ಸೋಮವಾರಪೇಟೆ –
ಹಾರಿ ಹೋದ ಶಾಲೆಯ ಹೆಂಚುಗಳು ತಪ್ಪಿತು ದೊಡ್ಡ ಅವಘಡ – ಶಾಲೆಗೆ ರಜೆ ಘೋಷಣೆ ಯಿಂದ ತಪ್ಪಿತು ದೊಡ್ಡ ಅವಘಡ ನಿಟ್ಟಿಸಿರು ಬಿಟ್ಟ ಶಾಲೆಯ ಶಿಕ್ಷಕರು,ಮಕ್ಕಳು ಹೌದು
ಗಾಳಿಗೆ ಶಾಲೆಯ ಹೆಂಚುಗಳು ಹಾರಿ ಹೋದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ.ಹೌದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಈ ಒಂದು ಅವಘಡ ನಡೆದಿದೆ.ಬಿರುಸಿನ ಗಾಳಿಗೆ ಗ್ರಾಮ ದಲ್ಲಿನ ಸರ್ಕಾರಿ ಶಾಲೆಯಲ್ಲಿನ ಹೆಂಚುಗಳು ಹಾರಿ ಹೋಗಿದ್ದು ಹೋಬಳಿಯಾದ್ಯಂತ ಮಳೆ ಆರಂಭ ಜೋರಾಗಿದ್ದು
ಹೀಗಾಗಿ ಗಾಳಿಯ ಆರ್ಭಟವೂ ಕೂಡಾ ತೀವ್ರವಾಗಿದೆ.ಹೀಗಾಗಿ ಮಾಲಂಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 150 ಕ್ಕಿಂತ ಹೆಚ್ಚಿನ ಹೆಂಚುಗಳು ಹಾರಿ ಹೋಗಿವೆ.ಇಲ್ಲಿ ಒಂದು ವಾರದಿಂದ ಬಾರಿ ಮಳೆಯಾಗುತ್ತಿದ್ದು ಮಾಲಂಬಿ ಶಾಲಾ ಹಿಂಭಾಗದ ಗೋಡೆ ಮಳೆಗೆ ಸೋರುತ್ತಿದೆ
ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕ ಎದುರಿಸುತ್ತಿದ್ದಾರೆ. ಇದರ ನಡುವೆ ಶಾಲೆಗೆ ರಜೆ ಇದ್ದಿದ್ದರಿಂದ ದೊಡ್ಡ ಅನಾಹುತ ವೊಂದು ತಪ್ಪಿದಂತಾಗಿದ್ದು ಶಾಲೆಯ ಶಿಕ್ಷಕರು ಮಕ್ಕಳು ನಿಟ್ಟಿಸಿರು ಬಿಟ್ಟಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಸೋಮವಾರಪೇಟೆ…..