ಹುಬ್ಬಳ್ಳಿ –
ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಇದು ನಾನು ಹೇಳ್ತಾ ಇಲ್ಲ ಇದನ್ನು ಮಾಧ್ಯಮಗಳೇ ಹೇಳ್ತಾ ಇವೆ ಹಿಗೇಂದು ಬಿಜೆಪಿ ರಾಜಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿಗೆ ಪಕ್ಷವನ್ನೇ ಸಂಭಾಳಿಸಲು ಆಗುತ್ತಿಲ್ಲ ಎಂದರು
ಸೋನಿಯಾ ಗಾಂಧಿಗೂ ಆಗುತ್ತಿಲ್ಲ.ಇತಂಹವರು ನಮ್ಮ ಪ್ರಧಾನಿ ಬಗ್ಗೆ ಟೀಕೆ ಮಾಡ್ತಾರೆ.ಕಾಂಗ್ರೆಸ್ ನವರು ಪಕ್ಷ ಕಟ್ಟಲು ವಿಲವಿಲ ಒದ್ದಾಡುತ್ತಿದ್ದಾರೆ.ಇತಂಹವರು ನಮ್ಮ ಪ್ರಧಾನಿ ಬಗ್ಗೆ ಹೆಬ್ಬಟ್ಟು ಅಂತಾ ಟೀಕೆ ಮಾಡ್ತಾರೆ ಎಂದರು.
ನಮ್ಮ ಪ್ರಧಾನಿ 7 ವರ್ಷದ ಆಡಳಿತದಲ್ಲಿ ಬಲಿಷ್ಠ ರಾಷ್ಟ್ರ ವನ್ನಾಗಿ ಮಾಡಿದ್ದಾರೆ.ಪಾಕಿಸ್ತಾನ ಹಾಗೂ ಚೀನಾಗೆ ಆಗಾಗ ತಕ್ಕ ಉತ್ತರ ನೀಡಿದ್ದಾರೆಂದರು.