ಬೆಂಗಳೂರು –
ಕರ್ನಾಟಕದ ವಿವಿಧ ನಿಗಮ ಮಂಡಳಿಗಗಳಿಗೆ ಹೊಸ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಪಕ್ಷ ನಿಷ್ಠ ನಾಯಕ ರುಗಳಿಗೆ ಮಣೆ ಹಾಕಲಾಗಿದೆ.ಅಲ್ಲದೆ ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವರಿಗೆ ಮುಖಂಡರುಗಳಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆ.
ಇತ್ತೀಚೆಗೆ ಅಷ್ಟೇ 47 ನಿಗಮ ಮಂಡಳಿಗಳ ಪೈಕಿ 22 ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು.ಶಾಸಕರು,ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು.ಇದೀಗ ಆ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿದ್ದು ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವುದರ ವಿವರ ಈ ಕೆಳಗಿನಂತಿದೆ.
ನಿಗಮ-ಮಂಡಳಿಗೆ ಹೊಸ ಅಧ್ಯಕ್ಷರ ಪಟ್ಟಿ
1. ಸಫಾಯಿ ಕರ್ಮಚಾರಿ ನಿಗಮ – ಕೆ.ಪಿ.ವೆಂಕಟೇಶ್
2. ಅಲೆಮಾರಿ ಅಭಿವೃದ್ಧಿ ನಿಗಮ-ದೇವೇಂದ್ರನಾಥ್.ಕೆ
3. ಕಾಡುಗೊಲ್ಲ ಅಭಿವೃದ್ಧಿ ನಿಗಮ-ಚಂಗಾವರ ಮಾರಣ್ಣ
4. ವಸ್ತುಪ್ರದರ್ಶನ ಪ್ರಾಧಿಕಾರ-ಮಿರ್ಲೆ ಶ್ರೀನಿವಾಸ
5. ಮಾವು ಅಭಿವೃದ್ಧಿ ನಿಗಮ-ಎಂ.ಕೆ.ವಾಸುದೇವ್
6. ದ್ರಾಕ್ಷಿ, ವೈನ್ ಬೋರ್ಡ್ – N.M.ರವಿ ನಾರಾಯಣ ರೆಡ್ಡಿ
7. ರೇಷ್ಮೆ ಮಾರಾಟ ಮಂಡಳಿ – ಬಿ.ಸಿ.ನಾರಾಯಣ ಸ್ವಾಮಿ
8. ಲಿಂಬೆ ಅಭಿವೃದ್ಧಿ ಮಂಡಳಿ-ಚಂದ್ರಶೇಖರ ಕವಟಗಿ
9. ಗೇರು ಅಭಿವೃದ್ಧಿ ನಿಗಮ-ಮಣಿರಾಜ ಶೆಟ್ಟಿ
10.ಪಶ್ಚಿಮ ಘಟ್ಟಗಳ ಕಾರ್ಯಪಡೆ – ಗೋವಿಂದ ನಾಯ್ಕ್
11. ಮೈಸೂರು ಮೃಗಾಲಯ ಪ್ರಾಧಿಕಾರ-M.ಶಿವಕುಮಾರ್
12. ಅರಣ್ಯ ಅಭಿವೃದ್ಧಿ ನಿಗಮ-ರೇವಣ್ಣಪ್ಪ ಕೋಳಗಿ
13. ಜೀವ ವೈವಿದ್ಯ ಮಂಡಳಿ – ರವಿಕಾಳಪ್ಪ
14. ಕುರಿ, ಉಣ್ಣೆ ಅಭಿವೃದ್ಧಿ ನಿಗಮ-ಧರ್ಮಣ್ಣ ದೊಡ್ಡಮನೆ
15. ಮೀನುಗಾರಿಕೆ ಅಭಿವೃದ್ಧಿ ನಿಗಮ-A.V.ತೀರ್ಥರಾಮ
16. ಪೇಂಟ್ಸ್, ವಾರ್ನಿಷ್ – ರಘು ಕೌಟಿಲ್ಯ
17. ಜವಳಿ ಅಭಿವೃದ್ಧಿ ನಿಗಮ- ವಿರೂಪಾಕ್ಷಗೌಡ
18. ಖಾದಿ, ಗ್ರಾಮೋದ್ಯೋಗ ಮಂಡಳಿ-K.V.ನಾಗರಾಜ್
19. ಕರಕುಶಲ ಅಭಿವೃದ್ಧಿ ನಿಗಮ-ಮಾರುತಿ ಅಷ್ಟಗಿ
20. ತುಂಗಾಭದ್ರ ಯೋಜನೆ (ಕಾಡಾ)-ಕೊಲ್ಲಾ ಶೇಷಗಿರಿ ರಾವ್
21. ಕಾವೇರಿ ಜಲಾನಯನ ಯೋಜನೆ-ನಿಜಗುಣರಾಜು
22. ಮದ್ಯಪಾನ ಸಂಯಮ ಮಂಡಳಿ-ಮಲ್ಲಿಕಾರ್ಜುನ ತುಬಾಕಿ