ಭುವನೇಶ್ವರ –
ಹೊಸ ವರ್ಷಕ್ಕೆ ಒಡಿಶಾ ಸರ್ಕಾರ ಶಿಕ್ಷಕರಿಗೆ ಬಂಪರ್ ಗಿಪ್ಟ್ ನೀಡಿದೆ ಹೌದು ಉಡುಗೊರೆಯಾಗಿ ಒಡಿಶಾ ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇಕಡಾ 50 ರಷ್ಟು ಹೆಚ್ಚಿಸಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಹತ್ವದ ನಿರ್ಣಯ ವನ್ನು ತೆಗೆದುಕೊಂಡಿದ್ದಾರೆ.ಇನ್ನೂ ಈ ನಿರ್ಧಾರದಿಂದಾಗಿ ಜನವರಿ 1, 2022 ರಿಂದ ಜಾರಿಗೆ ತರಲಾಗುವುದು ಮತ್ತು 33,038 ಕಿರಿಯ ಶಿಕ್ಷಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ(CMO)ಯ ಪ್ರಕಾರ 13,324 ಗುತ್ತಿಗೆ ಮತ್ತು 19,714 ಸರ್ಕಾರಿ ಶಿಕ್ಷಕರ ವೇತನವನ್ನು ಶೇ. 50 ರಷ್ಟು ಹೆಚ್ಚಿಸಲಾಗಿದೆ.7,400 ಇದ್ದ ಗುತ್ತಿಗೆ ಕಿರಿಯ ಶಿಕ್ಷಕರ ವೇತನವನ್ನು 11,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು 9,200 ರೂಪಾಯಿ ಇದ್ದ ಸರ್ಕಾರಿ ಕಿರಿಯ ಶಿಕ್ಷಕರ ವೇತನವನ್ನು 13,800 ರೂ.ಗೆ ಹೆಚ್ಚಿಸಲಾಗಿದೆ.ಈ ವೇತನ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 168 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ ಇದು ಒಡಿಶಾ ರಾಜ್ಯದ ಮಹತ್ವದ ನಿರ್ಧಾರವಾದರೆ ಇನ್ನೂ ನಮ್ಮ ರಾಜ್ಯದಲ್ಲಿ ಮಾತ್ರ ಸರಿಯಾಗಿ ವರ್ಗಾವಣೆ ಭಾಗ್ಯ ನಮ್ಮ ಶಿಕ್ಷಕರಿಗೆ ಸಿಗುತ್ತಿಲ್ಲ ಇದರಿಂದಾಗಿ ನಾಡಿನ ಶಿಕ್ಷಕರು ಸಮಸ್ಯೆ ಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ.