ಬೆಂಗಳೂರು –
ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಮುಂಬ ರುವ ವಿಧಾನಸಭೆ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ತಲುಪಬೇಕು ಎಂದು ಎಐಸಿಸಿ ನಿಕಟ ಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿದರು.ಕೆಪಿಸಿಸಿ ನೂತನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಭ್ಯರ್ಥಿಗಳು,ನಾಯಕರು ಬದ್ಧತೆಯಿಂದ ಕೆಲಸ ಮಾಡ ಬೇಕು.ರಾಜ್ಯದಲ್ಲಿ ಯಾರು ಕೆಲಸ ಮಾಡುತ್ತಾರೆ ಎಂಬುದು ಜನರಿಗೆ ತಿಳಿದಿದೆ ಎಂದು ಹೇಳಿದರು.ಹಿಂದಿನ ಇತಿಹಾಸ, ಪಕ್ಷ ನಿಷ್ಠೆ, ಸದ್ಯ ಆತನ ಕೆಲಸ ಆಧರಿಸಿ ಚುನಾವಣೆಗೆ ಟಿಕೆಟ್ ನೀಡಲಾಗುವುದು ಎಂದರೆ

ಚುನಾವಣಾ ಹೋರಾಟ ಮತ್ತು ಗೆಲುವು ಗುರಿಯಾಗಿರ ಬೇಕು. 156 ಸೀಟ್ ಗೆಲ್ಲಲೇ ಬೇಕು.ಯುವಕರನ್ನು ತರಬೇತಿಗೊಳಿಸಬೇಕೆಂದರು.ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ.ನೋಟು ಅಮಾನೀಕರಣ, ಜಿಎಸ್ಟಿಎ, ಕೃಷಿ ಕಾನೂನುಗಳಿಂದ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ.ಸಣ್ಣ ವ್ಯಾಪಾರಿಗಳು ಸರ್ವನಾಶವಾಗಿದ್ದಾರೆ. ಮೋದಿ ದೇಶದಲ್ಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡು ವಂತಿಲ್ಲ.ರಾಜ್ಯದಲ್ಲಿ ಶೇ.40ರಷ್ಟು ಭ್ರಷ್ಟಾಚಾರವಿದೆ. ಪ್ರಧಾನಿ ಮೊದಿಯವರು ಬಂದು ಇಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನ ನಗುತ್ತಾರೆ ಎಂದರು.ಜನಸಾಮಾನ್ಯ ರನ್ನು ಸುಲಿಗೆ ಮಾಡಿ ಒಂದೆರಡು ಉದ್ಯಮಿಗಳನ್ನು ಉದ್ದಾರ ಮಾಡಿದ್ದಾರೆ.ಮತ ಕ್ರೂಢೀಕರಣಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ಅವರು ಸಮಾಜ ಹೊಡೆಯುತ್ತಿ ದ್ದಾರೆ.ನಾವು ಜೋಡಿಸುತ್ತಿದ್ದೇವೆ ಎಂದು ರಾಹುಲ್ ಹೇಳಿದರು.ರಾಜ್ಯದಲ್ಲಿ 70 ಲಕ್ಷ ಸದಸ್ಯತ್ವ ನೋಂದಣಿ ಯಾಗಿದೆ. ಹೊಸ ಕಾಂಗ್ರೆಸ್ ಪಕ್ಷ ನೋಡಬೇಕಿದೆ. 156 ಸ್ಥಾನಗಳಿಗಿಂತ ಕಡಿಮೆಯಾಗಬಾರದು. ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರೂ ಒಟ್ಟಾದರೆ ಅಷ್ಟು ಗೆಲ್ಲುವುದು ಕಷ್ಟವೇನಲ್ಲ ಎಂದು ತಿಳಿಸಿದರು. ಹೊಸದು ರ್ಗದ ಜಿಪಂ ಸದಸ್ಯೆ ಸವಿತಾರಘು,ಸಿ.ವೈ.ಶಂಕರ್, ಹೊಸಕೊಟೆ ನಾಣಿ ಸೇರಿದಂತೆ ಹಲವರೊಂದಿಗೆ ರಾಹುಲ್ ಗಾಂಧಿ ವಚ್ರ್ಯುವಲ್ ಮೂಲಕ ಸಮಾಲೋಚನೆ ನಡೆಸಿದರು.