ನವದೆಹಲಿ –
ಕೇಂದ್ರ ಸರ್ಕಾರಿ ನೌಕರರು ಹೊಸ ಉನ್ನತ ವಿದ್ಯಾರ್ಹತೆ ಗಳನ್ನು ಪಡೆಯಬಹುದಾಗಿದ್ದು ಇದಕ್ಕಾಗಿ ಸರ್ಕಾರ ಅವರನ್ನು ಪ್ರೋತ್ಸಾಹಿಸುತ್ತಿದೆ.ಪಿಎಚ್‌ಡಿಯಂತಹ ಉನ್ನತ ಪದವಿಗಳನ್ನು ಪಡೆಯುವ ಉದ್ಯೋಗಿಗಳಿಗೆ, ಪ್ರೋತ್ಸಾಹ ಮೊತ್ತವು ರೂ.30,000 ಕ್ಕಿಂತ ಹೆಚ್ಚಾಗಿರುತ್ತದೆ ಇದನ್ನು ನೀಡಲು ಮುಂದಾಗಿದೆ
ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಸೇವೆಗೆ ಸೇರಿದ ನಂತರ ಉನ್ನತ ವಿದ್ಯಾರ್ಹತೆಗಳನ್ನು ಪಡೆಯುವ ಕೇಂದ್ರ ಸರ್ಕಾರಿ ಉದ್ಯೋಗಿಯು ಕೆಲಸ ಮಾಡುವಾಗ ಉನ್ನತ ಪದವಿಯನ್ನು ಗಳಿಸಿದರೆ ಅವನು ಪ್ರತ್ಯೇಕ ಪ್ರಯೋಜನವನ್ನು ಪಡೆಯುತ್ತಾನೆ.ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು 5 ಪಟ್ಟು ಹೆಚ್ಚಿಸಿದೆ.
ಮೊದಲಿನ ನಿಯಮಗಳ ಪ್ರಕಾರ ಇಲ್ಲಿಯವರೆಗೆ ಉದ್ಯೋ ಗದ ಅವಧಿಯಲ್ಲಿ ಉನ್ನತ ಪದವಿಗಳನ್ನು ಪಡೆದ ಉದ್ಯೋ ಗಿಗಳಿಗೆ 2000 ರೂ.ಗಳಿಂದ 10,000 ರೂ. ನೀಡಲಾ ಗುತ್ತಿತ್ತು.ಸದ್ಯ 2019 ರಿಂದ ಈ ಪ್ರೋತ್ಸಾಹ ಧನವನ್ನು ಕನಿಷ್ಠ 2000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗಿದೆ.
ಪ್ರಸ್ತುತವಾಗಿ ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು 5 ಪಟ್ಟು ಹೆಚ್ಚಿಸಿದೆ. ಪಿಎಚ್.ಡಿ ಮುಂತಾದ ಉನ್ನತ ಪದವಿ ಪಡೆದ ಉದ್ಯೋಗಿ ಗಳಿಗೆ ಪ್ರೋತ್ಸಾಹ ಧನವನ್ನು ರೂ.10,000 ದಿಂದ ರೂ.30,000ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ.