ಮಂಗಳೂರು -
ಮಗುವಿಗೆ ಜನ್ಮ ನೀಡಿದ SSLC ವಿದ್ಯಾರ್ಥಿನಿ ಪೋಕ್ಸೊ ಕೇಸ್ ದಾಖಲು ಹೌದು ಇಂತಹ ದೊಂದು ಆತಂಕದ ಘಟನೆ ಯೊಂದು ಮಂಗಳೂರಿನಲ್ಲಿ ನಡೆದಿದೆ ದಕ್ಷಿಣ ಕನ್ನಡದ ವಿಟ್ಲ ಪಟ್ಟಣದ ಶಾಲೆ ಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ.
ಕೇರಳ ಮೂಲದ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ 2025 ಡಿಸೆಂಬರ್ 21ರಂದು ವಿದ್ಯಾರ್ಥಿ ನಿಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸೆಗಿದ್ದ ಎಂದು ಆರೋಪಿಸಲಾಗಿದೆ.ಸೆಪ್ಟೆಂಬರ್ 8ರಂದು ವಿದ್ಯಾರ್ಥಿನಿ ಆರೋಗ್ಯದಲ್ಲಿ ಏರುಪೇರಾ ಗಿದ್ದು, ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಸೆ. 9ರಂದು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.ಕೇರಳ ಮೂಲದ ಬಾಲಕ ಮೊಬೈಲ್ ಮೂಲಕ ಬಾಲಕಿ ಪರಿಚಯಿಸಿಕೊಂಡು ನಂತರ ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು.....