ಕತಿಹಾರ್ –
ಬಿಸಿಯೂಟ ನೀಡದೆ ಮಸಾಜ್ ಮಾಡಲು ಹೇಳಿದ ಶಿಕ್ಷಕರು ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಶಾಲೆ ಧ್ವಂಸ
ಮಧ್ಯಾಹ್ನದ ಊಟದ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಗಲಾಟೆ ನಡೆಸಿ ಶಾಲೆಯ ಆಸ್ತಿಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ.ಕತಿಹಾರ್ನ ಬರ್ಸೋಯ್ ಬ್ಲಾಕ್ನ ಬರಿಯುಲ್ ನಗರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ.
ಗಲಾಟೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ದ್ದಾರೆ.ಶಿಕ್ಷಕರು ಪಾಠ ಮಾಡುವ ಬದಲು ಮಸಾಜ್ ಮಾಡು ವಂತೆ ಒತ್ತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಿದ್ಯಾರ್ಥಿಗಳು ಶಾಲೆಯನ್ನು ಧ್ವಂಸ ಗೊಳಿಸುತ್ತಿರುವುದನ್ನು ಕಾಣಬಹುದು.ಶಾಲೆಯ ಆವರ ಣದಲ್ಲಿ ಗಲಾಟೆ ಸೃಷ್ಟಿಸಲು ಕೆಲ ಗ್ರಾಮಸ್ಥರು ವಿದ್ಯಾರ್ಥಿ ಗಳನ್ನು ಪ್ರಚೋದಿಸಿದ್ದಾರೆ ಎಂದು ಸ್ಥಳೀಯ ಮಾಧ್ಯ ಮಗಳು ವರದಿ ಮಾಡಿವೆ.ಜಿಲ್ಲಾಡಳಿತವು ಈ ಪ್ರಕರಣ ವನ್ನು ಗಂಬೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶಿಸಿದೆ.