲಿದೆ.
ದೆಹಲಿ ಸರ್ಕಾರವು ಹಬ್ಬದ ಸಿದ್ಧತೆಗಳ ಮೂಲಕ ಭಕ್ತರಿಗೆ ಸುರಕ್ಷಿತ ಮತ್ತು ಸ್ವಚ್ಛ ವಾತಾವರಣ ಒದಗಿ ಸಲು ಮುಂದಾಗಿದೆ. ಘಾಟ್ ಗಳಲ್ಲಿ ಮೂಲ ಸೌಕರ್ಯ ಗಳ ಅಭಿವೃದ್ಧಿ, ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯ, ಸಿಸಿಟಿವಿ ನಿಗಾ ಮತ್ತು ನಿರಂತರ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.ಛತ್ ಪೂಜೆ ಯನ್ನು ದೆಹಲಿಯ ಸಾಂಸ್ಕೃತಿಕ ಐಕ್ಯತೆಯ ಹಬ್ಬವಾಗಿ ಪರಿಗಣಿಸಿರುವ ಸರ್ಕಾರ, ನವೆಂಬರ್ 16ರಂದು ಸಾರ್ವಜನಿಕ ರಜೆ ಘೋಷಿಸುವುದರ ಜೊತೆಗೆ ಭಕ್ತರ ಅನುಕೂಲಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ.....