This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಶಾಲಾ ಮಕ್ಕಳು ಮಾತ್ರೆಗಳನ್ನು ಸೇವಿಸಿದ ಬಳಿಕ ಅಸ್ವಸ್ಥ ಆಸ್ಪತ್ರೆಗೆ ದಾಖಲು…..

WhatsApp Group Join Now
Telegram Group Join Now

ಸವದತ್ತಿ (ಬೆಳಗಾವಿ ಜಿಲ್ಲೆ)

ಬಿಸಿಯೂಟ ಸೇವಿಸಿದ ಬಳಿಕ ಕಬ್ಬಿಣಾಂಶದ ಮಾತ್ರೆ ತಗೆದುಕೊಂಡ ನಂತರ ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಿಡೋ ಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಸೋಮವಾರ ನಿನ್ನೆ ಕಬ್ಬಿಣಾಂಶ(ಪಾಲಿಕ್‌ ಆಸಿಡ್‌)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55 ಮಕ್ಕಳು ಅಸ್ವಸ್ಥಗೊಂ ಡಿದ್ದಾರೆಎಲ್ಲರನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಟ್ಟು 239 ಮಕ್ಕಳು ಬಿಸಿಯೂಟ ಮಾಡಿದರು.ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ ನೀಡು ವುದು ರೂಢಿ.ಅದೇ ರೀತಿ ಈ ಸೋಮವಾರ ಕೂಡ ಎಲ್ಲಾ ಮಕ್ಕಳಿಗೂ ಊಟದ ಬಳಿಕ ಮಾತ್ರೆ ನೀಡಲಾಗಿತ್ತು.ಸಂಜೆ 7.30ರ ಸುಮಾರಿಗೆ ಹಲವು ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು.ಅದರಲ್ಲಿ 55 ವಿದ್ಯಾರ್ಥಿ- ವಿದ್ಯಾರ್ಥಿನಿ ಯರು ತೀವ್ರ ನೋವು ಉಂಟಾಗಿದ್ದರಿಂದ ತಕ್ಷಣ ಅವರನ್ನು ಆಂಬುಲೆನ್ಸ್‌ ಸಹಾಯದಿಂದ ತಾಲ್ಲೂಕು ಆಸ್ಪತ್ರೆಗೆ ದಾಖಲಿ ಸಲಾಯಿತು.

ಆಸ್ಪತ್ರೆಗೆ ಬಂದ ಎಲ್ಲ ಮಕ್ಕಳಿಗೂ ಸಲೈನ್‌ ಹಚ್ಚಲಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ.ಮಕ್ಕಳು ಅಸ್ವಸ್ಥರಾಗಲು ಮಧ್ಯಾಹ್ನದ ಊಟ ಕಾರಣವೋ ಅಥವಾ ಮಾತ್ರೆ ಕಾರ ಣವೋ ಇನ್ನೂ ಗೊತ್ತಾಗಿಲ್ಲ.ರಾತ್ರಿಯಿಡೀ ಮಕ್ಕಳ ಮೇಲೆ ನಿಗಾ ಇಡಲಾಗಿದ್ದು ಈಗಾಗಲೇ ಕೆಲವು ಮಕ್ಕಳು ಚೇತರಿ ಸಿಕೊಂಡಿದ್ದಾರೆ.ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಹೇಳಿದ್ದಾರೆ.ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು 6 ಮತ್ತು 7ನೇ ತರಗತಿಯವರಾಗಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk